ಅಣ್ಣಾಮಲೈ ರವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಬಿಜೆಪಿ ! ತಮಿಳುನಾಡು ರಾಜಕೀಯದಲ್ಲಿ ಸಂಚಲನ! ಏನು ಗೊತ್ತಾ?

ಅಣ್ಣಾಮಲೈ ರವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಬಿಜೆಪಿ ! ತಮಿಳುನಾಡು ರಾಜಕೀಯದಲ್ಲಿ ಸಂಚಲನ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರವರು ತಮ್ಮ ಐಪಿಎಸ್ ಅಧಿಕಾರವಧಿಯಲ್ಲಿ ಬಹಳ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ತದ ನಂತರ ಇದ್ದಕ್ಕಿದ್ದಂತೆ ದೇಶದ ರಾಜಕೀಯದಲ್ಲಿ ಬದಲಾವಣೆ ತರಬೇಕು ಹಾಗೂ ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಬೇಕು, ಆದ ಕಾರಣದಿಂದ ನನ್ನ ಸಿದ್ಧಾಂತಗಳಿಗೆ ಸೂಕ್ತವಾಗಿರುವ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ನರೇಂದ್ರ ಮೋದಿಯವರ ಕಾರ್ಯ ವೈಖರಿಗೆ ಮನಸೋತು ಬಿಜೆಪಿ ಪಕ್ಷಕ್ಕೆ ಕೇವಲ ಕೆಲವೇ ಕೆಲವು ದಿನಗಳ ಹಿಂದಷ್ಟೇ ಸೇರಿಕೊಂಡಿದ್ದರು. ಇಇನ್ನು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರವರ ನಡೆ ಕಂಡು ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವು ತನ್ನ ಅಸ್ತಿತ್ವವನ್ನು ಕಂಡು ಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.

ಬಿಜೆಪಿ ಪಕ್ಷವೂ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಹೆಚ್ಚಿನ ಮಟ್ಟಕ್ಕೆ ಪ್ರಭಾವ ಬೀರಿಲ್ಲ, ಪ್ರಾದೇಶಿಕ ಪಕ್ಷಗಳ ಪಾರುಪತ್ಯದ ನಡುವೆ ಬಿಜೆಪಿ ಪಕ್ಷವು ಸದಾ ತನ್ನ ಅಸ್ತಿತ್ವ ಕಂಡು ಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿತ್ತು. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸಮಾಜದಲ್ಲಿ ಉತ್ತಮ ಹೆಸರು ಪಡೆದು ಕೊಂಡಿರುವ ದಕ್ಷ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರವರು ಸೇರಿಕೊಂಡಿರುವ ಕಾರಣ ಖಂಡಿತವಾಗಿಯೂ ಬಿಜೆಪಿ ಪಕ್ಷವು ಅಣ್ಣಾಮಲೈ ರವರನ್ನು ಬಹಳ ಆಲೋಚಿಸಿ, ಸೂಕ್ತ ಸ್ಥಾನಮಾನ ನೀಡಿ, ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆ ತರಲು ಸಾಧ್ಯವಾದಷ್ಟು ಬಳಸಿಕೊಳ್ಳಲಿದೆ ಎಂಬ ಮಾತುಗಳು ರಾಜಕೀಯ ಪಂಡಿತರ ಬಾಯಿಂದ ಕೇಳಿ ಬಂದಿದ್ದವು. ಇದೀಗ ರಾಜಕೀಯ ಪಂಡಿತರ ಲೆಕ್ಕಾಚಾರಗಳು ನಿಜವಾಗುತ್ತಿವೆ. ಬಿಜೆಪಿ ಪಕ್ಷ ಸೇರಿದ ಕೆಲವೇ ಕೆಲವು ದಿನಗಳಲ್ಲಿ ಅಣ್ಣಾಮಲೈ ರವರಿಗೆ ಭರ್ಜರಿ ಸಿಹಿಸುದ್ದಿ ಒಂದು ಸಿಕ್ಕಿದೆ.
ಇದರಿಂದ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನ ಪಡುತ್ತಿರುವ ಬಿಜೆಪಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲದೇ ತಮಿಳು ನಾಡು ರಾಜಕೀಯದಲ್ಲಿ ಬಿಜೆಪಿ ಪಕ್ಷದ ಈ ನಡೆ ಸಂಚಲನ ಸೃಷ್ಟಿಸಿದೆ.

ಹೌದು ಸ್ನೇಹಿತರೇ, ಬಿಜೆಪಿ ಪಕ್ಷವು ತಮಿಳುನಾಡಿನಲ್ಲಿ ಅಣ್ಣಾಮಲೈ ಅವರನ್ನು ಹಾಗೂ ಅವರ ವರ್ಚಸ್ಸನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ತಯಾರಿ ನಡೆಸಿದ್ದು ಕೇವಲ ಪಕ್ಷಕ್ಕೆ ಸೇರಿದ 4 ದಿನಗಳಲ್ಲಿ ತಮಿಳುನಾಡಿನ ಉಪಾಧ್ಯಕ್ಷ ಪಟ್ಟವನ್ನು ಅಣ್ಣಾಮಲೈ ರವರಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿರುವ ಅಣ್ಣಾಮಲೈ ರವರು ಇನ್ನು ಮುಂದೆ ತಮಿಳುನಾಡಿನ ಉಪಾಧ್ಯಕ್ಷರಾಗಿ ಇರಲಿದ್ದಾರೆ ಎಂದು ತಮಿಳುನಾಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಮುರುಗನ್ ರವರು ಘೋಷಣೆ ಮಾಡಿದ್ದು, ಅಣ್ಣಾಮಲೈ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಬಿಜೆಪಿ ಪಕ್ಷದ ನಿರ್ಧಾರವನ್ನು ಕಂಡ ರಾಜಕೀಯ ಪಂಡಿತರು ಕೇವಲ ನಾಲ್ಕು ದಿನದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಿರುವುದನ್ನು ನೋಡಿದರೇ ಬಿಜೆಪಿ ಪಕ್ಷವು ತಮಿಳುನಾಡಿನಲ್ಲಿ ಅಣ್ಣಾಮಲೈ ರವರನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲು ಸಿದ್ಧವಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.