ಶಿವಸೇನಾ ಪಕ್ಷಕ್ಕೆ ಶಾಕ್ ನೀಡಿದ ಬಾಂಬೆ ಹೈಕೋರ್ಟ್ ! ಬಾರಿ ಮುಜುಗರಕ್ಕೆ ಒಳಗಾದ ಉದ್ದವ್ !

ನಮಸ್ಕಾರ ಸ್ನೇಹಿತರೇ, ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದೀಗ ಇಡೀ ದೇಶದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೌದು ಸ್ನೇಹಿತರೇ, ಕಂಗನಾ ರಾವತ್ ರವರ ವಿಚಾರದಲ್ಲಿ ಹಾಗೂ ರಿಪಬ್ಲಿಕ್ ಟಿವಿ ಮಾಧ್ಯಮದೊಂದಿಗೆ ಶಿವಸೇನಾ ಪಕ್ಷ ಹಾಗೂ ರಾಜಕೀಯ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ರಿಪಬ್ಲಿಕ್ ಪಬ್ಲಿಕ್ ಟಿವಿಯ ವರದಿಗಾರರು ಕಂಗನಾ ರಾವತ್ ರವರ ಮನೆಯ ವಿಚಾರವಾಗಿ ಸುದ್ದಿ ವರದಿ ಮಾಡುತ್ತಿರುವ ಸಂದರ್ಭದಲ್ಲಿ ಶಿವಸೇನ ಪಕ್ಷವು ತನ್ನ ರಾಜಕೀಯ ಅಸ್ತ್ರವನ್ನು ಬಳಸಿಕೊಂಡು ಇಬ್ಬರು ವರದಿಗಾರರನ್ನು ಪೊಲೀಸ್ ವಶಕ್ಕೆ ನೀಡಿತ್ತು. ಇದಾದ ಬಳಿಕ ಇಷ್ಟಕ್ಕೆ ಸುಮ್ಮನಾಗದ ಶಿವಸೇನಾ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಗೋಸ್ವಾಮಿ ರವರಿಗೆ ತಕ್ಕ ಪಾಠ ಕಲಿಸಬೇಕು ಎಂಬ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ತಮ್ಮ ಅಧಿಕಾರಣವನ್ನು ಕೇಬಲ್ ಆಪರೇಟರ್ ಗಳಿಗೆ ವಿಚಿತ್ರ ಮಾನವೀಯ ರೀತಿಯಲ್ಲಿ ಆದೇಶ ನೀಡಿತ್ತು.

ಹೌದು ಸ್ನೇಹಿತರೇ, ರಿಪಬ್ಲಿಕ್ ಟಿವಿ ಹಾಗೂ ಅರ್ನಾಬ್ ಗೋಸ್ವಾಮಿ ರವರ ವಿರುದ್ಧ ಬಹಿರಂಗವಾಗಿ ಶಿವಸೇನಾ ಪಕ್ಷದ ಮುಖವಾಣಿ ಪತ್ರಿಕೆಯಲ್ಲಿ ಬರೆದು ವಿವಾದ ಸೃಷ್ಟಿಸಿಕೊಂಡಿದ್ದ ಶಿವಸೇನಾ ಪಕ್ಷ, ಇದಾದ ಬಳಿಕ ಲೋಕಲ್ ಕೇಬಲ್ ನೆಟ್ವರ್ಕ್ ಆಪರೇಟರ್ ಗಳೊಂದಿಗೆ ರಿಪಬ್ಲಿಕ್ ಟಿವಿಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಲೋಕಲ್ ಕೇಬಲ್ ಆಪರೇಟರ್ ಗಳ ನೆಟ್ವರ್ಕ್ನಲ್ಲಿ ಪ್ರಸಾರ ಮಾಡಬಾರದು ಹಾಗೂ ರಿಪಬ್ಲಿಕ್ ಟಿವಿಯ ಜೊತೆ ಪ್ರಸಾರದ ಒಪ್ಪಂದಗಳನ್ನು ರದ್ದು ಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿತ್ತು. ಈ ಕುರಿತು ಎಲ್ಲಾ ಕೇಬಲ್ ನೆಟ್ವರ್ಕ್ ಗಳೊಂದಿಗೆ ಮಾತುಕತೆ ನಡೆಸಿತ್ತು.

ಕೂಡಲೇ ಎಚ್ಚೆತ್ತುಕೊಂಡ ರಿಪಬ್ಲಿಕ್ ಟಿವಿ ಮೀಡಿಯಾ ನೆಟ್ವರ್ಕ್ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿ ಶಿವ ಕೇಬಲ್ ಸೇನಾ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಚಾನಲ್ಗಳು ನಿರ್ಬಂಧ ಮಾಡಲು ಯಾವುದೇ ಸಂಸ್ಥೆಗೆ ಹಕ್ಕಿಲ್ಲ, ಶಿವ ಕೇಬಲ್ ಸೇನಾ ಮಾತು ಕೇಳಿ ಈಗಾಗಲೇ ಪ್ರಸಾರ ನಿಲ್ಲಿಸಿರುವ ಎಲ್ಲಾ ಆಪರೇಟರ್ಗಳು ಈ ಕೂಡಲೇ ಮರುಪ್ರಸಾರ ಆರಂಭಿಸಬೇಕು, ಒಂದು ವೇಳೆ ಈ ರೀತಿಯ ನಿರ್ಣಯಗಳನ್ನು ಕೈಗೊಂಡಿದ್ದರೆ ಶಿವ ಕೇಬಲ್ ಸೇನಾ ವಿರುದ್ಧ ಕಾನೂನು ಕ್ರಮವನ್ನು ಬಹಳ ಸುಲಭವಾಗಿ ತೆಗೆದುಕೊಳ್ಳಬಹುದು. ಮತ್ತೊಮ್ಮೆ ರಿಪಬ್ಲಿಕ್ ಟಿವಿ ಕೋರ್ಟಿನ ಮೆಟ್ಟಿಲೇರಿ ದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ನೋಟಿಸ್ ಜಾರಿ ಮಾಡಿದೆ.

Post Author: Ravi Yadav