ನೀವು ನಿಂತು ನೀರು ಕುಡಿಯುತ್ತೀರಾ?? ಹಾಗಿದ್ದರೇ ಈ ತಜ್ಞರ ವರದಿಯನ್ನು ಕೇಳಿ.

ನೀವು ನಿಂತು ನೀರು ಕುಡಿಯುತ್ತೀರಾ?? ಹಾಗಿದ್ದರೇ ಈ ತಜ್ಞರ ವರದಿಯನ್ನು ಕೇಳಿ.

ನಮಸ್ಕಾರ ಸ್ನೇಹಿತರೇ, ಜೀವನಕ್ಕೆ ಅತ್ಯಗತ್ಯವಾದ ನೀರು ಮಾನವನ ದೇಹದಲ್ಲಿ ಶೇಕಡ 75 ರಷ್ಟು ಸ್ಥಳವನ್ನು ಆವರಿಸಿದೆ. ಅದೇ ಕಾರಣಕ್ಕಾಗಿ ವೈದ್ಯಶಾಸ್ತ್ರ ದಿನಕ್ಕೆ ಕನಿಷ್ಠ 6 ಲೀಟರ್ಗಳಷ್ಟು ನೀರನ್ನು ಕುಡಿಯಬೇಕು ಎಂದು ಹೇಳುತ್ತಿದೆ. ಇದೀಗ ಯಾವ ಸಮಯದಲ್ಲಿ, ಯಾವ ರೀತಿ ನೀರನ್ನು ಕುಡಿಯಬೇಕು, ಯಾವ ರೀತಿ ನೀರನ್ನು ಕುಡಿಯಬಾರದು ಎಂಬುದನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಎಂದಿನಂತೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಆಚರಣೆಯನ್ನು ಇದೀಗ ವೈಜ್ಞಾನಿಕ ಕಾರಣಗಳ ಮೂಲಕ ವಿವರಣೆ ನೀಡಿರುವ ವೈದ್ಯರು ಯಾವ ರೀತಿ ನೀರು ಕುಡಿದರೇ ಉತ್ತಮ ಎಂದು ವಿವರಿಸಿದ್ದಾರೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ನಮ್ಮ ಭಾರತೀಯ ಪದ್ಧತಿಯಲ್ಲಿ ಅತಿಥಿಗಳು ಮನೆಗೆ ಬಂದ ತಕ್ಷಣ ಅಥವಾ ಮನೆಯವರು ಯಾರಾದರೂ ಹೊರಗಡೆ ಹೋಗಿ ಮನೆಗೆ ಬಂದ ಕೂಡಲೇ ಕುಳಿತುಕೊಳ್ಳಿ ನೀರನ್ನು ಕುಡಿಯಿರಿ ಎನ್ನುತ್ತಾರೆ. ಅಷ್ಟೇ ಅಲ್ಲ ಯಾರಾದರೂ ಇದ್ದಕ್ಕಿದ್ದಂತೆ ಹೋಗಿ ನೀರು ಕೇಳಿದರೂ ಕೂಡ ಕೂತುಕೊಳ್ಳಿ ನೀರು ಕುಡಿದು ಹೋಗಿ ಎನ್ನುತ್ತಾರೆ. ಇದರಲ್ಲಿ ಏನು ವಿಶೇಷತೆ ಇದೆ ಎಂದು ಕೊಳ್ಳಬೇಡಿ ನಮ್ಮ ಹಿರಿಯರು ಅದ್ಯಾವ ಕಾರಣಕ್ಕೆ ಈ ರೀತಿ ಮಾಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಪದ್ಧತಿಯನ್ನು ಇದೀಗ ಅನುಸರಿಸಿ ಎಂದು ತಜ್ಞರು ವೈಜ್ಞಾನಿಕ ಕಾರಣಗಳ ಮೂಲಕ ವಿವರಣೆ ನೀಡಿದ್ದಾರೆ.

ಹೌದು ಸ್ನೇಹಿತರೇ ಸಾಮಾನ್ಯವಾಗಿ ನೀರನ್ನು ನಿಂತುಕೊಂಡು ಕುಡಿಯಬಾರದು ಎಂದು ವೈದ್ಯರು ಇದೀಗ ಬಹಿರಂಗಪಡಿಸಿದ್ದಾರೆ ಅಷ್ಟೇ ಅಲ್ಲಾ ಯಾವ ಸಮಯದಲ್ಲಿ ನೀರು ಕುಡಿದರೇ ಉತ್ತಮ ಎಂದು ಕೂಡ ವಿವರಣೆ ನೀಡಿದ್ದಾರೆ. ಇನ್ನು ಒಂದೆರಡು ಬಾರಿ ನಿಂತುಕೊಂಡು ನೀರು ಕುಡಿದರೇ ಏನು ಸಮಸ್ಯೆಗಳು ಕಾಣಿಸುವುದಿಲ್ಲ ಆದರೆ ಕ್ರಮೇಣ ನಿಂತುಕೊಂಡು ನೀರು ಕುಡಿಯುತ್ತಿದ್ದರೇ ಈ ಕೆಳಗಿನ ತೊಂದರೆಗಳನ್ನು ನೀವು ಎದುರಿಸಬಹುದು ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ.

ಮೊದಲಿಗೆ ಅನ್ನನಾಳದ ಸ’ಮಸ್ಯೆ, ಸ್ನೇಹಿತರೇ ನೀವು ನಿಂತುಕೊಂಡು ನೀರು ಕುಡಿಯುವಾಗ ನೀವು ಕುಡಿದ ನೀರು ನೇರವಾಗಿ ಅನ್ನನಾಳದ ಮೂಲಕ ವೇಗವಾಗಿ ನಿಮ್ಮ ದೇಹದ ಒಳ ಹೋಗುತ್ತದೆ. ಅನ್ನನಾಳದಲ್ಲಿ ನೀರು ವೇಗವಾಗಿ ಹರಿಯುವ ಕಾರಣ ನಿಮ್ಮ ಅನ್ನನಾಳದ ಸ್ಪಿಂಕ್ಟರ್ ಎಂಬ ಅಂಶದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ ಈ ರೀತಿ ಮಾಡುವುದರಿಂದ ನಿಮ್ಮ ನರಮಂಡಲದ ಮೇಲು ಕೂಡ ಪರಿಣಾಮ ಬೀರುತ್ತದೆ.

ಇನ್ನು ಎರಡನೆಯದಾಗಿ ನೀವು ನಿಂತು ನೀರು ಕುಡಿಯುವ ಸಮಯದಲ್ಲಿ ಕೆಲವೊಮ್ಮೆ ನಿಮ್ಮ ಕಿಡ್ನಿಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಒಮ್ಮೆಲೆ ನೀರು ಕಿಡ್ನಿಗೆ ಹರಿದಾಗ ಕಿಡ್ನಿಯು ನೀರನ್ನು ಸರಿಯಾಗಿ ಸಂಸ್ಕರಣೆ ಮಾಡುವುದಿಲ್ಲ, ಇದರಿಂದ ನಿಮ್ಮ ಮೂತ್ರ ನಾಳಗಳಿಗೆ ಅನಗತ್ಯವಾದ ಕಲ್ಮಶ ಸೇರಿಕೊಂಡು ನಿಮ್ಮ ರಕ್ತದ ಒಳಗೆ ಈ ಅಂಶಗಳು ಮಿಶ್ರ ವಾಗುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ.

ಇನ್ನು ಮೂರನೆಯದಾಗಿ ಹೊಟ್ಟೆಯ ನೋ’ವು ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ನೀವು ನಿಂತುಕೊಂಡು ಮೇಲೆ ನೇರವಾಗಿ ನೀರು ಕುಡಿದ ಬಳಿಕ ಅನ್ನನಾಳ ಮತ್ತು ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡ ಸೃಷ್ಟಿಯಾಗುತ್ತದೆ, ಇದರಿಂದ ಹೊಟ್ಟೆಯಲ್ಲಿರುವ ಆಮ್ಲೀಯ ಜಠರ ರಸದ ಜೊತೆ ಮಿಶ್ರಣ ಗೊಳ್ಳುವ ಸಾಧ್ಯತೆ ಇದೆ, ಇದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.

ಇನ್ನು ನಾಲ್ಕನೆಯದಾಗಿ ಸ್ನೇಹಿತರೇ ನೀವು ಗಮನಿಸಿರಬಹುದು ನಿಂತುಕೊಂಡು ನೀರು ಕುಡಿಯುವ ಸಂದರ್ಭದಲ್ಲಿ ನಿಮಗೆ ಬಾಯಾರಿಕೆಯಾಗಿದ್ದರೇ ಆ ಬಾಯಾರಿಕೆಯು ತಣಿಯುವುದಿಲ್ಲ, ಇದನ್ನು ಇದೀಗ ವೈದ್ಯರು ಖಚಿತಪಡಿಸಿದ್ದು ಕುಳಿತುಕೊಂಡು ನೀರು ಕುಡಿದರೇ ನಿಮ್ಮ ಬಾಯಾರಿಕೆ ತಣಿಯುತ್ತದೆ ಎಂದಿದ್ದಾರೆ. ಇನ್ನು ಕೊನೆಯದಾಗಿ ನಿಂತು ನೀರು ಕುಡಿಯುವಾಗ ದೇಹದಲ್ಲಿನ ದ್ರವಗಳಲ್ಲಿ ವ್ಯತ್ಯಯ ಉಂಟಾಗಿ ಸಂಧಿವಾತದ ಸಮಸ್ಯೆ ನಿಮಗೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಬಹಳ ಹೆಚ್ಚಾಗಿರುತ್ತದೆ ಎಂದು ಇದೀಗ ವರದಿಗಳು ಹೊರಬಿದ್ದಿವೆ.

ಇನ್ನು ಯಾವ ಸಮಯದಲ್ಲಿ ನೀರು ಕುಡಿಯಬೇಕು ಎಂಬುದರ ಬಗ್ಗೆ ಹೇಳುವುದಾದರೇ ನೀವು ಸ್ಥಾನ ಮಾಡುವ ಮುನ್ನ ನೀರು ಕುಡಿಯುವುದು ಉತ್ತಮ ಎಂದು ವೈದ್ಯಶಾಸ್ತ್ರ ಹೇಳುತ್ತದೆ, ಇದರಿಂದ ನಿಮ್ಮ ದೇಹದ ನರಗಳು ಸಡಿಲಗೊಂಡು ರಕ್ತದ ಒತ್ತಡ ಕಡಿಮೆಯಾಗಿ ನಿಮ್ಮ ಆರೋಗ್ಯ ವೃದ್ಧಿಸುತ್ತದೆ. ಆದರೆ ನೆನಪಿನಲ್ಲಿಡಿ ನೀವು ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿದ್ದರೇ ದಯವಿಟ್ಟು ಸ್ನಾನಕ್ಕೂ ಮುನ್ನ ತಣ್ಣೀರನ್ನು ಕುಡಿಯಬೇಡಿ.

ಇನ್ನು ಊಟದ ಸಮಯದಲ್ಲಿ ನೀರು ಕುಡಿಯುವ ಬದಲು ಊಟಕ್ಕೂ ಮುನ್ನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಜೀರ್ಣ ಕ್ರಿಯೆ ಬಹಳ ಉತ್ತಮವಾಗಿ ನಡೆಯುತ್ತದೆ, ಸರಿಸುಮಾರು ನಿಮ್ಮ ಸಮಯದ ಆಧಾರದ ಮೇಲೆ ಊಟ ಮಾಡುವ 20 ಅಥವಾ 30 ನಿಮಿಷಗಳ ಮುನ್ನ ನೀರು ಕುಡಿಯುವುದು ಬಹಳ ಉತ್ತಮವಾಗಿದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ಒಂದು ವೇಳೆ ನೀವು ಊಟಕ್ಕೂ ಮುನ್ನ ನೀರು ಕುಡಿದಿದ್ದರೇ ಊಟ ಆದ ಮೇಲೆ ಕೂಡ 20 ಅಥವಾ 30 ನಿಮಿಷಗಳನ್ನು ಬಿಟ್ಟು ನೀರು ಕುಡಿಯಿರಿ. ಇದರಿಂದ ಜೀರ್ಣಗೊಂಡ ಆಹಾರವನ್ನು ಕರುಳುಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಪ್ರಮುಖವಾಗಿ ಒಂದೇ ಗುಟುಕಿನಲ್ಲಿ ಯಾವುದೇ ಕಾರಣಕ್ಕೂ ನೀರು ಕುಡಿಯುವ ಪ್ರಯತ್ನ ಮಾಡಬೇಡಿ, ಸಣ್ಣ ಲೋಟದಲ್ಲಿ ನೀರು ಇದ್ದರೂ ಕೂಡ ಕನಿಷ್ಠ ಮೂರು ಅಥವಾ ನಾಲ್ಕು ಗುಟುಕಿಳಿಗೆ ಕುಡಿಯುವುದು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ಎಂದು ವೈದ್ಯಶಾಸ್ತ್ರ ಹೇಳುತ್ತದೆ.