ರಾಜೀನಾಮೆ ನೀಡುವ ಮುನ್ನ ಭಾರತಕ್ಕೆ ಕೊನೆಯ ಉಡುಗೊರೆ ನೀಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಜಪಾನ್ ಪ್ರಧಾನಿ ! ಏನು ಗೊತ್ತಾ??

ರಾಜೀನಾಮೆ ನೀಡುವ ಮುನ್ನ ಭಾರತಕ್ಕೆ ಕೊನೆಯ ಉಡುಗೊರೆ ನೀಡಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಜಪಾನ್ ಪ್ರಧಾನಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಹುಶಃ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಜಪಾನ್ ದೇಶದ ಅತಿ ಹೆಚ್ಚು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಶಿಂಜೋ ಅಭೆ ರವರು ಇದೀಗ ಅನಾರೋಗ್ಯದ ಕಾರಣ ತಮ್ಮ ಪದವಿಗೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಮೊದಲಿನಿಂದಲೂ ಭಾರತ ಹಾಗೂ ಜಪಾನ್ ದೇಶದ ಸಂಬಂಧ ಉತ್ತಮವಾಗಿದ್ದರೂ ಕಳೆದ ಆರು ವರ್ಷಗಳಲ್ಲಿ ಜಪಾನ್ ಹಾಗೂ ಭಾರತ ದೇಶದ ಬಾಂಧವ್ಯ ಬಹಳ ಗಟ್ಟಿಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜಪಾನ್ ದೇಶ ಭಾರತಕ್ಕೆ ಬೆಂಬಲ ಸೂಚಿಸುವುದು ಅಷ್ಟೇ ಅಲ್ಲದೇ ಭಾರತದ ಜೊತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ.

ಈ ಎಲ್ಲಾ ಒಪ್ಪಂದಗಳ ಹಿಂದೆ ಜಪಾನ್ ದೇಶದ ಪ್ರಧಾನಿ ಶಿಂಜೋ ಅಭೆರವರು ಇದ್ದಾರೆ. ಅದರಲ್ಲಿಯೂ ಭಾರತದ ಪ್ರಧಾನಿ ನರೇಂದ್ರ ಮೋದಿ ರವರ ಜೊತೆಗೆ ನಿಂತು ಬಹಿರಂಗವಾಗಿ ಭಾರತ ಯಾವುದೇ ನಡೆ ಇಟ್ಟರೂ ನಾವು ಹಿಂದೆ ಮುಂದೆ ಯೋಚನೆ ಮಾಡದೇ ಭಾರತ ದೇಶದ ಬೆಂಬಲಕ್ಕೆ ಎಂತಹ ಸಂದರ್ಭದಲ್ಲಿಯೂ ನಿಲ್ಲಲಿದ್ದೇವೆ ಎಂಬುದನ್ನು ಜಪಾನ್ ದೇಶ ಹಲವಾರು ಬಾರಿ ಸಾಬೀತು ಮಾಡಿದೆ. ಇನ್ನು ಭಾರತ ಹಾಗೂ ಚೀನಾ ದೇಶದ ನಡುವಿನ ವಿಚಾರದಲ್ಲಿಯೂ ಕೂಡ ಭಾರತ ದೇಶಕ್ಕೆ ಬಹಿರಂಗ ಬೆಂಬಲ ಘೋಷಿಸಿ, ಮಿಲಿಟರಿ ಸಹಾಯ ಭಾರತಕ್ಕೆ ಬೇಕಾಗಿಲ್ಲ ಒಂದು ವೇಳೆ ಅಗತ್ಯತೆವಿದ್ದರೇ ನಾವು ಕಳುಹಿಸಲು ಸಿದ್ಧ ಎಂದು ಕೂಡ ಹೇಳಿಕೆ ನೀಡಿತ್ತು. ಭಾರತದ ಜೊತೆ ಇಷ್ಟೆಲ್ಲ ಅವಿನಾಭಾವ ಹೊಂದಲು ಪ್ರಮುಖ ಕಾರಣರಾದ ಶಿಂಜೋ ಅಭೆ ರವರು ಇದೀಗ ಅನಾರೋಗ್ಯದ ಕಾರಣ ರಾಜೀನಾಮೆ ನೀಡುತ್ತಿದ್ದಾರೆ. ಆದರೆ ರಾಜೀನಾಮೆ ನೀಡುವ ಮುನ್ನ ಕೊನೆಯ ಉಡುಗೊರೆಯಾಗಿ ಭಾರತದ ಜೊತೆ ಮಹತ್ವದ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಿಂದ ಭಾರತಕ್ಕೆ ಹಲವಾರು ಲಾಭಗಳಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲಿರುವುದು ಖಚಿತ. ಇದರಿಂದ ಚೀನಾ ದೇಶಕ್ಕೆ ಮತ್ತೊಂದು ಶಾಕ್ ಎದುರಾಗಿರುವುದು ಸುಳ್ಳಲ್ಲ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶವು ನಮ್ಮ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳ ಜೊತೆ ಭಾರತವನ್ನು ತನ್ನ ನೌಕಾಪಡೆಯ ಮೂಲಕ ಸುತ್ತುವರಿಯಲು ಮಿಲಿಟರಿ ಲಾಜಿಸ್ಟಿಕ್ ಒಪ್ಪಂದಕ್ಕೆ ಸಹಿ ಹಾಕಿದೆ. ಶ್ರೀಲಂಕಾದಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಥಿರತೆಯನ್ನು ಬಂಡವಾಳ ಮಾಡಿಕೊಂಡ ಚೀನಾ ದೇಶವು ಒಂದು ವೇಳೆ ಭಾರತದ ವಿರುದ್ಧ ಗೆದ್ದ ನಡೆದರೇ ಅಗತ್ಯದ ಸಂದರ್ಭದಲ್ಲಿ ಚೀನಾ ದೇಶದ ಬಂದರುಗಳನ್ನು ಆಹಾರ, ನೀರು ಮತ್ತು ಪೆಟ್ರೋಲಿಯಂ ಅಂತಹ ವಸ್ತುಗಳನ್ನು ತುಂಬಿಸಿಕೊಳ್ಳಲು ಬಳಸಬಹುದು ಎಂಬ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನು ಬಾಂಗ್ಲಾದೇಶ, ಮಯನ್ಮಾರ್ ದೇಶಗಳ ಜೊತೆಗೂ ಕೂಡ ಇದೇ ರೀತಿಯ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲು ಮಾತುಕತೆ ನಡೆಸುತ್ತಿದೆ. ಇದನ್ನು ಕಂಡ ನರೇಂದ್ರ ಮೋದಿರವರು, ಚೀನಾ ದೇಶ ಭಾರತವನ್ನು ಸುತ್ತುವರೆಯುವುದನ್ನು ಗಮನಿಸಿ ನಾವು ಚೀನಾ ದೇಶವನ್ನು ಸುತ್ತುವರೆಯೋಣ ಎಂದು ಈಗಾಗಲೇ ಫ್ರಾನ್ಸ್, ದಕ್ಷಿಣ ಕೊರಿಯಾ, ಸಿಂಗಪುರ, ರಷ್ಯಾ ಸೇರಿದಂತೆ ಇನ್ನೂ ಹಲವಾರು ರಾಷ್ಟ್ರಗಳ ಜೊತೆ ಈ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರೆ.

ಇದೀಗ ಚೀನಾ ದೇಶವನ್ನು ದಕ್ಷಿಣ ಸಮುದ್ರದಲ್ಲಿ ಕಟ್ಟಿಹಾಕಲು ಜಪಾನ್ ದೇಶದ ಜೊತೆ ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದವನ್ನು ಮಾಡಿಕೊಳ್ಳಲು ಭಾರತ ದೇಶ ನಿರ್ಧಾರ ಮಾಡಿತ್ತು, ಅದೇ ನಿಟ್ಟಿನಲ್ಲಿ ಇದೀಗ ತನ್ನ ಕೊನೆಯ ನಿರ್ಧಾರವಾಗಿ ಜಪಾನ್ ದೇಶದ ಪ್ರಧಾನಿ ಶಿಂಜೋ ಅಭೆ ರವರು ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿ ಸಹಿ ಹಾಕಲು ಆದೇಶ ನೀಡಿದ್ದಾರೆ. ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಜಪಾನ್ ದೇಶದ ರಾಯಭಾರಿ ಸುಜುಕಿ ಸಟೋಷಿ ರವರು ಪ್ರಧಾನಿ ಆದೇಶದಂತೆ ಭಾರತದ ಜೊತೆ ಮಿಲಿಟರಿ ಲಾಜಿಸ್ಟಿಕ್ಸ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರಿಂದ ಇನ್ನು ಮುಂದೆ ಭಾರತದ ನೌಕಾಪಡೆಯ ಯಾವುದೇ ಸಂದರ್ಭದಲ್ಲಿಯೂ ಕೂಡ ಜಪಾನ್ ದೇಶದ ಬಂದರುಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ತುಂಬಿಸಿಕೊಳ್ಳಬಹುದು ಹಾಗೂ ಜಪಾನ್ ದೇಶದ ನೌಕಾಪಡೆಯ ಪ್ರದೇಶವನ್ನು ಯಾವುದೇ ಅನುಮತಿ ಇಲ್ಲದೇ ಬಳಸಬಹುದು. ಇದರಿಂದ ದಕ್ಷಿಣ ಚೀನಾ ಸಮುದ್ರ ದಲ್ಲಿ ಕೂಡ ಭಾರತ ಮತ್ತಷ್ಟು ಬಲಶಾಲಿ ಯಾಗಲಿದ್ದು, ನೌಕಾಪಡೆಗೆ ಆನೆಬಲ ಬಂದಂತಾಗಿದೆ. ಒಟ್ಟಿನಲ್ಲಿ ಅದೇನೇ ಆಗಲಿ ಭಾರತದ ಜೊತೆ ಒಪ್ಪಂದ ಸೇರಿದಂತೆ ಇನ್ನೂ ಹಲವಾರು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿ ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಂಡಿರುವ ಶಿಂಜೋ ಅಭೆ ರವರಿಗೆ ನಮ್ಮ ಪರವಾಗಿ ಧನ್ಯವಾದಗಳು. ನಿಮ್ಮ ರಾಜಕೀಯೇತರ ಜೀವನ ಸುಖವಾಗಿರಲಿ ಎಂದು ಭಾರತೀಯರ ಪರವಾಗಿ ಆಶಿಸುತ್ತೇವೆ.