ಭಾರತೀಯರಿಗೆ ಸಿಹಿ ಸುದ್ದಿ, ಮೊಟ್ಟಮೊದಲ ಸ್ವದೇಶಿ ಯುದ್ಧ ವಿಮಾನ ನೌಕೆಯ ಕುರಿತು ಹೊರಬಿತ್ತು ಮಹತ್ವದ ಮಾಹಿತಿ !

ಭಾರತೀಯರಿಗೆ ಸಿಹಿ ಸುದ್ದಿ, ಮೊಟ್ಟಮೊದಲ ಸ್ವದೇಶಿ ಯುದ್ಧ ವಿಮಾನ ನೌಕೆಯ ಕುರಿತು ಹೊರಬಿತ್ತು ಮಹತ್ವದ ಮಾಹಿತಿ !

ನಮಸ್ಕಾರ ಸ್ನೇಹಿತರೇ ಇದೀಗ ಭಾರತದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ನೌಕೆಯ ತಾಕತ್ತು ಎಲ್ಲರಿಗೂ ತಿಳಿದಿದೆ. ವಿಶ್ವದಲ್ಲಿಯೇ ಬಲಾಡ್ಯತೆ ಯುದ್ಧ ನೌಕೆ ಗಳಲ್ಲಿ ಒಂದಾದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯ ಜೊತೆ ಇದೀಗ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆ ಸೇರಿಕೊಂಡರೆ ಹೇಗಿರುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಂಡರೇ ಒಂದು ಹೆಮ್ಮೆ ಮನದಲ್ಲಿ ಮೂಡುತ್ತದೆ. ಬಲಿಷ್ಠ ಭಾರತದ ಕನಸಿಗೆ ಐಎನ್ಎಸ್ ವಿಕ್ರಾಂತ್ ತನ್ನದೇ ಆದ ವಿಶೇಷ ರೀತಿಯಲ್ಲಿ ಕೊಡುಗೆ ನೀಡಲಿದೆ. ಈ ಕುರಿತು ಮಹತ್ವದ ಮಾಹಿತಿ ಹೊರ ಬಿದ್ದಿದ್ದು ಭಾರತೀಯರೆಲ್ಲರಿಗೂ ಸಿಹಿ ಸುದ್ದಿ ಸಿಕ್ಕಿದೆ. ಆದರೆ ವಿಪರ್ಯಾಸವೆಂದರೆ 24 ಗಂಟೆ ಸುದ್ದಿ ಪ್ರಸಾರ ಮಾಡುವ ಯಾವುದೇ ಮಾಧ್ಯಮಗಳು ಕೂಡ ಈ ಕುರಿತು ವರದಿ ಸಲ್ಲಿಸಿಲ್ಲ.

ಹೌದು ಸ್ನೇಹಿತರೇ ಇದೀಗ ಐಎನ್ಎಸ್ ವಿಕ್ರಾಂತ್ ಕುರಿತು ಮಹತ್ವದ ಮಾಹಿತಿ ಹೊರಬಿ’ದ್ದಿದ್ದು, ಇದರ ಕಂಪ್ಲೀಟ್ ಡೀಟೇಲ್ಸ್ ಅನ್ನು ನಾವು ಎಂದು ತಿಳಿದುಕೊಳ್ಳೋಣ. ಸ್ನೇಹಿತರೇ ರಷ್ಯಾದಿಂದ ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ವಿಮಾನ ನೌಕೆಯನ್ನು ಖರೀದಿಸಿದ ಮೇಲೆ ಭಾರತದಲ್ಲಿ ಯಾಕೆ ಯುದ್ಧ ವಿಮಾನವನ್ನು ನಿರ್ಮಿಸಬಾರದು ಎಂದು ಹೇಳಿ ಅಂದಿನಿಂದ ಆರಂಭವಾದ ಕೆಲಸ ಇದೀಗ ಬಹುತೇಕ ಪೂರ್ಣಗೊಂಡಿದೆ. ಬಂದರುಗಳಲ್ಲಿ ನಡೆದ ಎಲ್ಲ ಪ್ರಯೋಗಗಳಲ್ಲಿ ಐಎನ್ಎಸ್ ವಿಕ್ರಾಂತ್ ಯಶಸ್ಸು ಸಾಧಿಸಿದೆ.

ಇನ್ನು ಯುದ್ಧ ವಿಮಾನ ನೌಕೆ ಐಎನ್ಎಸ್ ವಿಕ್ರಾಂತ್ ಶೀಘ್ರದಲ್ಲೇ ಸಮುದ್ರಕ್ಕೆ ಇಳಿಯಲಿದೆ. ಕೋರೋನ ಪರಿಣಾಮ ಐಎನ್ಎಸ್ ವಿಕ್ರಾಂತ್ ಸಮುದ್ರಕ್ಕೆ ಇಳಿಯುವುದು ಕೊಂಚ ತಡವಾಗಿದ್ದು, ಮುಂದಿನ ಸೆಪ್ಟೆಂಬರ್ನಲ್ಲಿ ಸಮುದ್ರದ ನೀರಿನಲ್ಲಿ ಪ್ರಯೋಗಗಳು ಆರಂಭವಾಗಿವೆ. ಯುದ್ಧದ ಸಂದರ್ಭದಲ್ಲಿ ಬಳಸಬೇಕಾದ ಕಾರಣ ಐಎನ್ಎಸ್ ವಿಕ್ರಾಂತ್ ಅನ್ನು ಬಹಳ ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಇನ್ನು ಐಎನ್ಎಸ್ ವಿಕ್ರಾಂತ್ 26 ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಶಕ್ತಿಯನ್ನು ಹೊಂದಿದ್ದು, ಇದರ ಜೊತೆಗೆ 10 ಹೆಲಿಕ್ಯಾಪ್ಟರ್ ಗಳನ್ನು ಕೂಡ ಹೊತ್ತು ಸಾಗಲಿದೆ. ಇನ್ನು ಈಗಾಗಲೇ ಅಮೇರಿಕಾ ದೇಶದ ಸೀ-ಕಿಂಗ್ ಹೆಲಿಕ್ಯಾಪ್ಟರ್ ಗಳು ಸೇರಿದಂತೆ ಧ್ರುವ ಹೆಲಿಕ್ಯಾಫ್ಟರುಗಳು ಹಾಗೂ ಮಿಗ್-29 ವಿಮಾನಗಳನ್ನು ಐಎನ್ಎಸ್ ವಿಕ್ರಾಂತ್ ನಲ್ಲಿ ನಿಯೋಜಿಸಿ ವಿಶಾಖಪಟ್ಟಣಂ ಬಳಿ ಇರುವ ಭಾರತೀಯ ನೌಕಾ ನೆಲೆಯಲ್ಲಿ ನಿಯೋಜಿಸಬೇಕು ಎಂದು ಭಾರತೀಯ ನೌಕಾಪಡೆ ಆಲೋಚನೆ ನಡೆಸಿದೆ. ಮುಂದಿನ ಪರೀಕ್ಷೆ ಹಂತಗಳನ್ನು ಯಶಸ್ವಿಯಾಗಿ ಐಎನ್ಎಸ್ ವಿಕ್ರಾಂತ್ ಪೂರ್ಣಗೊಳಿಸಿದ್ದಲ್ಲಿ ಖಂಡಿತ ಇದು ಭಾರತೀಯ ನೌಕಾಪಡೆಯಲ್ಲಿ ಒಂದು ಐತಿಹಾಸಿಕ ದಿನವಾಗುವುದು, ಅಷ್ಟೇ ಅಲ್ಲದೇ ಭಾರತೀಯ ನೌಕಾಪಡೆಗೆ ಆನೆಬಲ ಹೊತ್ತು ಬರುತ್ತದೆ.