ಸೈಫ್ ಬದಲು ರಾವಣನ ಪಾತ್ರಕ್ಕೆ ಇವರಿಬ್ಬರೂ ಸೂಕ್ತ ಅಂತೆ ! ಯಾರ್ಯಾರು ಗೊತ್ತಾ?

ಸೈಫ್ ಬದಲು ರಾವಣನ ಪಾತ್ರಕ್ಕೆ ಇವರಿಬ್ಬರೂ ಸೂಕ್ತ ಅಂತೆ ! ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಎಂಬ ಕೂಗು ಬಹಳ ಜೋರಾಗಿ ಕೇಳಿ ಬರುತ್ತಿದೆ. ಒಂದೆಡೆ ಸುಶಾಂತ್ ಸಿಂಗ್ ಅಭಿಮಾನಿಗಳು ಮತ್ತೊಂದೆಡೆ ಕಂಗನಾ ರಾವತ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಗೆ ಸ್ವಜನಪಕ್ಷಪಾತವೇ ಕಾರಣ ನಾವು ಸ್ವಜನ ಪಕ್ಷಪಾತವನ್ನು ಬಾಲಿವುಡ್ ಚಿತ್ರರಂಗದಿಂದ ಹೊರಹಾಕುವವರೆಗೂ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಹೇಳಿ ಹಲವಾರು ಅಭಿಯಾನಗಳನ್ನು ನಡೆಸಿದ್ದಾರೆ. ಇದೇ ಅಭಿಯಾನ ಗಳಿಂದ ಕರಣ್ ಜೋಹರ್ ಅವರು ತಮ್ಮ ನಿರ್ದೇಶಕ ಮಂಡಳಿಯ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಮತ್ತೊಂದೆಡೆ ಕರಣ್ ಜೋಹರ್ ಅವರ ಪ್ರಸಿದ್ಧ ಶೋ ಕಾಫಿ ವಿತ್ ಕರಣ್ ನಿಂತುಹೋಯಿತು. ಇನ್ನು ಸಂಜಯ್ ದತ್, ಆಲಿಯಾ ಭಟ್ ಹಾಗೂ ಪೂಜಾ ಭಟ್ ನಟಿಸಿ, ಎರಡು ದಶಕಗಳ ನಂತರ ನಿರ್ದೇಶನಕ್ಕೆ ವಾಪಸಾಗಿದ್ದ ಮಹೇಶ್ ಭಟ್ ರವರು ನಿರ್ದೇಶಿಸಿದ್ದರು ಚಿತ್ರದ ಪರಿಸ್ಥಿತಿ ಬಹುಶಹ ನಿಮಗೆಲ್ಲರಿಗೂ ತಿಳಿದೇ ಇದೆ. ವಿಶ್ವದಲ್ಲಿಯೇ ಅತಿ ಕಡಿಮೆ ರೇಟಿಂಗ್ ಪಡೆದುಕೊಂಡ ಚಿತ್ರ ಇದಾಗಿದೆ.

ಇದೇ ರೀತಿಯ ಅಭಿಯಾನಗಳನ್ನು ಮತ್ತಷ್ಟು ಮುಂದುವರಿಸುವುದಾಗಿ ಹೇಳಿದ್ದ ಸುಶಾಂತ್ ಸಿಂಗ್ ಅಭಿಮಾನಿಗಳು, ಕಂಗನಾ ರಾವತ್ ಅಭಿಮಾನಿಗಳ ಜೊತೆ ಪ್ರಭಾಸ್ ಅಭಿಮಾನಿಗಳು ಕೂಡ ಇತ್ತೀಚೆಗೆ ಸೇರಿಕೊಂಡಿದ್ದರು. ಪ್ರಭಾಸ್ ರವರು ನಟಿಸುತ್ತಾರೆ ಎನ್ನಲಾಗುತ್ತಿರುವ ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಸೈಫ್ ಅಲಿಖಾನ್ ಅವರನ್ನು ಆಯ್ಕೆ ಮಾಡಿದ ಕಾರಣಕ್ಕಾಗಿ ಸ್ವತಹ ಪ್ರಭಾಸ್ ಅಭಿಮಾನಿಗಳು ನಾವು ಇದೀಗ ಕಂಗನಾ ರಾವತ್ ಹಾಗೂ ಸುಶಾಂತ್ ಸಿಂಗ್ ಅಭಿಮಾನಿಗಳ ಜೊತೆ ಕೈಜೋಡಿಸುತ್ತೇವೆ ಈ ಕೂಡಲೇ ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಸೈಫ್ ಆಲಿಖಾನ್ ರವರನ್ನು ಈ ಕೂಡಲೇ ಚಿತ್ರದಿಂದ ಕೈಬಿಡಬೇಕು ಎಂದು ಅಭಿಯಾನಗಳನ್ನು ನಡೆಸಿದ್ದರು.

ಈ ಅಭಿಯಾನಗಳು ನಡೆಯುತ್ತಿರುವ ಸಂದರ್ಭದಲ್ಲಿ ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಮತ್ಯಾವ ನಟ ಸರಿಹೊಂದುತ್ತಾರೆ ಎಂಬುದನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಆರಂಭಿಸಿದರು. ಕ್ರಮೇಣ ಎಲ್ಲಾ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ರಾವಣನ ಪಾತ್ರಕ್ಕೆ ಭಾರಿ ಸಂಖ್ಯೆಯಲ್ಲಿ ಇಬ್ಬರು ನಟರ ಹೆಸರು ಕೇಳಿಬಂದಿದೆ. ಒಂದು ವೇಳೆ ಇಬ್ಬರು ನಟರಲ್ಲಿ ಯಾರಾದರೂ ಒಬ್ಬರು ರಾವಣನ ಪಾತ್ರಕ್ಕೆ ಆಯ್ಕೆಯಾದರೆ ಖಂಡಿತ ಆದಿಪುರುಷ್ ಚಿತ್ರವು ಮತ್ತಷ್ಟು ಯಶಸ್ಸು ಕಾಣಲಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವೇನೆಂದರೆ ಆಯ್ಕೆಯಾದ ಇಬ್ಬರು ನಟರಲ್ಲಿ ಒಬ್ಬರು ಇಡೀ ದೇಶವೇ ಮೆಚ್ಚಿ ಕೊಳ್ಳುವಂತಹ ಕಾರ್ಯಗಳನ್ನು ಮಾಡುತ್ತಿರುವವರು ಮತ್ತೊಬ್ಬರು ನಮ್ಮ ಹೆಮ್ಮೆಯ ಕನ್ನಡಿಗ.

ನೆಟ್ಟಿಗರ ಆಯ್ಕೆಗಳು ಈ ಕೆಳಗಿನಂತೆ ಇದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ. ಹೌದು ಸ್ನೇಹಿತರೇ, ರಾವಣನ ಪಾತ್ರಕ್ಕೆ ನೆಟ್ಟಿಗರು ಆಯ್ಕೆ ಮಾಡಿರುವುದು ಮತ್ಯಾರನ್ನು ಅಲ್ಲ ಬದಲಾಗಿ ಕೆಜಿಎಫ್ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಖಡಕ್ ವಿಲನ್ ನಂತೆ ನಟಿಸಿರುವ ಯಶ್ ಹಾಗೂ ಈಗಾಗಲೇ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡಿ ಅಸಲಿ ಜೀವನದಲ್ಲಿ ಹೀರೋ ಹಾಗೆ ಮಿಂಚುತ್ತಿರುವ ಸೋನು ಸೂದ್ ರವರನ್ನು ನೆಟ್ಟಿಗರು ಆಯ್ಕೆ ಮಾಡಿದ್ದಾರೆ. ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿ, ಖಂಡಿತ ಆದಿಪುರುಷ್ ಚಿತ್ರವು ಇಡೀ ವಿಶ್ವದಲ್ಲಿಯೇ ಅತಿಹೆಚ್ಚು ಯಶಸ್ಸುಕಂಡ ಚಿತ್ರವಾಗಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.