ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ನಿರೀಕ್ಷೆ ಮೂಡಿಸಿದ್ದ ಆಕ್ಸ್ಫರ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ನಿರಾಸೆ !

ನಮಸ್ಕಾರ ಸ್ನೇಹಿತರೇ ನಿಮಗೆ ಈಗಾಗಲೇ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ಆಕ್ಸ್ಫರ್ಡ್ ಲಸಿಕೆಯು 2 ಹಂತದ ಪ್ರಯೋಗಗಳಲ್ಲಿ ನೂರಕ್ಕೆ 100 ರಷ್ಟು ಫಲಿತಾಂಶ ನೀಡಿದ ಕಾರಣ ಪ್ರತಿಯೊಬ್ಬರೂ ಸಂತಸದಿಂದ ಆಕ್ಸ್ಫರ್ಡ್ ಲಸಿಕೆಯ ಮೇಲೆ ನಿರೀಕ್ಷೆಗಳನ್ನು ಹೆಚ್ಚು ಮಾಡಿಕೊಂಡಿದ್ದರು. ನಾವು ಕೂಡ ಒಂದು ವೇಳೆ ಆಕ್ಸಿಡೆಂಟ್ ಲಸಿಕೆ ಯಶಸ್ವಿಯಾದರೇ ಭಾರತಕ್ಕೆ ಕೂಡ ಲಾಭವಾಗುವ ಕಾರಣ ಬಹಳ ಸಂತಸದ ಸುದ್ದಿಯನ್ನು ಬರೆದಿದ್ದೆವು. ಆದರೆ ಮೂರನೇ ಹಂತ ಪ್ರಯೋಗ ಆರಂಭವಾಗಿ ಕೆಲವು ದಿನಗಳವರೆಗೂ ಎಲ್ಲಾ ಅಂದುಕೊಂಡಂತೆ ನಡೆಯುತ್ತಿತ್ತು, ಆದರೆ ಇದೀಗ ಆಕ್ಸ್ಫರ್ಡ್ ಲಸಿಕೆ ನಿರೀಕ್ಷೆಗಳನ್ನು ಹುಸಿ ಮಾಡುವ ದಾರಿ ಹಿಡಿದಂತೆ ಕಾಣುತ್ತಿದೆ.

ಹೌದು ಸ್ನೇಹಿತರೇ ಮೊದಲ ಎರಡು ಹಂತದ ಪ್ರಯೋಗಗಳಲ್ಲಿ ಹಾಗೂ ಮೂರನೇ ಹಂತದ ಪ್ರಯೋಗದ ಆರಂಭಿಕ ದಿನಗಳಲ್ಲಿ ಅತ್ಯುತ್ತಮ ಫಲಿತಾಂಶ ನೀಡಿ ನೂರಕ್ಕೆ ನೂರರಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದ್ದ ಆಕ್ಸ್ಫರ್ಡ್ ಲಸಿಕೆ ಇದೀಗ ಮೂರನೇ ಹಂತದಲ್ಲಿ ಪ್ರಯೋಗ ನಡೆಯುವಾಗ ಪ್ರಯೋಗಕ್ಕೆ ಒಳ್ಳಪಟ್ಟಿದ್ದ ವ್ಯಕ್ತಿಗೆ ವಿಚಿತ್ರ ಕಾಯಿಲೆ ಒಂದು ಕಾಣಿಸಿಕೊಂಡಿದೆ. ಇತರ ಯಾವುದೇ ವ್ಯಕ್ತಿಗಳಿಗೂ ಈ ರೀತಿಯ ಕಾಯಿಲೆ ಕಾಣಿಸಿಕೊಂಡಿಲ್ಲ. ಆದರೆ ಒಬ್ಬರಿಗೆ ಮಾತ್ರ ವಿಚಿತ್ರ ಕಾಯಿಲೆಯೊಂದು ಕಾಣಿಸಿಕೊಂಡಿದ್ದು ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು ಎಂದು ಸಂಸ್ಥೆ ಘೋಷಣೆ ಮಾಡಿದೆ.

ಭಾರತದಲ್ಲಿ ಕೇವಲ ಒಂದು ವಾರದ ಹಿಂದೆ ಆಕ್ಸ್ಫರ್ಡ್ ಲಸಿಕೆಯ ಪ್ರಯೋಗಗಳು ಆರಂಭಗೊಂಡಿದ್ದವು, ಆದರೆ ಭಾರತದಲ್ಲಿ ಆರಂಭಗೊಂಡ ಮರುವಾರ ಆಕ್ಸ್ಫರ್ಡ್ ಲಸಿಕೆಯ ಮೂರನೇ ಹಂತದಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು ಇದೀಗ ವಿಶ್ವದೆಲ್ಲೆಡೆ ಭಾರಿ ನಿರೀಕ್ಷೆ ಮೂಡಿಸಿದ್ದ ಲಸಿಕೆ ಯಶಸ್ವಿಯಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಭಾರತದ ಸಿರಂ ಇನ್ಸ್ಟಿಟ್ಯೂಟ್ ಸಂಸ್ಥೆಯ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದ ಕಾರಣ ಈ ಲಸಿಕೆಯು ಯಶಸ್ವಿ ಗೊಂಡಿದ್ದಲ್ಲಿ ಭಾರತಕ್ಕೆ ಬಹುಬೇಗನೆ 5 ಕೋಟಿ ಲಸಿಕೆಗಳು ಲಭ್ಯವಾಗುತ್ತಿದ್ದವು. ಅದೇ ಕಾರಣಕ್ಕಾಗಿ ಭಾರತೀಯರು ಕೂಡ ಈ ಲಸಿಕೆ ಯಶಸ್ವಿಯಾಗಲಿ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಕೊನೆಯ ಹಂತದ ಪ್ರಯೋಗದಲ್ಲಿ ಈ ರೀತಿಯ ಪಲಿತಾಂಶ ಕಂಡು ಬಂದಿರುವುದು ನಿರಾಸೆ ಮೂಡಿಸಿದೆ.

Post Author: Ravi Yadav