ಆರೋಗ್ಯಕರ ಜೀವನದ ರಹಸ್ಯವನ್ನು ಹುಣಸೆ ಯಲ್ಲಿ ಮರೆಮಾಡಲಾಗಿದೆ ! ಎಷ್ಟೆಲ್ಲ ಲಾಭಗಳಿವೆ ಗೊತ್ತಾ??

ಆರೋಗ್ಯಕರ ಜೀವನದ ರಹಸ್ಯವನ್ನು ಹುಣಸೆ ಯಲ್ಲಿ ಮರೆಮಾಡಲಾಗಿದೆ ! ಎಷ್ಟೆಲ್ಲ ಲಾಭಗಳಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಹುಣಸೆ ಹಣ್ಣು ಹುಳಿ ಮತ್ತು ಸಿಹಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಅದೇ ಸಮಯದಲ್ಲಿ ಹುಣಸೆ ಹಣ್ಣು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುತ್ತದೆ, ಭಾರತೀಯ ಪಾಕ ಪದ್ಧತಿಯಲ್ಲಿ ಹುಣಸೆ ಹಣ್ಣನ್ನು ಪ್ರಮುಖವಾಗಿ ಪ್ರತಿನಿತ್ಯದ ಅಡುಗೆಗಳಲ್ಲಿ ಬಳಸುತ್ತಾರೆ. ಇತ್ತೀಚಿಗೆ ಯುವಕರು ಮತ್ತು ಯುವತಿಯರು ಹೊರಗಿನ ಆಹಾರಗಳನ್ನು ಅಭ್ಯಾಸ ಮಾಡಿಕೊಂಡಿರುವ ಕಾರ್ಯಗಳ ಅವರಿಗೆ ಹುಣಸೆ ಹಣ್ಣು ಎದ್ದ ತಕ್ಷಣ ಪಾನಿಪೂರಿಯಲ್ಲಿ ನೀರನ್ನು ತಯಾರಿಸಲು ಹುಳಿಗಾಗಿ ಹುಣಸೆ ಹಣ್ಣು ಬಳಸಲಾಗುತ್ತದೆ ಎಂದು ನೆನಪಿಸಿಕೊಳ್ಳುತ್ತಾರೆ. ಇನ್ನು ಬಹುತೇಕ ಚಟ್ನಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳಲ್ಲಿ ಹುಣಸೆ ಹಣ್ಣನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಆದರೆ ಇತ್ತೀಚೆಗೆ ಕೇವಲ ಹುಳಿಗಾಗಿ ಯಾಕೆ ಹುಣಸೆ ಹಣ್ಣನ್ನು ಬಳಸಬೇಕು ಎಂದು ಜನರು ಅದಕ್ಕಾಗಿಯೇ ಕಂಪನಿಗಳು ಪ್ಯಾಕ್ ಮಾಡಿರುವ ಕೆಲವೊಂದು ರಾಸಾಯನಿಕ ಮಿಶ್ರಿತ ಸಾಸ್ ಗಳನ್ನು ಬಳಸುತ್ತಾರೆ. ಹುಳಿಗಾಗಿ ಹುಣಸೆ ಹಣ್ಣನ್ನು ಸಂಸ್ಕರಿಸಿ ಬಳಸುವುದು ಯಾಕೆ ಎಂಬುದು ಇತ್ತೀಚಿನ ಜನರ ಲೆಕ್ಕಾಚಾರ. ಆದರೆ ಸ್ನೇಹಿತರೇ ಕೇವಲ ಭಾರತದಲ್ಲಿ ಬೆಳೆಯಲಾಗುತ್ತಿದ್ದ ಹುಣಸೆ ಹಣ್ಣನ್ನು ಇಂದು ಮೆಕ್ಸಿಕೋ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಕೂಡ ಹೆಚ್ಚಿನ ಮಟ್ಟದಲ್ಲಿ ಬೆಳೆಯಲಾಗುತ್ತದೆ ಎಂದರೇನು ಅದರ ಲಾಭಗಳನ್ನು ನೀವೇ ಊಹಿಸಿಕೊಳ್ಳಿ. ಕೇವಲ ಊಹೆ ಯಾಕೆ ಬನ್ನಿ ನಾವೇ ಇಂದು ನಮ್ಮ ದೇಹಕ್ಕೆ ಹುಣಸೆ ಹಣ್ಣು ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ಹೇಳುತ್ತೇವೆ.

ಮೊದಲನೆಯದಾಗಿ ಹುಣಸೆ ಹಣ್ಣಿನಲ್ಲಿ ಮಾನವನ ದೇಹಕ್ಕೆ ಅತ್ಯಗತ್ಯವಾಗಿರುವ ಹಲವಾರು ಪೋಷಕಾಂಶಗಳು ಕಾಣುತ್ತವೆ, ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಕಂಡುಬರುತ್ತದೆ. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದಷ್ಟೇ ಅಲ್ಲದೆ ಕಣ್ಣಿನ ಸಮಸ್ಯೆಗಳು, ಶೀತ ಮತ್ತು ಕಾಮಾಲೆಗಳ ಚಿಕಿತ್ಸೆಯಲ್ಲಿ ಹುಣಸೆ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ನೀವು ಕ್ರಮೇಣ ಹುಣಸೆ ಹಣ್ಣು ಸೇವಿಸುತ್ತಿದ್ದರೆ ಮೇಲಿನ ಯಾವುದೇ ಸಮಸ್ಯೆಗಳು ನಿಮಗೆ ಸಾಮಾನ್ಯವಾಗಿ ಕಾಣಿಸುವುದಿಲ್ಲ.

ಇನ್ನು ಎರಡನೆಯದಾಗಿ ನಿಮ್ಮ ದೇಶದ ಜೀರ್ಣಾಂಗ ವ್ಯವಸ್ಥೆಯು ನಿಮ್ಮ ದೇಹದ ಒಟ್ಟಾರೆ ಬೆಳವಣಿಗೆಯ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಬಹುಶಃ ನಿಮಗೆಲ್ಲರಿಗೂ ತಿಳಿದೇ ಇದೆ. ನೀವು ಹುಣಸೆ ಹಣ್ಣನ್ನು ನಿಯಮಿತವಾಗಿ ನಿಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ದೇಹಕ್ಕೆ ಪ್ರಮುಖ ಎನಿಸಿರುವ ಜೀರ್ಣಾಂಗದ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ. ಯಾಕೆಂದರೆ ಹುಣಸೆ ಹಣ್ಣಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣದ ಅಂಶಗಳು, ಪೊಟ್ಯಾಶಿಯಂ ಮತ್ತು ಫೈಬರ್ ಅಂಶಗಳು ಹೇರಳವಾಗಿ ಸಿಗುತ್ತವೆ. ಅದೇ ಕಾರಣಕ್ಕಾಗಿ ಹುಣಸೆ ಹಣ್ಣನ್ನು ಬಳಸುವುದರಿಂದ ಅಜೀರ್ಣ, ಮಲಬದ್ಧತೆ, ಸೆಳೆತ ಮತ್ತು ಹೊಟ್ಟೆಯ ಭಾರದ ಯಾವುದೇ ಸಮಸ್ಯೆಗಳು ನಿಮಗೆ ಕಾಣಿಸುವುದಿಲ್ಲ.

ಇನ್ನು ಮೂರನೆಯದಾಗಿ ಹುಣಸೇ ರಸ ನಿಮ್ಮ ತೂಕ ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹುಣಸೆ ಹಣ್ಣಿನ ರಸದಲ್ಲಿ ಬಹಳಷ್ಟು ಹೈಡ್ರಾಕ್ಸಿಲ್ ಆಮ್ಲ ಕಂಡು ಬರಲಿದ್ದು, ದೇಹದಲ್ಲಿ ಉತ್ಪತ್ತಿಯಾಗುವ ಕೊಬ್ಬನ್ನು ಕರಗಿಸಲು ಈ ಆಮ್ಲ ಬಹಳ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ದೇಹದ ತೂಕವನ್ನು ವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಕೊನೆಯದಾಗಿ ಸ್ನೇಹಿತರೇ ನೀವು ಆಶ್ಚರ್ಯ ಪಡಬಹುದು, ಹುಣಸೆ ರಸವನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿನ ರಕ್ತದೊತ್ತಡ ಕಡಿಮೆಯಾಗಿ, ಕೊಬ್ಬಿನ ಪ್ರಮಾಣ ಕೂಡ ಕಡಿಮೆಯಾಗುವುದರಿಂದ ನಿಮ್ಮಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಅಷ್ಟೇ ಅಲ್ಲದೆ ಹುಣಸೆ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಸಿ ನಿಂದ ನಿಮ್ಮ ದೇಹದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಪರಿಣಾಮಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.