ತರಕಾರಿ ಕತ್ತರಿಸುವ ನಿಮ್ಮ ವಿಧಾನ ತಪ್ಪಾಗಿರಬಹುದೇ? ಕತ್ತರಿಸುವಾಗ ‌ಪೌಷ್ಟಿಕಾಂಶಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ತರಕಾರಿಗಳು ನಮ್ಮ ದೇಹಕ್ಕೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿವೆ. ತರಕಾರಿಗಳು ಜೀವಸತ್ವಗಳು, ಖನಿಜಗಳು ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿವಿಧ ರೀತಿಯ ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಆರೋಗ್ಯ ಪ್ರಯೋಜನಗಳಿವೆ. ಹೀಗಿರುವಾಗ ನಾವು ತರಕಾರಿ ಕತ್ತರಿಸುವ ವಿಧಾನ ಹಾಗೂ ಸಿಪ್ಪೆ ಸುಲಿಯುವ ವಿಧಾನವು ತರಕಾರಿಗಳ ಪೋಷಕಾಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇಲ್ಲವಾದಲ್ಲಿ ಬನ್ನಿ ನಾವು ತರಕಾರಿ ಕತ್ತರಿಸುವ ವಿಧಾನ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ನೀವು ಯಾವ ರೀತಿ ತರಕಾರಿಗಳನ್ನು ಕತ್ತರಿಸಬೇಕು ಮತ್ತು ಸಿಪ್ಪೆಯನ್ನು ಹೇಗೆ ತೆಗೆಯಬೇಕು ಎಂಬುದನ್ನು ತಿಳಿಸಿ ಕೊಡುತ್ತೇವೆ.

ಸ್ನೇಹಿತರೇ ಯಾವುದೇ ತರಕಾರಿಯನ್ನಾಗಿರಲಿ ನೀವು ಕತ್ತರಿಸುವ ಮುನ್ನ ದಯವಿಟ್ಟು ನಿಮ್ಮ ಕೈಯಿಂದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಸಿಪ್ಪೆ ತೆಗೆದರೆ ತೊಳೆದಂತೆ ಎಂದು ಹೇಳಿ ಯಾವುದೇ ಕಾರಣಕ್ಕೂ ಅನಗತ್ಯವಾಗಿ ತರಕಾರಿಗಳ ಸಿಪ್ಪೆಯನ್ನು ತೆಗೆಯಬೇಡಿ. ಕೆಲವು ತರಕಾರಿಗಳ ಸಿಪ್ಪೆ ತೆಗೆದ ನಂತರವೇ ಬಳಸಬೇಕಾಗಿರುತ್ತದೆ. ಅಂತಹ ತರಕಾರಿಗಳನ್ನು ತೊಳೆದು ಸಿಪ್ಪೆ ತೆಗೆಯಿರಿ. ಇನ್ನು ಕೆಲವು ತರಕಾರಿಗಳನ್ನು ನೀವು ಕತ್ತರಿಸಿದ ಬಳಿಕ ತೊಳೆಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತೀರಾ, ಆದರೆ ಅದು ತಪ್ಪು. ಯಾಕೆಂದರೆ ತರಕಾರಿ ನ ಮೇಲ್ಮೈ ಭಾಗದಲ್ಲಿ ಇರುವ ಬ್ಯಾಕ್ಟೀರಿಯಾಗಳನ್ನು ತೆಗೆಯಲು ನೀವು ತರಕಾರಿ ಕತ್ತರಿಸಿದ ಬಳಿಕ ನೀರಿಗೆ ಹಾಕುತ್ತೀರಾ, ಇದರಿಂದ ತರಕಾರಿ ಒಳಗಡೆ ಇರುವ ಪೌಷ್ಟಿಕಾಂಶಗಳು ನೀರಿನ ಜೊತೆ ಹರಿದು ಹೋಗುತ್ತವೆ.

ಇನ್ನು ತರಕಾರಿ ಸಿಪ್ಪೆಯನ್ನು ನೀವು ಕೈಯಿಂದ ತೆಗೆಯಿರಿ. ಕೈ ಮತ್ತು ಚಾಕು ಬಳಸಬಹುದು. ಆದರೆ ಯಾವುದೇ ಕಾರಣಕ್ಕೂ ಇತರ ಯಂತ್ರಗಳ ಸಹಾಯದಿಂದ ತರಕಾರಿ ಸಿಪ್ಪೆ ಯನ್ನು ಬಿಡಿಸಿದ ಬೇಡಿ. ಅನೇಕ ಸಂಶೋಧನೆಗಳಲ್ಲಿ ತಿಳಿದು ಬಂದಿರುವ ವಿಷಯವೇನೆಂದರೆ ಕೈಯಿಂದ ತರಕಾರಿಯ ಸಿಪ್ಪೆ ಸುಲಿಯುವುದು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಯಂತ್ರಗಳ ಸಹಾಯದಿಂದ ಸಿಪ್ಪೆ ಸುಲಿಯುವ ಕಾರಣ ಅದರಲ್ಲಿರುವ ಪೋಷಕಾಂಶಗಳು ಬಹುತೇಕ ಸಿಪ್ಪೆಯ ಜೊತೆ ಹೋಗುತ್ತವೆ ಮತ್ತು ಉತ್ತಮ ಬ್ಯಾಕ್ಟೀರಿಯಾಗಳು ಕೂಡ ಯಂತ್ರದಲ್ಲಿಯೇ ಉಳಿಯುತ್ತವೆ.

ಇನ್ನು ಸಂಶೋಧನೆಯ ಪ್ರಕಾರ ತರಕಾರಿ ಕತ್ತರಿಸುವ ಸಂದರ್ಭದಲ್ಲಿ ಮಂದವಾದ ಚಾಕುವನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಇದರಿಂದ ತರಕಾರಿ ಕೆಡುತ್ತದೆ, ಮಂದವಾದ ಚಾಕುವಿನ ಬ್ಲೇಡ್ ತರಕಾರಿಯ ವಿದ್ಯುತ್ಛಕ್ತಿ ಸೋರಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದಾಗಿ ವಿದ್ಯುತ್ಛಕ್ತಿ ಶೀಘ್ರವಾಗಿ ಸೋರಿಕೆ ಯಾಗುತ್ತದೆ. ಇದರಿಂದ ತರಕಾರಿಗಳಲ್ಲಿರುವ ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಕರಗುತ್ತದೆ. ಆದ ಕಾರಣದಿಂದ ಯಾವುದೇ ಕಾರಣಕ್ಕೂ ತರಕಾರಿ ಸಿಪ್ಪೆ ತೆಗೆಯುವುದಕ್ಕೆ ಅಥವಾ ಕತ್ತರಿಸಲು ಮಂದವಾದ ಚಾಕುವನ್ನು ಬಳಸಬೇಡಿ.

ಇನ್ನು ಪ್ರಮುಖವಾಗಿ ತರಕಾರಿಗಳನ್ನು ಕತ್ತರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಹಳ ಸಣ್ಣ ತುಂಡುಗಳಾಗಿ ಕತ್ತರಿಸಬೇಡಿ, ನೀವು ಹೆಚ್ಚು ಸಣ್ಣಗೆ ಮಾಡಿದಂತೆ ಹೆಚ್ಚು ಪೋಷಕಾಂಶಗಳು ಕಳೆದುಹೋಗುತ್ತವೆ. ತುಂಬಾ ಸಣ್ಣಗೆ ಕತ್ತರಿಸಿದ ತರಕಾರಿಗಳು, ದಪ್ಪ ತುಂಡುಗಳಾಗಿ ಕತ್ತರಿಸಿದ ತರಕಾರಿಗಳಿಗಿಂತ ಬೇಗನೆ ಕ್ಷೀಣಿಸಲು ಪ್ರಾರಂಭಿಸುತ್ತವೆ. ಸಣ್ಣಗೆ ಕತ್ತರಿಸಿದ ತರಕಾರಿಗಳು ತಮ್ಮ ತೇವಾಂಶ ಮತ್ತು ನೈಸರ್ಗಿಕ ಬಣ್ಣವನ್ನು ಬಹುಬೇಗನೆ ಕಳೆದುಕೊಳ್ಳುತ್ತವೆ. ಇದರಿಂದ ಅವುಗಳಲ್ಲಿರುವ ಪೋಷಕಾಂಶಗಳು ಕೂಡ ಕಡಿಮೆಯಾಗುತ್ತವೆ. ಇನ್ನು ಒಂದು ವೇಳೆ ನೀವು ತರಕಾರಿಯನ್ನು ಕತ್ತರಿಸಿ ಸಂಗ್ರಹ ಮಾಡಬೇಕು ಎಂದುಕೊಂಡರೇ ಅವುಗಳನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ಸಂಗ್ರಹಿಸಿ.

Post Author: Ravi Yadav