ದೇಶದ ಹೆಮ್ಮೆಯ ವಿಚಾರದ ಕುರಿತು ಕಂಗನಾ ಸಿನಿಮಾ ಘೋಷಣೆ! ನೆಟ್ಟಿಗರಿಂದ ಟ್ರೆಂಡಿಂಗ್ ಸೃಷ್ಟಿ !

ನಮಸ್ಕಾರ ಸ್ನೇಹಿತರೇ, ಬಾಲಿವುಡ್ ನಟಿ ಕಂಗನಾ ರಾವತ್ ರವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಹಲವಾರು ವಿಚಾರಗಳ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ್ದಾರೆ. ಕೆಲವರು ಇವರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರೇ, ಬಹುತೇಕ ನೆಟ್ಟಿಗರು ಕಂಗನಾ ರಾವತ್ ರವರ ವಿಚಾರವನ್ನು ಪ್ರತಿಬಾರಿಯೂ ಟ್ರೆಂಡಿಂಗ್ ಮಾಡಿ ಕಂಗನಾ ರಾವತ್ ರವರ ಹೇಳಿಕೆಗಳಿಗೆ ಭರ್ಜರಿ ರೆಸ್ಪಾನ್ಸ್ ನೀಡುತ್ತಾರೆ. ಇನ್ನು ದೇಶದ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ಕಂಗನಾ ರಾವತ್ ರವರು ಇದೀಗ ತಮ್ಮ ಮುಂದಿನ ಚಿತ್ರದ ಕುರಿತು ಘೋಷಣೆ ಮಾಡಿದ್ದಾರೆ.

ಸದಾ ದೇಶ ಹಾಗೂ ಭಾರತೀಯ ಸೇನೆಯ ಪರ ಹೇಳಿಕೆ ನೀಡುವ ಕಂಗನಾ ರಾವತ್ ರವರ ಮುಂದಿನ ಚಿತ್ರವೂ ವಿಶೇಷವಾಗಿ ಭಾರತದ ವಾಯುಪಡೆಯ ಕುರಿತು ಎಂಬುದು ತಿಳಿದು ಬಂದಿದೆ. ಅದರಲ್ಲಿಯೂ ಭಾರತದಲ್ಲಿಯೇ ತಯಾರಾಗಿ ಇಡೀ ವಿಶ್ವದ ಗಮನ ಸೆಳೆದಿರುವ ತೇಜಸ್ ಯುದ್ಧ ವಿಮಾನದ ಕುರಿತು ಕಂಗನಾ ರಾವತ್ ಅವರು ಮುಂದಿನ ಸಿನಿಮಾ ಮಾಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ತೇಜಸ್ ಎಂಬ ಹೆಸರಿನಲ್ಲಿ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಕುರಿತಾದ ಚಿತ್ರ ಇದಾಗಿದ್ದು, ಇದೇ ಡಿಸೆಂಬರ್ ನಿಂದ ತೇಜಸ್ ಟೇಕಾಫ್ ಆಗಲಿದೆ, ಭಾರತೀಯ ವಾಯುಪಡೆಯ ಪೈಲೆಟ್ ಗಳ ಆಹ್ಲಾದಕರ ಕಥೆಯ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಇವರು ತಮ್ಮ ಮುಂದಿನ ಚಿತ್ರ ಘೋಷಣೆ ಮಾಡಿದ ತಕ್ಷಣ ನೆಟ್ಟಿಗರು ಬಾರಿ ಟ್ರೆಂಡಿಂಗ್ ಸೃಷ್ಟಿಸಿದ್ದು, ಕಂಗನಾ ರಾವತ್ ರವರ ಮುಂದಿನ ಚಿತ್ರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ಘೋಷಣೆ ಮಾಡಿ, ತೇಜಸ್ ಚಿತ್ರ ಬಂದು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುವಂತೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಕೆಲವರು ನಿಮಗೆ ಈ ಪಾತ್ರ ಮಾಡಲು ಯಾವುದೇ ಅರ್ಹತೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಕಂಗನಾ ರಾವತ್ ರವರ ಚಿತ್ರವನ್ನು ಸೋಲಿಸುತ್ತೇವೆ ಎಂದು ತಮ್ಮದೇ ಆದ ಅಭಿಪ್ರಾಯ ಕೂಡ ವ್ಯಕ್ತ ಪಡಿಸಿದ್ದಾರೆ. ಆದರೆ ಇವರ ಬೆಂಬಲಿತ ಟ್ವೀಟುಗಳು ಹೆಚ್ಚಾಗಿ ಕಂಡು ಬಂದಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ. ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Post Author: Ravi Yadav