ಭರ್ಜರಿ ಯಶಸ್ಸು ಸಾಧಿಸಿದ ಯೋಗಿ ಯೋಜನೆಯನ್ನು ದೇಶದೆಲ್ಲೆಡೆ ಜಾರಿಗೊಳಿಸಲು ನಿರ್ಧಾರ ಮಾಡಿ ಮೋದಿ ಟೀಮ್ ! ಹೇಗೆ ಗೊತ್ತಾ?

ಭರ್ಜರಿ ಯಶಸ್ಸು ಸಾಧಿಸಿದ ಯೋಗಿ ಯೋಜನೆಯನ್ನು ದೇಶದೆಲ್ಲೆಡೆ ಜಾರಿಗೊಳಿಸಲು ನಿರ್ಧಾರ ಮಾಡಿ ಮೋದಿ ಟೀಮ್ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಆತ್ಮ ನಿರ್ಭರ್ ಭಾರತ ಎಂಬ ಯೋಜನೆಗೆ ಬಲತುಂಬಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ದಿನೇ ದಿನೇ ಕೈಗೊಳ್ಳುತ್ತಿದೆ. ಈಗಾಗಲೇ ಹಲವಾರು ದೇಶಗಳಿಂದ ಆಮದಾಗುತ್ತಿರುವ ವಸ್ತುಗಳನ್ನು ಭಾರತದಲ್ಲಿಯೇ ತಯಾರಿ ಮಾಡಬೇಕು ಎಂಬ ಆಲೋಚನೆಯೊಂದಿಗೆ ಹಲವಾರು ದೇಶಗಳ ಜೊತೆ ಆಮದನ್ನು ಕಡಿತಗೊಳಿಸಿದೆ. ಅದರಲ್ಲೂ ಪ್ರಮುಖವಾಗಿ ಚೀನಾ ದೇಶದಿಂದ ಆಮದಾಗುತ್ತಿದ್ದ ಲಕ್ಷಾಂತರ ಕೋಟಿ ಬೆಲೆ ಬಾಳುವ ವಸ್ತುಗಳು ಇದೀಗ ನಿಂತುಹೋಗಿದೆ. ಆದರೆ ಇಷ್ಟು ಮಾಡಿದರೆ ಸಾಕಾಗುವುದಿಲ್ಲ, ಬದಲಾಗಿ ದೇಶದೆಲ್ಲೆಡೆ ತಯಾರಿ ಮಾಡುವ ವಸ್ತುಗಳನ್ನು, ಇಡೀ ದೇಶಕ್ಕೆ ತಲುಪಿಸಬೇಕು ಹಾಗೂ ಇದು ಯಾವುದೇ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರ ಸೀಮಿತವಾಗಿರಬಾರದು. ಪ್ರಮುಖವಾಗಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಬೇಕು.

ಇದೇ ನಿಟ್ಟಿನಲ್ಲಿ ಆಲೋಚನೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ ರವರ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಜಕಾರಣಿಗಳು ಆಲೋಚನೆ ಮಾಡದಂತೆ ಉತ್ತರ ಪ್ರದೇಶ ದಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು ಹಾಗೂ ಅಲ್ಲಿನ ಜನರಿಗೆ ನಿಮಗೆ ವಸ್ತುಗಳನ್ನು ತಯಾರಿ ಮಾಡಲು ಬರುವುದಿಲ್ಲ, ನೀವು ಕಂಪನಿಗಳಿಗೆ ಅರ್ಹರಲ್ಲ, ನಿಮಗೆ ವಿದ್ಯಾಭ್ಯಾಸ ಇಲ್ಲ ಎಂದಲ್ಲಾ ಧೂ’ಷಿಸುವ ಬದಲು ಯೋಗಿ ಆದಿತ್ಯನಾಥ್ ರವರು ನಿಮಗೆ ತಿಳಿದಿರುವಂತಹ ಕೆಲಸಗಳನ್ನು ಮಾಡಿ, ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಜಿಲ್ಲೆಯಲ್ಲಿ ಅಲ್ಲಿನ ಜನರು ತಮ್ಮ ಪೂರ್ವಜರ ಕಾಲದಿಂದಲೂ ತಯಾರಿ ಮಾಡಿಕೊಂಡು ಬರುತ್ತಿರುವ ವಸ್ತುಗಳನ್ನು ‌ನೀವೇ ಸಣ್ಣ ಕೈಗಾರಿಕಾ ರೂಪದಲ್ಲಿ ಉತ್ಪಾದನೆ ಘಟಕ ಸ್ಥಾಪಿಸಿ, ನಿಮ್ಮಿಂದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ‌ಕೆಲಸಕ್ಕೆ ಬೇಕಾದ ಸಂಪೂರ್ಣ ಮಾಹಿತಿ ಹಾಗೂ ಉತ್ತೇಜನ ಸರ್ಕಾರ ನೀಡುತ್ತದೆ ಎಂದು ಹೇಳಿ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಹೆಸರಿನ ಅಡಿಯಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದರು.

ಯೋಜನೆ ಜಾರಿಯಾದ ಬಳಿಕ ಉತ್ತರ ಪ್ರದೇಶ ಜನರು ತಾವು ಮಾಡಿದ ಉತ್ಪನ್ನಗಳನ್ನು ಮೊದಮೊದಲಿಗೆ ಸುತ್ತಮುತ್ತಲಿನ ಪ್ರದೇಶಗಳಿಗೆ ತಲುಪಿಸಲು ಆರಂಭಿಸಿದರು. ತದನಂತರ ಕ್ರಮೇಣ ನಗರ ಪ್ರದೇಶಗಳಿಗೆ ಉತ್ಪನ್ನಗಳನ್ನು ಸರ್ಕಾರ ತಲುಪಿಸುವ ವ್ಯವಸ್ಥೆ ಮಾಡಿತು. ಇದಾದ ಬಳಿಕ ಇದೀಗ ಉತ್ತರ ಪ್ರದೇಶದ ಯಾವುದೋ ಮೂಲೆಯಲ್ಲಿ ವಸ್ತು ತಯಾರಿಸಿದರು ಕೂಡ ಜನರು ನೇರವಾಗಿ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಚಿಕ್ಕ ಬೊಂಬೆ ಇಂದ ಹಿಡಿದು, ಆಹಾರ ಧಾನ್ಯಗಳು, ತಿಂಡಿ ತಿನಿಸುಗಳು ಸೇರಿದಂತೆ ಕಂಬಳಿ, ಕರಕುಶಲ ವಸ್ತುಗಳನ್ನು ಕೂಡ ಫ್ಲಿಪ್ಕಾರ್ಟ್ ಸಂಸ್ಥೆಯು ಯೋಗಿ ಆದಿತ್ಯನಾಥ ರವರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಆನ್ಲೈನಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ಇಡೀ ದೇಶದಲ್ಲಿ ಉತ್ತರ ಪ್ರದೇಶದ ಸರಕುಗಳ ಸಾಗಾಣಿಕೆ ನಡೆಯುತ್ತಿದೆ.

ಈ ಯೋಜನೆ ಇದೀಗ ಬಹಳಷ್ಟು ಯಶಸ್ಸು ಕಾಣುತ್ತಿದ್ದು, ಇದರಿಂದ ಸಣ್ಣ ಕೈಗಾರಿಕೆಗಳಿಗೆ ಆನೆಬಲ ಬಂದಂತಾಗಿದೆ. ಇದನ್ನು ಗಮನಿಸಿರುವ ಕೇಂದ್ರ ಸರ್ಕಾರವು ಆತ್ಮ ನಿರ್ಭಾರ ಯೋಜನೆಯ ಅಡಿಯಲ್ಲಿ ಇಡೀ ದೇಶದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಯೋಜನೆಯಲ್ಲಿ ಗ್ರಾಮೀಣ ಭಾರತದ ಆರ್ಥಿಕ ಸಾಮರ್ಥ್ಯವನ್ನು ಗುರುತಿಸಿ ಅವರಲ್ಲಿರುವ ಕರಕುಶಲತೆಯನ್ನು ಹೊರತೆಗೆದು, ಆ ಪ್ರದೇಶದ ಜನರಿಗೆ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಇಡೀ ದೇಶದ ಮೂಲೆ ಮೂಲೆಯಲ್ಲಿಯೂ ಕೈಗಾರಿಕೆಗಳನ್ನು ಸೃಷ್ಟಿಸಲು ಹೊಸ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ. ಕರ್ನಾಟಕದಲ್ಲಿಯೂ ಕೂಡ ಯೋಜನೆ ಜಾರಿಯಾಗಲಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಜನರು ತಾವು ಪರಿಣಿತಿ ಹೊಂದಿರುವಂತಹ ಕ್ಷೇತ್ರದಲ್ಲಿ ಕೆಲಸ ಮಾಡಿ ಸಣ್ಣ ಕೈಗಾರಿಕೆಗಳ ಮೂಲಕ ತಮ್ಮ ವಸ್ತುಗಳನ್ನು ದೇಶದ ಇನ್ನಿತರ ಮೂಲೆಗಳಿಗೆ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಅವಕಾಶವನ್ನು ಪಡೆದು ಕೊಳ್ಳಲಿದ್ದಾರೆ. ಈ ರೀತಿ ಮಾಡುವ ಮೂಲಕ ದೇಶವನ್ನು ಸ್ವಾವಲಂಬಿ ಮಾಡಬಹುದು ಎಂಬುದು ಕೇಂದ್ರ ಸರ್ಕಾರದ ಆಲೋಚನೆಯಾಗಿದೆ. ಈ ಆಲೋಚನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.