ಶುಂಠಿ ಸೇವನೆಯಿಂದ ರೋಗ ನಿರೋಧಕ ಶಕ್ತಿಯಷ್ಟೇ ಅಲ್ಲಾ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಶುಂಠಿ ಸೇವನೆಯಿಂದ ರೋಗ ನಿರೋಧಕ ಶಕ್ತಿಯಷ್ಟೇ ಅಲ್ಲಾ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಪಾಕ ಪದ್ದತಿಯಲ್ಲಿ ಪ್ರಮುಖ ಮಸಾಲಾ ಪದಾರ್ಥಗಳಲ್ಲಿ ಶುಂಠಿ ಮಹತ್ವದ ಪಾತ್ರವನ್ನು ಪಡೆದುಕೊಂಡಿದೆ. ರುಚಿಗಾಗಿ ಶುಂಠಿಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಯಾವುದೇ ಭಾರತೀಯ ಮಸಾಲಾ ಅಡುಗೆಗಳು ಶುಂಠಿ ಇಲ್ಲದೇ ಅಪೂರ್ಣ. ಇನ್ನು ಕೇವಲ ರುಚಿಯಷ್ಟೇ ಅಲ್ಲಾ, ಆರೋಗ್ಯದ ದೃಷ್ಟಿಯಲ್ಲಿಯೂ ಕೂಡ ಶುಂಠಿ ಮಹತ್ವದ ಪಾತ್ರವಹಿಸುತ್ತದೆ. ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮಗೆ ಅನಾರೋಗ್ಯ ಬರದಂತೆ ತಡೆಯುತ್ತದೆ. ಆದರೆ ಸ್ನೇಹಿತರೇ ಶುಂಠಿ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಮತ್ತಷ್ಟು ಆರೋಗ್ಯ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಬನ್ನಿ ಇಂದು ಶುಂಠಿಯ ಸಂಪೂರ್ಣ ಪ್ರಯೋಜನಗಳ ಬಗ್ಗೆ ನಾವು ತಿಳಿದುಕೊಳ್ಳೋಣ.

ಸ್ನೇಹಿತರೇ ಮೊದಲನೆಯದಾಗಿ ಶುಂಠಿಯು ನಮ್ಮ ದೇಹಕ್ಕೆ ಅತ್ಯಗತ್ಯವಾಗಿರುವ ಉತ್ತಮ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕೆಮ್ಮು, ಸೀತಾ ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳು ಕಡಿಮೆಯಾಗುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಎರಡನೆಯದಾಗಿ ಶುಂಠಿಯನ್ನು ನಾವು ಪಾಕ ಪದ್ಧತಿಯಲ್ಲಿ ಬಳಸುವ ಕಾರಣ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನಮ್ಮ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಶುಂಠಿ ತಡೆಯುತ್ತದೆ, ಅಷ್ಟೇ ಅಲ್ಲದೆ ನಮ್ಮ ದೇಹದಲ್ಲಿನ ಕೀಲುಗಳಲ್ಲಿ ನೋವು ಕಡಿಮೆ ಮಾಡುವ ಶಕ್ತಿಯನ್ನು ಶುಂಠಿ ಹೊಂದಿದೆ. ಇನ್ನು ಹೊಟ್ಟೆಯಲ್ಲಿ ಸೃಷ್ಟಿಯಾಗುವ ಹುಣ್ಣು ತಡೆಯಲು ಶುಂಠಿಯು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಅಷ್ಟೇ ಅಲ್ಲದೇ ಶುಂಠಿಯೂ ನಮ್ಮ ಬಾಯಿಂದ ಬರುವ ದುರ್ವಾಸನೆಯನ್ನು ನಿವಾರಿಸುತ್ತದೆ. ನಮ್ಮ ಬಾಯಿಯಲ್ಲಿ ದುರ್ವಾಸನೆಯನ್ನು ಸೃಷ್ಟಿ ಮಾಡಬಹುದಾದ ಬ್ಯಾಕ್ಟಿರಿಯಾಗಳನ್ನು ಅಂತ್ಯಗೊಳಿಸುವ ಮೂಲಕ ಕೇವಲ ದುರ್ವಾಸನೆಯನ್ನಷ್ಟೇ ಅಲ್ಲದೆ ನಮ್ಮ ಹಲ್ಲುಗಳನ್ನು ಆರೋಗ್ಯವಾಗಿ ರಿಸಲು ಸಹಾಯ ಮಾಡುತ್ತದೆ. ಇನ್ನು ನೀವು ಪ್ರತಿದಿನ ಶುಂಠಿ ರಸವನ್ನು ಸೇವಿಸಿದರೇ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ. ಇದರಿಂದ ಮಧುಮೇಹವನ್ನು ಕೂಡ ನಿಯಂತ್ರಣ ಮಾಡಬಹುದಾಗಿದೆ.

ಇನ್ನು ಜೀರ್ಣಕಾರಿ ಸಮಸ್ಯೆಗಳು ಶುಂಠಿ ಸೇವಿಸುತ್ತಿದ್ದರೆ ಬಹಳ ದೂರವಿರುತ್ತವೆ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಜೀರ್ಣಕ್ರಿಯೆಗೆ ಅಗತ್ಯವಾಗಿ ಇರುವ ಎಲ್ಲಾ ಪೋಷಕಾಂಶಗಳನ್ನು ಶುಂಠಿ ದೇಹಕ್ಕೆ ನೀಡುತ್ತದೆ, ನೀವು ನಿಯಮಿತವಾಗಿ ಶುಂಟಿಯನ್ನು ಸೇವನೆ ಮಾಡುವುದರಿಂದ ಅಜೀರ್ಣ, ಆಮ್ಲೀಯತೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ.