ಜೀವನ ಪೂರ್ತಿ ಮಾತ್ರೆಗಳ ಮೊರೆಹೋಗುವ ಬದಲು ಈ ಹೂವನ್ನು ಬಳಸಿ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೇವಲ ಮೂವತ್ತು ವಯಸ್ಸಿನ ಆಸುಪಾಸಿನಲ್ಲಿಯೇ ಮಧುಮೇಹ ಸಮಸ್ಯೆಗೆ ಗುರಿಯಾಗುತ್ತಾರೆ. ಇದು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೇ ದೇಹಕ್ಕೆ ಬಹಳ ಸಮಸ್ಯೆಗಳು ಉಂಟಾಗುತ್ತವೆ, ಆದ ಕಾರಣದಿಂದ ಇಂದಿನ ಅದೆಷ್ಟು ಜನರು ಸಕ್ಕರೆ ಸೇವಿಸುವುದನ್ನು ಬಿಟ್ಟು ಕಹಿ ಅಡುಗೆ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಪಾಶ್ಚಿಮಾತ್ಯದ ಯಾವುದೇ ಔಷಧಿಗಳು ಸಂಪೂರ್ಣವಾಗಿ ಮಧುಮೇಹವನ್ನು ತೆಗೆದುಹಾಕಲು ಸಾಧ್ಯವಾದ ಉದಾಹರಣೆಗಳು ತೀರಾ ಕಡಿಮೆ, ಬಹಳ ಶೀಘ್ರವಾಗಿ ಗುರುತಿಸಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಅದರಲ್ಲಿಯೂ ಕೆಲವು ಜನರಿಗೆ ಮಾತ್ರ ಮಧುಮೇಹ ಸಂಪೂರ್ಣವಾಗಿ ಗುಣವಾಗುತ್ತದೆ, ಇಷ್ಟೆಲ್ಲಾ ಆದರೂ ಕೂಡ ಅವರು ಹೆಚ್ಚಿನ ಸಿಹಿಯನ್ನು ಸೇವಿಸುವ ಹಾಗಿಲ್ಲ. ತಮ್ಮ ಇಡೀ ಜೀವನದ ಉದ್ದಕ್ಕೂ ದೇಹ ದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಕೊಂಡು ಜೀವನ ಸಾಗಿಸಬೇಕು.

ಹೀಗಿರುವಾಗ ಭಾರತೀಯ ವೈಜ್ಞಾನಿಕ ಪದ್ಧತಿಯಲ್ಲಿ ಹಲವಾರು ವರ್ಷಗಳಿಂದ ದೇಹಕ್ಕೆ ಹಲವಾರು ಲಾಭಗಳನ್ನು ತಂದುಕೊಡುವ ಬಾಳೆ ಮರದ ಹೂವು ಇದೀಗ ಮಧುಮೇಹಕ್ಕೆ ರಾಮಬಾಣ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ನಾವೆಲ್ಲರೂ ಸಾಮಾನ್ಯವಾಗಿ ಬಾಳೆಹಣ್ಣನ್ನು ದೇಹಕ್ಕೆ ಶಕ್ತಿ ನೀಡುವ ಪದಾರ್ಥವನ್ನು ಆಗಿ ಸೇವಿಸುತ್ತೇವೆ, ಬಾಳೆಹಣ್ಣಿನಿಂದ ಹಲವಾರು ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಬಾಳೆ ಹೂಗಳಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಲ್ಲ ಶಕ್ತಿ ಇದೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.

ಹೌದು ಸ್ನೇಹಿತರೇ ಇತ್ತೀಚಿನ ವರದಿಯ ಪ್ರಕಾರ ಮಧುಮೇಹವನ್ನು ಹೊಂದಿರುವ ಯಾರೇ ಆಗಲಿ ಬಾಳೆ ಹೂವುಗಳನ್ನು ಕಡ್ಡಾಯವಾಗಿ ಸೇವಿಸಬೇಕಾಗುತ್ತದೆ, ಯಾಕೆಂದರೆ ಬಾಳೆ ಹೂವುಗಳಲ್ಲಿ ಗ್ಲೈಸೆಮಿಕ್ ಎಂಬ ಅಂಶವು ಬಹಳ ಕಡಿಮೆ ಪ್ರಮಾಣದಲ್ಲಿ ಇದೆ. ಇದು ಕಾರ್ಬೋಹೈಟ್ರೇಟ್ ಗಳಿಂದ ಕೂಡಿರುವ ಕಾರಣ ಸಾಕಷ್ಟು ಸಮಯದವರೆಗೆ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ, ನಿಮ್ಮ ದೇಹದಲ್ಲಿ ಇರುವ ಗ್ಲೂಕೋಸನ್ನು ಇದು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ನಿಮ್ಮ ದೇಹಕ್ಕೆ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಕಾರಣ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಜೀವನಪೂರ್ತಿ ಮಾತ್ರೆ ಸೇವಿಸುವ ಬದಲು ಮಧುಮೇಹವನ್ನು ಬಹಳ ಸುಲಭವಾಗಿ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದಾಗಿದೆ. ಬಹಳ ರುಚಿಕರವಾಗಿರುವ ಈ ಹೂವುಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಕೂಡ ನೀಡುತ್ತವೆ.

Post Author: Ravi Yadav