ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಟಾಪ್ 6 ಆಟಗಾರರನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ ! ದಿಗ್ಗಜರನ್ನು ಮೀರಿಸಿದ ಕನ್ನಡದ ಕುವರ ! ಹೇಗಿದೆ ಗೊತ್ತಾ ಲಿಸ್ಟ್??

ನಮಸ್ಕಾರ ಸ್ನೇಹಿತರೇ, ಕೆಲವೇ ಕೆಲವು ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿರುವ ಐಪಿಎಲ್ ಟೂರ್ನಿಯ ಆರಂಭವಾಗಲಿದೆ. ಈಗಾಗಲೇ ಪ್ರತಿಯೊಂದು ತಂಡಗಳ ಲೆಕ್ಕಾಚಾರಗಳು ಗರಿಗೆದರಿವೆ. ಇನ್ನು ಕ್ರಿಕೆಟ್ ವಿಶ್ಲೇಷಕರು ಕೂಡ ತಮ್ಮದೇ ಆದ ರೀತಿಯಲ್ಲಿ ಆಟಗಾರರನ್ನು ಆಯ್ಕೆ ಮಾಡುತ್ತಿದ್ದಾರೆ. ಇದೀಗ ಭಾರತದ ಮಾಜಿ ಆಟಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ರವರು ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ 6 ಭಾರತೀಯ ಆಟಗಾರರನ್ನು ಆಯ್ಕೆ ಮಾಡಿದ್ದಾರೆ, ಅವರ ಆಯ್ಕೆಗಳು ಈ ಕೆಳಗಿನಂತೆ ಇದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

6. ರಿಷಬ್ ಪಂತ್: ಡೆಲ್ಲಿ ಐಪಿಎಲ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಪ್ರಮುಖ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಕಂಡುಬರುವ ರಿಷಬ್ ಪಂತ್ ರವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಟಾಪ್ 6 ಆಟಗಾರರ ಸಾಲಿನಲ್ಲಿ ಕೊನೆಯ ಸ್ಥಾನ ಪಡೆದು ಕೊಂಡಿದ್ದಾರೆ. ರಿಷಬ್ ಪಂತ್ ರವರ ಜೀವನದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಬಹಳ ಮಹತ್ವದ ಪಾತ್ರ ಪಡೆದುಕೊಂಡಿದ್ದು, ಮಹೇಂದ್ರ ಸಿಂಗ್ ಧೋನಿ ರವರ ನಿವೃತ್ತಿಯಿಂದಾಗಿ ವಿಕೆಟ್ ಕೀಪರ್ ಸ್ಥಾನ ಭಾರತೀಯ ಕ್ರಿಕೆಟ್ ತಂಡದಲ್ಲಿ ತೆರವಾಗಿದೆ ಇದೀಗ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ವಾಪಸಾಗಬೇಕು ಎಂಬ ಆಲೋಚನೆಯ ಮೇರೆಗೆ ರಿಷಬ್ ಪಂತ್ ರವರು ಆಟವಾಡಲಿದ್ದಾರೆ. ಸ್ಪಿನ್ ಬೌಲಿಂಗ್ ಅತ್ಯುತ್ತಮ ಪ್ರದರ್ಶನ ನೀಡುವ ಕಾರಣ UAE ದೇಶದಲ್ಲಿ ಸ್ಪಿನ್ನರುಗಳಿಗೆ ಹೆಚ್ಚು ನೆರವಾಗುವ ಪಿಚ್ ಗಳು ಇವೆ, ಆದ ಕಾರಣ ನನ್ನ ಪಟ್ಟಿಯಲ್ಲಿ ರಿಷಭ ಪಂತರ್ ಅವರಿಗೆ ಸ್ಥಾನ ನೀಡುತ್ತಿದ್ದೇನೆ ಎಂದಿದ್ದಾರೆ.

5. ರೋಹಿತ್ ಶರ್ಮಾ: ಈ ಬಾರಿಯ ಟೂರ್ನಿಯ UAE ದೇಶದಲ್ಲಿ ನಡೆಯುತ್ತಿರುವ ಕಾರಣ ಮೊದಲೇ ಹೇಳಿದಂತೆ ಅಲ್ಲಿ ಸ್ಪಿನ್ ಬೌಲರ್ ಗಳಿಗೆ ಹೆಚ್ಚು ನೆರವಾಗುವ ಪಿಚ್ ಗಳು ಇರುತ್ತವೆ, ಇನ್ನೂ ರೋಹಿತ್ ಶರ್ಮಾ ರವರು ಭಾರತದ ಟ್ರ್ಯಾಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಕಾರಣ ಅಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ಇದೆ. ಆದರೆ ಇವರು ಆರೆಂಜ್ ಕ್ಯಾಪ್ ಗೆಲ್ಲುವುದು ಬಹಳ ಕಷ್ಟವೆನಿಸುತ್ತದೆ, ಐಪಿಎಲ್ ಟೂರ್ನಿಯ ಟಾಪ್ 5 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಸಾಧ್ಯವಿಲ್ಲ ಎನ್ನಿಸುತ್ತದೆ. ಆದರೆ ಭಾರತದ ಆಟಗಾರರನ್ನು ಗಣನೆಗೆ ತೆಗೆದುಕೊಂಡರೇ ಇವರು ಟಾಪ್ ಆಟಗಾರರ ಸಾಲಿನಲ್ಲಿ ಕಂಡುಬರುವ ಸಾಧ್ಯತೆ ಇದೆ. ಬಹುಶಹ ಇವರು ಒಟ್ಟಾಗಿ ಸರಿ ಸುಮಾರು 600 ರನ್ ಗಳಿಸಬಹುದು ಎಂದು ಅಂದಾಜು ಮಾಡುತ್ತೇನೆ. ಆರಂಭಿಕನಾಗಿ ಕಣಕ್ಕಿಳಿದಾಗ ಹೆಚ್ಚು ರನ್ ನಿರೀಕ್ಷಿಸಬಹುದು ಎಂದಿದ್ದಾರೆ.‌

4. ಶ್ರೇಯಸ್ ಐಯ್ಯರ್: ಡೆಲ್ಲಿ ತಂಡದ ನಾಯಕ ಹಾಗೂ ಮೂರನೇ ಕ್ರಮಾಂಕದಲ್ಲಿ ಅಥವಾ ಪರಿಸ್ಥಿತಿಗಳ ಅನುಗುಣವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಐಯ್ಯರ್ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪಿನ್ ಬೌಲಿಂಗ್ ನಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಅಯ್ಯರ್ ರವರು ಸದಾ ರನ್ ಗಳಿಸಲು ಅವಕಾಶಕ್ಕಾಗಿ ಕಾದಿರುತ್ತಾರೆ, ಲಾಕ್ ಡೌನ್ ಗೂ ಮುನ್ನ ಅತ್ಯುತ್ತಮ ಲಯದಲ್ಲಿ ಇದ್ದ ಶ್ರೇಯಸ್ ಐಯ್ಯರ್ ಅವರು ಖಂಡಿತ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ನನಗಿದೆ ಎಂದು ವಿವರಣೆ ನೀಡಿ ನಾಲ್ಕನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.

3. ಮಹೇಂದ್ರ ಸಿಂಗ್ ಧೋನಿ: ಸುರೇಶ್ ರೈನಾ ರವರ ಇಲ್ಲದೇ ಇವರ ಜವಾಬ್ದಾರಿ ಹೆಚ್ಚಬಹುದು, ಇದರಿಂದ ಕನಿಷ್ಠ 8 ರಿಂದ 12 ಓವರ್ ಗಳ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯುತ್ತದೆ. ಖಂಡಿತ ಸ್ಪಿನ್ ಬೌಲಿಂಗ್ ನಲ್ಲಿ ಅತ್ಯುತ್ತಮ ಆಟವಾಡುವ ಕಲೆಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ರವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಇದು ಅವರನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಮಾಡಿದೆ. ಹೌದು ಇವರು 12 ತಿಂಗಳ ಹಿಂದೆ ಕೊನೆಯ ಪಂದ್ಯವನ್ನು ಆಟವಾಡಿರಬಹುದು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿರಬಹುದು. ಆದರೆ ಯಾವ ಕ್ಷಣದಲ್ಲಿ ಬೇಕಾದರೂ ಪರಿಸ್ಥಿಗೆ ತಕ್ಕಂತೆ ಬ್ಯಾಟಿಂಗ್ ಮಾಡುವ ಗುಣವನ್ನು ಹೊಂದಿದ್ದಾರೆ ಎಂದಿದ್ದಾರೆ.

2. ವಿರಾಟ್ ಕೊಹ್ಲಿ: ನೀವೆಲ್ಲರೂ ವಿರಾಟ್ ಕೊಹ್ಲಿ ರವರು ಆಕಾಶ್ ಚೋಪ್ರಾ ರವರ ಟಾಪ್ ಭಾರತೀಯರ ಆಟಗಾರರಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಅಂದಾಜು ಮಾಡಿರಬಹುದು. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಬಹುದಾದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ರವರು ಎರಡನೇ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ರನ್ ಮಷಿನ್ ಎಂದು ಕರೆದಿರುವ ಆಕಾಶ್ ಚೋಪ್ರಾ ರವರು ಯಾವುದೇ ಪಂದ್ಯದಲ್ಲಿ ಯಾವುದೇ ಪಿಚ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಚಾಕಚಕ್ಯತೆಯನ್ನು ವಿರಾಟ್ ಕೊಹ್ಲಿ ಅವರು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

1. ಕೆ ಎಲ್ ರಾಹುಲ್: ಕಳೆದ ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಉತ್ತಮ ಲಯವನ್ನು ಕಂಡುಕೊಂಡಿರುವ ಕೆಎಲ್ ರಾಹುಲ್ ಅವರು ಇದೀಗ ನಾಯಕನಾಗಿ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲಿದ್ದಾರೆ, ನಾಯಕತ್ವದ ಜವಾಬ್ದಾರಿ ಇರುವ ಕಾರಣ ಇವರು ಮತ್ತಷ್ಟು ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿ ಮತ್ತಷ್ಟು ಮಿಂಚಲಿದ್ದಾರೆ ಎಂಬುವ ನಂಬಿಕೆ ಇದೆ. ಅದೇ ಕಾರಣಕ್ಕೆ ಮೊದಲನೇ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನೋಡಿದಿರಲ್ಲ ಸ್ನೇಹಿತರೇ ಆಕಾಶ್ ಚೋಪ್ರಾ ರವರ ಆಯ್ಕೆಗಳನ್ನು, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav