ದೇವರ ಅನುಗ್ರಹವನ್ನು ಹೇಗೆ ಪಡೆಯಬೇಕು ಎಂದು ಕೊನೆ ಗಳಿಗೆಯಲ್ಲಿ ಭೀಷ್ಮರು ವಿವರಿಸಿದ್ದು ಹೇಗೆ ಗೊತ್ತಾ?

ದೇವರ ಅನುಗ್ರಹವನ್ನು ಹೇಗೆ ಪಡೆಯಬೇಕು ಎಂದು ಕೊನೆ ಗಳಿಗೆಯಲ್ಲಿ ಭೀಷ್ಮರು ವಿವರಿಸಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೌರವರ ಪರ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡರೂ ಕೂಡ ಮಹಾ ಭಾರತದಲ್ಲಿ ಅತಿ ಹೆಚ್ಚು ಪ್ರಭಾವ ಬೀರುವ ವ್ಯಕ್ತಿತ್ವದಲ್ಲಿ ಒಬ್ಬ ರಾಗಿರುವುದು ಭೀಷ್ಮ ಪಿತಾಮಹರು. ಬ್ರಹ್ಮಚಾರಿಯಾಗಿ ಜೀವನವನ್ನು ಕಳೆದಿದ್ದ ಭೀಷ್ಮ ಪಿತಾಮಹರು, ಚಿಕ್ಕ ವಯಸ್ಸಿನಿಂದ ಹಿಡಿದು ತಮ್ಮ ಕೊನೆಯ ಗಳಿಗೆಯವರೆಗೂ ಕೂಡ ಜ್ಞಾನವನ್ನು ಸಂಪಾದಿಸುತ್ತ ಇತರರಿಗೆ ಮಾರ್ಗದರ್ಶಿಯಾಗಿ ಇದ್ದರು. ಇನ್ನು ಮಹಾ ಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನ ಮುಂದೆ ಸೋಲನ್ನು ಅನುಭವಿಸಿ ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ತಾವು ಇಹಲೋಕ ತ್ಯಜಿಸಲು ಕಾಯುತ್ತಿದ್ದ ಸಮಯದಲ್ಲಿ ಭೀಷ್ಮ ಪಿತಾಮಹರು ತಮ್ಮ ಜೀವನದ ಉದ್ದಕ್ಕೂ ಕಲಿತಿರುವ ಜೀವನ ಪಾಠವನ್ನು ತಿಳಿಸುವ ನಿರ್ಧಾರ ಮಾಡಿ ಹಲವಾರು ವಿಚಾರಗಳನ್ನು ತಿಳಿಸಿ ಕೊಡುತ್ತಾರೆ. ಹೀಗೆ ತಮ್ಮ ಕೊನೆಗಳಿಗೆಯಲ್ಲಿ ಬಾಣಗಳ ಹಾಸಿಗೆಯ ಮೇಲೆ ಮಲಗಿಕೊಂಡು ಭೀಷ್ಮ ಪಿತಾಮಹರು ಹೇಳಿದ ಒಂದು ಆಸಕ್ತಿದಾಯಕ ವಿಷಯದ ಕುರಿತು ನಾವು ಎಂದು ನಿಮಗೆ ತಿಳಿಸಿಕೊಡುತ್ತೇವೆ. ಇದರಲ್ಲಿ ಭೀಷ್ಮ ಪಿತಾಮಹರು ದೇವರ ಅನುಗ್ರಹವನ್ನು ಯಾವ ರೀತಿ ಪಡೆಯಲು ಸಾಧ್ಯವಾಗುತ್ತದೆ ಎಂಬುದರ ಕುರಿತು ವಿವರಣೆ ನೀಡಿದ್ದಾರೆ.

ಸ್ನೇಹಿತರೇ ಮೊದಲನೆಯದಾಗಿ, ತಮ್ಮ ಬಾಲ್ಯದಿಂದಲೂ ಒಬ್ಬ ಅದ್ಭುತ ಯೋಧರಾಗಿದ್ದ ಭೀಷ್ಮ ಪಿತಾಮಹರು ತಮ್ಮ ಕೊನೆಯ ವರ್ಷಗಳ ಹೊತ್ತಿಗೆ ಯುದ್ಧವನ್ನು ತಪ್ಪಿಸಬೇಕು, ಸಾಧ್ಯವಾದಷ್ಟು ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದನ್ನು ಕಲಿತಿದ್ದರು. ಶಾಂತಿ ಸ್ಥಾಪನೆ ಮಾಡಿದರೇ ಮಾತ್ರ ಜೀವನದ ಎಲ್ಲಾ ಸಮಸ್ಯೆಗಳಿಂದ ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂಬುದನ್ನು ಅರಿತಿದ್ದರು. ಇದೇ ಕಾರಣಕ್ಕಾಗಿ ಸಹವರ್ತಿಗಳ ನಡುವೆ ಪ್ರೀತಿಯನ್ನು ಕಾಪಾಡಿಕೊಳ್ಳಿ, ಯುದ್ಧವನ್ನು ತ್ಯಜಿಸಿ ಇದರಿಂದ ಸರ್ವಶಕ್ತ ಪ್ರಿಯನಿಗೆ ನೀವು ಹತ್ತಿರ ಆಗುತ್ತೀರಾ ಎಂದು ಹೇಳಿದ್ದಾರೆ.

ಇನ್ನು ಎರಡನೆಯದಾಗಿ, ಭೀಷ್ಮ ಪಿತಾಮಹರು ದೇವರ ಅನುಗ್ರಹವನ್ನು ಗೆಲ್ಲಬೇಕಾದರೇ ನೀವು ಸತ್ಯದ ಪರವಾಗಿ ನಿಲ್ಲಬೇಕು ಎನ್ನುತ್ತಾರೆ. ದೇವರು ಇದ್ದಾನೇ, ಆತನ ಶಕ್ತಿಯ ಮುಂದೆ ಬೇರೆ ಯಾರು ಇಲ್ಲ, ನಾವು ಜೀವನದಲ್ಲಿ ಎಷ್ಟೆಲ್ಲ ಮಾಡಿದರು ಕೂಡ ನಮ್ಮ ಕರ್ಮದ ಫಲಗಳು ನಮಗೆ ನೀಡಿರುತ್ತಾನೆ. ಆದ ಕಾರಣದಿಂದ ಒಬ್ಬ ಉತ್ತಮ ಮನುಷ್ಯ ದೇವರ ಅನುಗ್ರಹವನ್ನು ಪಡೆದು ಕೊಳ್ಳಬೇಕಾದರೇ ಸತ್ಯವನ್ನು ಪಾಲಿಸಬೇಕು ಎಂದು ಭೀಷ್ಮ ಪಿತಾಮಹರು ತಿಳಿಸಿದ್ದಾರೆ.

ಇನ್ನು ಮೂರನೆಯದಾಗಿ ಬಹುಶಹ ಈ ಮಾತನ್ನು ಕೌರವರ ನಡೆಗಳಿಂದ ನೋಡಿ ಭೀಷ್ಮ ಪಿತಾಮಹರು ಹೇಳಿರಬಹುದು. ಅದು ಏನೆಂದರೇ, ಯಾವುದೇ ಒಬ್ಬ ವ್ಯಕ್ತಿಯು ಮೋಸ ಮಾಡಿ ತನ್ನ ಜೀವನದಲ್ಲಿ ಏನೇ ಪಡೆದುಕೊಂಡರೂ ಕೂಡ ಅದು ಕೇವಲ ತಾತ್ಕಾಲಿಕ, ತಾತ್ಕಾಲಿಕ ನಡೆ ನಿಮಗೆ ಸಾಕಷ್ಟು ಸಂಪತ್ತನ್ನು ತರಬಹುದು, ಆದರೆ ಕೊನೆಯದಾಗಿ ನ್ಯಾಯ ನೀಡುವುದು ದೇವರು. ಆದ ಕಾರಣ ತಮ್ಮ ಜೀವನದಲ್ಲಿ ಮೋಸವನ್ನು ಮಾಡದೇ ಜೀವನವನ್ನು ಸಾಗಿಸುವ ವ್ಯಕ್ತಿಯು ದೇವರ ಅನುಗ್ರಹವನ್ನು ಪಡೆಯುತ್ತಾನೆ ಎಂಬುದು ಭೀಷ್ಮ ಪಿತಾಮಹರು ಹೇಳಿರುವ ಮಾತು.

ನಾಲ್ಕನೆಯದಾಗಿ ಕೋಪ, ಸ್ನೇಹಿತರೇ ದ್ವಾಪರ ಯುಗದಲ್ಲಿ ಅನೇಕ ರಾ’ಕ್ಷಸರು ಹಾಗೂ ಮಹಾನ್ ವ್ಯಕ್ತಿಗಳು ಕೇವಲ ತಮ್ಮ ಕೋಪದಿಂದ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಕೋಪವೆಂಬುದು ರಾ’ಕ್ಷಸರ ಗುಣ, ಮಹಾ ಭಾರತ ಯುದ್ಧ ನಡೆಯಲು ಕೋಪ ಬೇ ಕಾರಣ. ಶಾಂತಿ ಮಾತುಕತೆ ನಡೆಸಿದ್ದರೇ ಮಹಾಭಾರತ ಯುದ್ಧವೇ ನಡೆಯುತ್ತಿರಲಿಲ್ಲ, ಆದಕಾರಣ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡವನು ತನ್ನ ಅರ್ಧ ಜೀವನದಲ್ಲಿ ಯುದ್ಧವನ್ನು ಗೆದ್ದಿರುತ್ತಾನೆ, ಅಂತಹ ವ್ಯಕ್ತಿ ಜೀವನದಲ್ಲಿ ಹೆಚ್ಚು ಸ್ನೇಹವನ್ನು ಬೆಳೆಸಿರುತ್ತಾರೆ. ಆದಕಾರಣ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಜೀವನ ಸಾಗಿಸಿ ಎಂದು ಭೀಷ್ಮ ಪಿತಾಮಹರು ಹೇಳುತ್ತಾರೆ.