ತೇಜಸ್ವಿ ಸೂರ್ಯ ರವರಿಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ ! ಸಿಟಿ ರವಿ ರವರಿಗೂ ಸಿಹಿಸುದ್ದಿ !

ನಮಸ್ಕಾರ ಸ್ನೇಹಿತರೇ, ಕಳೆದ ಎಂಟು ತಿಂಗಳ ಹಿಂದೆ ಅಮಿತ್ ಶಾ ರವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಪ್ರಮುಖ ನಾಯಕರಾದ ಜೆ ಪಿ ನಡ್ಡಾ ರವರನ್ನು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. ಇದೀಗ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಜೆ ಪಿ ನಡ್ಡಾ ರವರು ಬಿಹಾರದ ಚುನಾವಣೆಯ ಕುರಿತು ಗಮನ ಹರಿಸುತ್ತಿರುವ ಸಂದರ್ಭದಲ್ಲಿಯೇ ಇಡೀ ದೇಶದಲ್ಲಿನ ವಿವಿಧ ಹುದ್ದೆಗಳಿಗೆ ಆಯ್ಕೆ ನೇಮಕಾತಿ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು ವಿವಿಧ ರಾಜ್ಯಗಳ ಪ್ರಮುಖ ನಾಯಕರನ್ನು ಕೈಬಿಡಲಾಗಿದೆ, ಯುವಕರಿಗೂ ಕೂಡ ಆದ್ಯತೆ ನೀಡಲಾಗಿದ್ದು ತೇಜಸ್ವಿ ಸೂರ್ಯ ರವರಿಗೆ ಮಹತ್ವದ ಹುದ್ದೆಯನ್ನು ನೀಡಲಾಗಿದೆ. ಇನ್ನು ಅಮಿತ್ ಶಾ ರವರ ಸಂದರ್ಭದಲ್ಲಿ ಇದ್ದ ಹಲವಾರು ನಾಯಕರನ್ನು ಕೈಬಿಡಲಾಗಿದ್ದು, ಅಷ್ಟೇ ಅಲ್ಲದೇ ರಾಜ್ಯ ರಾಜಕೀಯದಲ್ಲಿದ್ದ ಪ್ರಮುಖ ನಾಯಕರು ಇದೀಗ ರಾಷ್ಟ್ರೀಯ ತಂಡ ಸೇರ್ಪಡೆಯಾಗಿದ್ದಾರೆ.

ಹೌದು ಸ್ನೇಹಿತರೇ, ಇಷ್ಟು ದಿವಸ ರಾಜ್ಯ ರಾಜಕೀಯದಲ್ಲಿ ಶಾಸಕನಾಗಿ ಹಾಗೂ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ ಟಿ ರವಿ ರವರಿಗೆ ಜೆ ಪಿ ನಡ್ಡಾ ರವರು ಹೊಸ ಹುದ್ದೆ ನೀಡಿದ್ದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಈಗಾಗಲೇ ಮಂತ್ರಿ ಸ್ಥಾನ ಪಡೆದು ಕೊಂಡಿರುವ ಕಾರಣ ಸಿಟಿ ರವಿ ರವರು ಬಿಜೆಪಿ ಪಕ್ಷದ ಒಬ್ಬರಿಗೆ ಒಂದೇ ಸ್ಥಾನ ಎಂಬ ಸೂತ್ರದಂತೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ, ಮಂತ್ರಿ ಸ್ಥಾನವನ್ನು ಆಯ್ಕೆ ಮಾಡಿಕೊಂಡರೇ ರಾಜ್ಯ ರಾಜಕೀಯದಲ್ಲಿ ಉಳಿಯಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಆಯ್ಕೆ ಮಾಡಿಕೊಂಡರೇ ರಾಷ್ಟ್ರೀಯ ರಾಜಕಾರಣಕ್ಕೂ ಪಾದಾರ್ಪಣೆ ಮಾಡಿದಂತೆ ಆಗುತ್ತದೆ.

ಇನ್ನು ಮೊದಲ ಬಾರಿಗೆ ಬಿಜೆಪಿ ಪಕ್ಷದ ಭದ್ರಕೋಟೆ ಬೆಂಗಳೂರು ದಕ್ಷಿಣದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಕಂಡು ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ತೇಜಸ್ವಿ ಸೂರ್ಯ ರವರು ಇದೀಗ ಬಿಜೆಪಿ ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಅಮಿತ್ ಶಾ ರವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಮ್ ಮಾಧವ್, ಮುರಳಿಧರ ರಾವ್, ಅನಿಲ್ ಜೈನ್ ರವರನ್ನು ಕೈಬಿಡಲಾಗಿದ್ದು ಕೇಂದ್ರ ಸಚಿವರಾಗಿರುವ ಪ್ರಕಾಶ್ ಜಾವೇಡ್ಕರ್ ಅವರನ್ನು ಕೂಡ ಪಕ್ಷದ ರಾಷ್ಟ್ರೀಯ ವಕ್ತಾರ ಸ್ಥಾನದಿಂದ ಕೈಬಿಡಲಾಗಿದೆ. ಅಷ್ಟೇ ಅಲ್ಲದೆ ಧರ್ಮೇಂದ್ರ ಪ್ರಧಾನ್ ಅವರನ್ನು ಕೂಡ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಲಾಗಿದೆ.

Post Author: Ravi Yadav