ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರಿಯಾ ! ಸುಶಾಂತ್ ಘಟನೆಯಲ್ಲಿ ಮಹತ್ವದ ಮಾಹಿತಿ ಹೊರಗೆಳೆದ NCB !

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರಿಯಾ ! ಸುಶಾಂತ್ ಘಟನೆಯಲ್ಲಿ ಮಹತ್ವದ ಮಾಹಿತಿ ಹೊರಗೆಳೆದ NCB !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಎಲ್ಲಾ ದೃಷ್ಟಿಕೋನಗಳಿಂದ ತನಿಖೆ ನಡೆಸಲು ಒಂದೆಡೆ ಸಿಬಿಐ ಮತ್ತೊಂದೆಡೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಿವೆ. ಇನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ಕೇವಲ ನಿನ್ನೆಯಷ್ಟೇ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯಲ್ಲಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದರು. ರಿಯಾ ಚಕ್ರವರ್ತಿ ರವರ ಸಹೋದರ ಶೋಯಿಕ್ ಚಕ್ರವರ್ತಿ ರವರು, ನನ್ನ ಸಹೋದರಿ ರಿಯಾ ಚಕ್ರವರ್ತಿ ರವರು ಹೇಳಿದಂತೆ ಡ್ರ – ಗ್ಸ್ ಗಳನ್ನು ಖರೀದಿ ಮಾಡಿದ್ದೇನೆಂದು ತಪ್ಪು ಒಪ್ಪಿಕೊಂಡಿದ್ದರು. ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ರಿಯಾ ಚಕ್ರವರ್ತಿ ರವರ ಸಹೋದರ ಶೋಯಿಕ್ ಚಕ್ರವರ್ತಿ ಹಾಗೂ ಪ್ರಕರಣದಲ್ಲಿ ಮಹತ್ವದ ಪಾಲು ಹೊಂದಿದ್ದಾರೆ ಎನ್ನಲಾಗುತ್ತಿರುವ ಸ್ಯಾಮ್ಯುಯೆಲ್ ಮಿರುಂಡಾ ರವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ತಮ್ಮ ವಶಕ್ಕೆ ಪಡೆದುಕೊಂಡಿತ್ತು.

ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಶೋಯಿಕ್ ಚಕ್ರವರ್ತಿ ರವರ ಮನೆ ಮೇಲೆ ರೈಡ್ ಮಾಡಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ರಿಯಾ ಚಕ್ರವರ್ತಿ ಅವರಿಗೆ ಸಂಬಂಧಿಸಿದ ಕಾರು, ಫೋನು ಮತ್ತು ಲ್ಯಾಪ್ ಟಾಪ್ ಗಳಲ್ಲಿ ಹಲವಾರು ಮಾಹಿತಿಗಳಿಗಾಗಿ ಸರ್ಚ್ ನಡೆಸಿತ್ತು. ಇದೀಗ ಒಂದೆಡೆ ರಿಯಾ ಚಕ್ರವರ್ತಿ ರವರ ಸಹೋದರನನ್ನು ನ್ಯಾಯಾಂಗದ ಕಸ್ಟಡಿಗೆ ನೀಡಲು ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮತ್ತೊಂದು ಮಾಹಿತಿ ಹೊರಬಿದ್ದಿದ್ದು, ರಿಯಾ ಚಕ್ರವರ್ತಿ ರವರ ಫೋನ್ ನಲ್ಲಿರುವ ಮಹತ್ವದ ಮಾಹಿತಿಗಳು ಹೊರಬಿದ್ದಿವೆ, ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿ ನನಗೆ ಡ್ರ – ಗ್ಸ್ ಎಂದರೆ ಏನು ಎಂದು ಗೊತ್ತಿಲ್ಲ, ಡ್ರ – ಗ್ಸ್ ನಾನು ಯಾವತ್ತಿಗೂ ತೆಗೆದುಕೊಂಡಿಲ್ಲ ಹಾಗೂ ಇತರರಿಗೆ ನೀಡಿಲ್ಲ ಎಂದೆಲ್ಲಾ ಸಂದರ್ಶನದಲ್ಲಿ ಮಾತನಾಡಿದ ರಿಯಾ ಚಕ್ರವರ್ತಿ ರವರ ಅಸಲಿ ಕಥೆ ಬಹಿರಂಗಗೊಂಡಿದೆ.

ಹೌದು ಸ್ನೇಹಿತರೇ, ಇದೀಗ ರಿಯಾ ಚಕ್ರವರ್ತಿ ರವರ ವಾಟ್ಸಪ್ ಮಾಹಿತಿ ಸಂಸ್ಥೆಗೆ ಸಿಕ್ಕಿಬಿದ್ದಿದ್ದು, ಗರ್ಭನಿರೋಧಕ ಮಾತ್ರೆಗಳು, ಡ್ರ – ಗ್ಸ್ ಖರೀದಿಸಿರುವ ಬಿಲ್ ಗಳು, ಮಾರಾಟ ಮಾಡುತ್ತಿರುವ ಬಿಲ್ ಮತ್ತು ಬಳಸುವುದರ ಕುರಿತು ಮಹತ್ವದ ಮಾಹಿತಿಗಳು ರಿಯಾ ರವರ ಮೊಬೈಲ್ ನಿಂದ ಹೊರಬಿದ್ದಿವೆ. ಕೆಲವೇ ಕೆಲವು ದಿನಗಳ ಹಿಂದೆ ದೇಶದ ಪ್ರತಿಷ್ಠಿತ ಮಾಧ್ಯಮವೊಂದರಲ್ಲಿ, ಪೂರ್ವ ಸ್ಕ್ರಿಪ್ಟ್ ಮಾಡಿದಂತೆ ಭಾಸವಾಗಿದ್ದ ಸಂದರ್ಶನದಲ್ಲಿ ಭಾಗಿಯಾಗಿದ್ದ ರಿಯಾ ಚಕ್ರವರ್ತಿ ರವರು ನನಗೆ ಹಾಗೂ ಡ್ರ – ಗ್ಸ್ ಯಾವುದೇ ಸಂಬಂಧವಿಲ್ಲ ನಾನು ಇಲ್ಲಿಯವರೆಗೂ ಡ್ರ – ಗ್ಸ್ ತೆಗೆದುಕೊಂಡಿಲ್ಲ ಎಂದೆಲ್ಲಾ ಹೇಳಿಕೆ ನೀಡಿದ್ದರು. ಆದರೆ ಇದೀಗ ಸತ್ಯ ಬಯಲಾಗಿದ್ದು ರಿಯಾ ಚಕ್ರವರ್ತಿ ರವರಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಸವಾಲುಗಳು ಹೆಚ್ಚಲಿರುವುದು ಖಚಿತವಾಗಿದೆ. ಇನ್ನು ಈ ಕುರಿತು ರಿಯಾ ಚಕ್ರವರ್ತಿಯವರಿಗೆ ಸಮನ್ಸ್ ಜಾರಿ ಮಾಡಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆಯು ತಯಾರಿ ನಡೆಸಿದೆ, ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಸಮನ್ಸ್ ಕೂಡ ಜಾರಿಯಾಗುವುದು ಎಂಬುದು ಖಚಿತವಾಗಿದೆ.