ಮಹಾಶಿವನಿಂದ ಪ್ರತಿಯೊಬ್ಬರು ಕಲಿಯಲೇಬೇಕು ಜೀವನ ಪಾಠಗಳು ! ನಿಜಕ್ಕೂ ಅಧ್ಭುತ !

ಮಹಾಶಿವನಿಂದ ಪ್ರತಿಯೊಬ್ಬರು ಕಲಿಯಲೇಬೇಕು ಜೀವನ ಪಾಠಗಳು ! ನಿಜಕ್ಕೂ ಅಧ್ಭುತ !

ನಮಸ್ಕಾರ ಸ್ನೇಹಿತರೇ, ಮಹಾಶಿವ ಎಂದಕೂಡಲೇ ಈತನನ್ನು ಆದರ್ಶವನ್ನಾಗಿ ತೆಗೆದುಕೊಂಡು ಜೀವನ ಹಾದಿಯಲ್ಲಿ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಹೋಗಬೇಕೆನಿಸುತ್ತದೆ. ಇತರ ದೇವರುಗಳಿಗೆ ಹೋಲಿಸಿದರೆ ಶಿವನು ಬಹಳ ವಿಭಿನ್ನ ಎಂದು ಆತನನ್ನು ನೋಡಿದ ತಕ್ಷಣ ನಮಗೆ ಅನಿಸುತ್ತದೆ. ಒಂದೊಂದು ಅವತಾರದಲ್ಲಿ ವಿವಿಧವಾಗಿ ಕಂಡುಬರುವ ಮಹಾಶಿವನು ಎಲ್ಲಾ ಅವತಾರಗಳನ್ನು ಹಲವಾರು ಗುಣಗಳನ್ನು ಸಾರಿ ಹೇಳಿದ್ದಾನೆ, ಈ ಪ್ರತಿಯೊಂದು ಗುಣಗಳು ಶಿವನು ನಮಗೆ ನೀಡುತ್ತಿರುವ ಜೀವನಪಾಠ ಗಳಾಗಿವೆ. ಹೀಗೆ ಶಿವನು ನೀಡುತ್ತಿರುವ ಜೀವನ ಪಾಠಗಳ ಬಗ್ಗೆ ನಾವು ಎಂದು ತಿಳಿದುಕೊಳ್ಳೋಣ.

ನಿಮ್ಮ ಸಂಗಾತಿಯನ್ನು ಗೌರವಿಸಿ: ಶಿವನನ್ನು ಅರ್ಧನರಿಶ್ವರ್, ಅಂದರೆ ಅರ್ಧ ಪುರುಷ ಮತ್ತು ಅರ್ಧ ಮಹಿಳೆ ಎಂದೂ ಕರೆಯುತ್ತಾರೆ. ಅವರ ಪತ್ನಿ ಮಾತಾ ಪಾರ್ವತಿ ಅವರ ಅವಶ್ಯಕ ಭಾಗವಾಗಿದ್ದಾರೆ ಎಂಬುದನ್ನು ಈ ಅವತಾರ ಸಾರುತ್ತದೆ. ಹೌದು, ಎಲ್ಲಾ ಸಂದರ್ಭದಲ್ಲಿಯೂ ಶಿವನು ಪಾರ್ವತಿ ದೇವಿಯನ್ನು ಅತ್ಯಂತ ಗೌರವದಿಂದ ನೋಡಿಕೊಂಡನು. ಅವಳು ಅವನ ಶಕ್ತಿ ಮತ್ತು ಶಿವನು ಎಂದಿಗೂ ಶಕ್ತಿಯಿಂದ ದೂರವಿರಲು ಸಾಧ್ಯವಿಲ್ಲ. ಆದ್ದರಿಂದ, ನಮ್ಮ ಸಂಗಾತಿ – ಹೆಂಡತಿಯರು ಅಥವಾ ಗಂಡಂದಿರು, ಜೀವನದಲ್ಲಿ ಪಾಲುದಾರರು, ನಿಜವಾಗಿಯೂ ನಮ್ಮ ಜೀವನದ ಭಾಗಗಳಾಗಿರುತ್ತಾರೆ ಅದೇ ಕಾರಣಕ್ಕಾಗಿ ನಾವು ಅವರನ್ನು ಸಂಪೂರ್ಣ ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು.

ಅಪೂರ್ಣ ಜ್ಞಾನ: ಶಿವನ ತಲೆಯ ಮೇಲಿರುವ ಗಂಗೆ ಅಜ್ಞಾನ ಅಥವಾ ಅಪೂರ್ಣ ಜ್ಞಾನ ವನ್ನು ಕೊನೆಗೊಳಿಸುವ ಸಂಕೇತವನ್ನು ಸೂಚಿಸುತ್ತಾರೆ. ಹೌದು ಗಂಗಾಮಾತೆಯು ಯಾವುದೇ ವಿಷಯದಲ್ಲಾಗಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂಬುದರ ಸಂಕೇತ ನೀಡುತ್ತಾರೆ, ಆದ್ದರಿಂದ ನಾವು ಯಾವುದೇ ವಿಚಾರದ ಕುರಿತು ಮಾತನಾಡುವ ಅಥವಾ ಏನನ್ನಾದರೂ ಮಾಡಬೇಕು ಎಂದುಕೊಳ್ಳುವ ಮುನ್ನ ಆ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅಪೂರ್ಣ ಜ್ಞಾನದ ಮೂಲಕ ಯಾವುದೇ ಕೆಲಸಕ್ಕೂ ಕೈ ಹಾಕಬಾರದು ಎಂದು ಶಿವನು ತನ್ನ ತಲೆಯ ಮೇಲೆ ಗಂಗೆ ಇಟ್ಟುಕೊಳ್ಳುವ ಮೂಲಕ ಸಾರುತ್ತಿದ್ದಾನೆ

ಎಂದಿಗೂ ಕೆಟ್ಟದ್ದನ್ನು ಸಹಿಸಬೇಡಿ– ಶಿವನು ತನ್ನ ಇಡೀ ಜೀವನದಲ್ಲಿ ಅನ್ಯಾಯವನ್ನು ಎಂದಿಗೂ ಸಹಿಸಲಿಲ್ಲ. ಅಗತ್ಯ ಬಂದ ತಕ್ಷಣವೇ ಎಲ್ಲಾ ದುಷ್ಟ ಶಕ್ತಿಗಳನ್ನು ಅಂತ್ಯಗೊಳಿಸುತ್ತಿದ್ದನು. ಹಿಂದೂ ಗ್ರಂಥಗಳ ಪ್ರಕಾರ ಅಸುರರನ್ನು ನಾಶ ಮಾಡುವಾಗಲೂ ಕೂಡ ಅವನು ನ್ಯಾಯವಂತನಾಗಿದ್ದನು. ಜಗತ್ತಿನಲ್ಲಿ ಯಾವುದೇ ದುಷ್ಟ ಶಕ್ತಿಗಳು ಇರಬಾರದು, ಅದಕ್ಕಾಗಿ ನಾವು ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ತನ್ನ ಈ ಗುಣದ ಮೂಲಕ ನಮಗೆ ತಿಳಿಸಿದ್ದಾನೆ.

ಸ್ವಯಂ ನಿಯಂತ್ರಣ (ಮನಸ್ಸಿನ ಹಿಡಿತ)- ನಮ್ಮ ಮನಸ್ಸು ಮತ್ತು ದೇಹಗಳು ಎರಡು ನಿಯಂತ್ರಣದಲ್ಲಿ ಇದ್ದಾಗ ಅಂದರೆ ನಮ್ಮ ನಿಯಂತ್ರಣದಲ್ಲಿ ಇದ್ದಾಗ ಎಲ್ಲವೂ ನಾವು ಅಂದುಕೊಂಡಂತೆ ನಡೆಯುತ್ತದೆ, ಸ್ವಯಂ ನಿಯಂತ್ರಣ ಜೀವನದ ನಿಜವಾದ ಕೀಲಿಕೈ ಆಗಿದೆ. ಇದು ಒಬ್ಬ ವ್ಯಕ್ತಿಯನ್ನು ನೇರ ನಿಯಂತ್ರಣದಲ್ಲಿಡುತ್ತದೆ, ಮತ್ತು ತಾನು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವಂತೆ ಮಾಡುತ್ತದೆ.

ದುರಾಸೆ: ಶಿವನಿಗೆ ಯಾವುದೇ ಆಸೆಗಳಿಲ್ಲ, ಆತನು ಎಲ್ಲಾ ರೀತಿಯ ಆಸೆಗಳಿಂದ ಮುಕ್ತನಾಗಿದ್ದಾನೆ. ಸಾಮಾನ್ಯ ಜೀವನ ನಡೆಸುತ್ತಾನೆ. ಸಾಮಾನ್ಯ ಜನರು ಕೂಡ ಯಾವುದೇ ಕಾರಣಕ್ಕೂ ಹೆಚ್ಚಿನ ಆಸೆ ಪಡೆಯದೆ ತಮ್ಮ ಜೀವನವನ್ನು ನಡೆಸಿಕೊಂಡು ಹೋದಲ್ಲಿ ಸುಖಕರ ಜೀವನ ಸಾಗಿಸಬಹುದು ಎಂಬುದನ್ನು ಶಿವ ತೋರಿಸಿದ್ದಾರೆ. ಇನ್ನು ಮತ್ತೊಂದು ಘಟನೆಯ ವಿವರ ನೀಡುವುದಾದರೇ ನವಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದ ರಾವಣನ ಅಂತ್ಯವಾಗಿದ್ದು ಒಂದು ದುರಾಸೆಯಿಂದ. ಹೀಗೆ ಆಸೆ ಹಾಗೂ ದುರಾಸೆಗಳು ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅವುಗಳೆಲ್ಲವನ್ನು ದೂರವಿಟ್ಟು ಸುಖಕರ ಜೀವನ ಸಾಗಿಸಬೇಕು ಎಂಬುದನ್ನು ಶಿವ ಸಾರುತ್ತಾನೆ.

ಕೋಪ ಎಂದಿಗೂ ಉತ್ತರವಲ್ಲ: ಶಿವನು ಮಹಾ ಯೋಗಿಯಾಗಿದ್ದು, ಶಿವ ತಪಸ್ಸಿಗೆ ಕುಳಿತರೆ, ಗಂಟೆಗಳ ಕಾಲ ಧ್ಯಾನಿಸುತ್ತಿದ್ದನು ಹಾಗೂ ಅವನ ತನ್ನ ಶಾಂತಿಯುತ ಬುದ್ಧಿಶಕ್ತಿಯ ಮೂಲಕ ನಮ್ಮ ಬ್ರಹ್ಮಾಂಡದ ಯೋಗಕ್ಷೇಮವನ್ನು ಕಾಯ್ದುಕೊಳ್ಳುತ್ತಿದ್ದನು, ಕೆಲವರು ಮಾತ್ರ ಅವನ ಮನಸ್ಸಗೆ ಅಡಚಣೆ ಉಂಟು ಮಾಡುವುದು ಆತನ ಕೋಪಕ್ಕೆ ಕಾರಣವಾಯಿತು. ಹಾಗಾಗಿ ಜೀವನದ ಕಷ್ಟಕಾರ್ಪಣ್ಯ ಜೀವನ ಜಂಜಾಟದಲ್ಲಿ ನಿರತವಾಗಿದ್ದಾಗ, ಕೋಪವು ಎಂದಿಗೂ ಉತ್ತರವಲ್ಲ. ಏನನ್ನೂ ಸಾಧಿಸದ ತೀವ್ರತೆಯ ನಿರ್ಧಾರವನ್ನು ತೆಗೆದುಕೊಳ್ಳಲು ಅದು ನಿಮ್ಮನ್ನು ಒತ್ತಾಯಿಸುತ್ತದೆ. ಇದರಿಂದ ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಾಂತವಾಗಿರುವುದು ಹೊಸ ದೃಷ್ಟಿಕೋನವನ್ನು ಪಡೆಯಲು ಮತ್ತು ನಿಮ್ಮ ಜೀವನದ ಯುದ್ಧಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ.

ಸಂತೋಷವೂ ವಸ್ತುಗಳಿಗೆ ಸಮನಾಗಿರುವುದಿಲ್ಲ: ತ್ರಿಮೂರ್ತಿಗಳಲ್ಲಿ ಒಬ್ಬರಾಗಿರುವ ಮಹಾಶಿವನು ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ಆತನ ಮೈಮೇಲೆ ಅಥವಾ ಸುತ್ತಮುತ್ತ ಯಾವುದೇ ರೀತಿಯ ವಜ್ರವೈಡೂರ್ಯ ಗಳನ್ನು ನೀವು ನೋಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಸಂಪತ್ತು ಮತ್ತು ವಸ್ತುಗಳಿಗೆ ಯಾವುದೇ ಬೆಲೆ ನೀಡಬಾರದು, ನಿಮ್ಮ ಜೀವನದಲ್ಲಿ ಸಂಪತ್ತು ಇಲ್ಲ ಎಂದ ತಕ್ಷಣ ಏನೂ ಇಲ್ಲವೆಂದು ಅರ್ಥವಲ್ಲ, ನೀವು ದೈಹಿಕವಾಗಿ, ‌ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಜೀವನದಲ್ಲಿ ಬಂದಿ ಆಗಬೇಕು. ಅದನ್ನು ಹೊರತಾಗಿ ಸಂಪತ್ತಿಗೆ ಅಲ್ಲ.

ನಿಮ್ಮ ಹಾದಿಯಲ್ಲಿ ಧೃತಿಗೆಡಬೇಡಿ: ನಮ್ಮ ಹಾದಿಯಲ್ಲಿ ಏನೇ ಇರಲಿ ನಾವು ಸಿದ್ಧರಾಗಿ ಅದನ್ನು ನಮ್ಮ ಎದುರಿಸುತ್ತ ಮುಂದೆ ಹೋಗಬೇಕು, ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯು ನಾವು ಧೃತಿಗೆಡದೆ ನಮ್ಮ ದಾರಿಯ ಮೇಲೆ ಬರವಸೆಯನ್ನು ಇಟ್ಟುಕೊಂಡು ಮುಂದೆ ಸಾಗುವುದು ಶ್ರೇಯಸ್ಕರ.