ಭಾರತಕ್ಕೆ ರಫೇಲ್ ಕುರಿತು ಮತ್ತೊಂದು ಸಿಹಿ ಸುದ್ದಿ ನೀಡಿದ ಫ್ರಾನ್ಸ್ ! ಮುಹೂರ್ತ ಫಿಕ್ಸ್ !

ಭಾರತಕ್ಕೆ ರಫೇಲ್ ಕುರಿತು ಮತ್ತೊಂದು ಸಿಹಿ ಸುದ್ದಿ ನೀಡಿದ ಫ್ರಾನ್ಸ್ ! ಮುಹೂರ್ತ ಫಿಕ್ಸ್ !

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ಪರಿಸ್ಥಿತಿ ಸಾಮಾನ್ಯವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಚೀನಾ ದೇಶದ ಸಂಪೂರ್ಣ ಬುದ್ಧಿಯನ್ನು ಅರಿತುಕೊಂಡಿರುವ ಭಾರತ ದೇಶವು ಯಾವುದೇ ಕಾರಣಕ್ಕೂ ಗಡಿಯಲ್ಲಿನ ತನ್ನ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳಲು ಒಪ್ಪುತ್ತಿಲ್ಲ.

ಇನ್ನು ಚೀನಾ ದೇಶವು ಗಡಿಯಲ್ಲಿನ ತನ್ನ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳುತ್ತೇವೆ ಎಂದು ಸಭೆಗಳು ನಡೆದಾಗ ಹೇಳಿಕೆ ನೀಡಿದರೂ ಸಹ ಕೈಲಾಸ ಪರ್ವತದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಚೀನಾ ದೇಶವು ಭಾರಿ ಸಂಖ್ಯೆಯಲ್ಲಿ ಸೇನೆಯನ್ನ ಜಮಾವಣೆ ಮಾಡುತ್ತಿದೆ. ಭಾರತೀಯ ವಾಯುಪಡೆಯನ್ನು ಗುರಿಯಾಗಿರಿಸಿಕೊಂಡು ಕ್ಷಿಪಣಿಗಳನ್ನು ನಿಯೋಜಿಸುತ್ತಿದೆ. ಇಂತಹ ಸಂದರ್ಭದಲ್ಲಿ ಫ್ರಾನ್ಸ್ ದೇಶದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹೌದು ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ 5 ರಫೇಲ್ ಗಳು ಭಾರತೀಯ ವಾಯುಪಡೆಗೆ ಸೇರಿಕೊಂಡಿರುವ ಕಾರಣ ಭಾರತೀಯ ವಾಯುಪಡೆಗೆ ಆನೆಬಲ ಬಂದಿರುವುದು ಸುಳ್ಳಲ್ಲ.

ಹೀಗಿರುವಾಗ ಗಡಿಯಲ್ಲಿ ಕ್ಷಣ ಕ್ಷಣಕ್ಕೂ ಕಾವು ಏರತೊಡಗಿದೆ ಸಂದರ್ಭದಲ್ಲಿ ಫ್ರಾನ್ಸ್ ದೇಶವು ಮತ್ತೊಂದು ಮಾಹಿತಿಯನ್ನು ಹೊರಹಾಕಿದ್ದು ರಫೆಲ್ ಜೆಟ್ ರಫ್ತಿನ ಎರಡನೇ ಭಾಗವಾಗಿ ಭಾರತಕ್ಕೆ ಮತ್ತಷ್ಟು ರಫೇಲ್ ಗಳನ್ನು ಕಳುಹಿಸಿಕೊಡಲು ಮುಹೂರ್ತ ಫಿಕ್ಸ್ ಮಾಡಿದೆ. ಇದನ್ನು ಸ್ವತಹ ಭಾರತೀಯ ಸೇನೆಯು ಕೂಡಾ ಖಚಿತ ಪಡಿಸಿದ ಕಾರಣ ಇದೀಗ ಭಾರತೀಯ ವಾಯುಪಡೆ ಮತ್ತಷ್ಟು ಬಲಿಷ್ಠ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಕೆಲವೇ ಕೆಲವು ತಿಂಗಳಲ್ಲಿ ಅಂದರೇ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಹಂತದಲ್ಲಿ 4 ರ ರಫೇಲ್ ಜೆಟ್ ಗಳು ಭಾರತೀಯ ವಾಯುಪಡೆಯನ್ನು ಸೇರಿಕೊಳ್ಳಲಿವೆ ಎಂದು ತಿಳಿದು ಬಂದಿದೆ. ಈಗಾಗಲೇ ಭಾರತದಲ್ಲಿರುವ ರಫೇಲ್ ಜೆಟ್ ಗಳಿಂದ ಭಾರತೀಯ ವಾಯುಪಡೆಯ ಪೈಲಟ್ ಗಳು ಸಂಪೂರ್ಣ ತರಬೇತಿಯನ್ನು ಪಡೆದು ಕೊಳ್ಳುತ್ತಿದ್ದು, ಇನ್ನು ನಾಲ್ಕು ರೆಫೈಲ್ ಯುದ್ಧ ವಿಮಾನಗಳು ಕೆಲವೇ ಕೆಲವು ದಿನಗಳಲ್ಲಿ ಭಾರತೀಯ ವಾಯುಪಡೆಗೆ ಸೇರಿಕೊಂಡ ತಕ್ಷಣ ಯುದ್ಧದಲ್ಲಿ ಬಳಸಬಹುದಾಗಿದೆ ಎಂದು ತಿಳಿದು ಬಂದಿದೆ.