ಅಲು’ಗಾಡುತ್ತಿದೆ ಸಲ್ಮಾನ್ ಭವಿಷ್ಯ ! ಬಿಗ್ ಶಾಕ್ ನೀಡಿದ ಸುಶಾಂತ್ ಫ್ಯಾನ್ಸ್ ಮಾಡಲು ಹೊರಟಿರುವುದಾದರೂ ಏನು ಗೊತ್ತಾ?

ಅಲು’ಗಾಡುತ್ತಿದೆ ಸಲ್ಮಾನ್ ಭವಿಷ್ಯ ! ಬಿಗ್ ಶಾಕ್ ನೀಡಿದ ಸುಶಾಂತ್ ಫ್ಯಾನ್ಸ್ ಮಾಡಲು ಹೊರಟಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ರವರ ಕಹಿ ಘಟನೆಯ ಬಳಿಕ ಸುಶಾಂತ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ವಜನಪಕ್ಷಪಾತದ ಬಾಲಿವುಡ್ ಚಿತ್ರರಂಗದ ಸೆಲೆಬ್ರಿಟಿಗಳ ಚಿತ್ರಗಳನ್ನು ನೋಡಬಾರದು ಎಂಬ ಅಭಿಯಾನ ಗಳ ಮೂಲಕ ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಈ ಅಭಿಯಾನಗಳ ನಿಟ್ಟಿನಲ್ಲಿ ಬಹಳ ದೊಡ್ಡ ದೊಡ್ಡ ಗೆಲುವುಗಳನ್ನು ಸಾಧಿಸಿದ್ದಾರೆ. ಕರನ್ ಜೋಹರ್ ರವರ ಕಾಫಿ ವಿತ್ ಕರಣ್ ಶೋ ಇನ್ನು ಮುಂದೆ ಪ್ರಸಾರ ವಾಗದಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಡಕ್ 2 ಚಿತ್ರದ ಟ್ರೈಲರ್ ಗೆ ಬಂದ ಅಭಿಪ್ರಾಯಗಳನ್ನು ನೋಡಿದರೇ ಸಿನಿಮಾ ಬಿಡುಗಡೆ ಮಾಡಬೇಕು ಅಥವಾ ಬೇಡವೋ ಎಂಬ ಆಲೋಚನೆ ಮೂಡುವುದು ಸಹಜ.

ಹೀಗಿರುವಾಗ ಶಾರುಖ್ ಖಾನ್ ಅಭಿಮಾನಿಯೊಬ್ಬರು ಶಾರುಖ್ ಖಾನ್ ರ ಮುಂದಿನ ಚಿತ್ರದ ‌ಟ್ರೈಲರ್ ಅನ್ನು ತಾವೇ ಸೃಷ್ಟಿಸಿ ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಮಾಡಿದರು, ಅಭಿಮಾನಿ ತಯಾರಿಸಿದ ಟ್ರೈಲರ್ ಗೂ ಕೂಡ ಸುಶಾಂತ ಸಿಂಗ್ ಅಭಿಮಾನಿಗಳು ಬುದ್ಧಿ ಕಲಿಸಲು ಮುಂದಾಗಿ ಅಲ್ಲಿಯೂ ಕೂಡ ಗೆದ್ದು ಬೀಗಿದರು, ಲಕ್ಷಾಂತರ ಡಿಸ್ ಲೈಕ್ ಗಳು ಬಂದವು, ಇದು ಅಧಿಕೃತ ಟ್ರೈಲರ್ ಅಲ್ಲ, ಕೇವಲ ಅಡಭಿಮಾನಿಯೊಬ್ಬನು ಸೃಷ್ಟಿಸಿದ ಟ್ರೈಲರ್. ಇನ್ನು ಅಧಿಕೃತ ಟ್ರೈಲರ್ ರಿಲೀಸ್ ಆದರೆ ಪರಿಸ್ಥಿತಿ ಯಾವ ರೀತಿ ಇರಲಿದೆ ಎಂಬುದನ್ನು ನೀವೇ ಆಲೋಚಿಸಿ. ಇದೀಗ ಈ ರೀತಿಯ ಹಲವಾರು ಗೆಲುವುಗಳ ನಂತರ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಸಲ್ಮಾನ್ ಖಾನ್ ರವರ ಕದ ತ’ಟ್ಟಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಸಲ್ಮಾನ್ ಖಾನ್ ರವರು ಸ್ವಜನಪಕ್ಷಪಾತದ ಮತ್ತೊಂದು ಮುಖ ಎಂದು ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಮೊದಲಿನಿಂದಲೂ ವಾ’ದ ಮಂಡಿ’ಸುತ್ತಿದ್ದಾರೆ. ಹೀಗಿರುವಾಗ ಸಲ್ಮಾನ್ ಖಾನ್ ರವರಿಗೆ ಬುದ್ಧಿ ಕಲಿಸಲು ಸಲ್ಮಾನ್ ಖಾನ್ ರವರು ನಿರ್ಮಾಪಕರಾಗಿ ಹಣ ಹೂಡಿಕೆ ಮಾಡುತ್ತಿರುವ ದ ಕಪಿಲ್ ಶರ್ಮಾ ಶೋ ಅನ್ನು ಯಾರು ನೋಡಬಾರದು, ಈ ಮೂಲಕ ಸಲ್ಮಾನ್ ಖಾನ್ ಅವರಿಗೆ ಬುದ್ದಿ ಕಲಿಸೋಣ. ಮುಂದೆ ಇನ್ನೂ ಅವರ ಹೆಚ್ಚಿನ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬುದು ನಮಗೆ ತಿಳಿದಿದೆ. ಆದರೆ ನಾವು ಚಿತ್ರಗಳನ್ನಷ್ಟೇ ಅಲ್ಲದೆ ಅವರು ಹೂಡಿಕೆ ಮಾಡುತ್ತಿರುವ ಪ್ರತಿಯೊಂದು ಶೋ ಗಳ ಮೇಲೂ ನಮ್ಮ ಅಭಿಯಾನಗಳನ್ನು ನಡೆಸಬೇಕು ಹಾಗೂ ಈ ಹಿಂದಿನ ಅಭಿಯಾನ ಗಳಂತೆ ಈ ಅಭಿಯಾನದಲ್ಲಿಯೂ ಕೂಡ ಗೆಲುವು ಕಾಣಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.