ಗಡಿಯಲ್ಲಿ ಚೀನಾ ದೇಶದ ಯುದ್ಧೋನ್ಮಾದ ಕಂಡು ಪ್ರತಿಯೊಬ್ಬ ಸೈನಿಕರಿಗೂ ತಲುಪಿತು ವಿಶೇಷ ಅಸ್ತ್ರ ! ಹೇಗಿದೆ ಗೊತ್ತಾ?

ಗಡಿಯಲ್ಲಿ ಚೀನಾ ದೇಶದ ಯುದ್ಧೋನ್ಮಾದ ಕಂಡು ಪ್ರತಿಯೊಬ್ಬ ಸೈನಿಕರಿಗೂ ತಲುಪಿತು ವಿಶೇಷ ಅಸ್ತ್ರ ! ಹೇಗಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ಹಾಗೂ ಭಾರತ ದೇಶದ ಜೊತೆಗಿನ ಮಾತುಕತೆಗಳು ಸಂಪೂರ್ಣವಾಗಿ ವಿಫಲಗೊಳ್ಳುತ್ತಿವೆ. ಸಭೆಗಳಲ್ಲಿ ಒಪ್ಪಿಕೊಂಡರೂ ಕೂಡ ಮತ್ತೊಮ್ಮೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ.‌ ಇನ್ನು ಚೀನಾ ದೇಶದ ಸೈನಿಕರು ಈಗಾಗಲೇ ತಮ್ಮ ಕುಟುಂಬಗಳಿಗೆ ವಿದಾಯ ಪತ್ರ ಬರೆದಿರುವುದು ಕೂಡ ಬಹಿರಂಗಗೊಂಡಿದ್ದು, ಕೈಲಾಸ ಪರ್ವತದ ಸುತ್ತ ಮುತ್ತ ಚೀನಾ ದೇಶವು ತನ್ನ ವಾಯುಪಡೆ ಹಾಗೂ ಕಾಲ್ನಡಿಗೆಯ ಸೇನೆಯನ್ನ ಜಮಾವಣೆ ಮಾಡುತ್ತಿರುವುದು ತಿಳಿದು ಬಂದಿದೆ. ಇದನ್ನೆಲ್ಲ ಗಮನಿಸಿದ ಬಿಪಿನ್ ರಾವತ್ ರವರು ಕೇವಲ ನೆನ್ನೆಯಷ್ಟೇ, ಭಾರತ ಹಾಗೂ ಚೀನಾ ದೇಶದ ಜೊತೆ ಮಾತುಕತೆಗಳು ಸಂಪೂರ್ಣವಾಗಿ ವಿಫಲಗೊಳ್ಳುತ್ತಿವೆ.

ಚೀನಾ ದೇಶ ಸಭೆಯಲ್ಲಿ ಒಪ್ಪಿಕೊಂಡರೂ ಕೂಡ ಗಡಿ ದಾಟಿದ ಬಳಿಕ ಮತ್ತೆ ಅದೇ ಕೆಲಸಗಳಿಗೆ ಕೈಹಾಕುತ್ತಿದೆ, ಸಭೆಗಳಲ್ಲಿ ಮಾತು ನೀಡಿದಂತೆ ನಡೆದುಕೊಳ್ಳುತ್ತಿಲ್ಲ. ಅಷ್ಟೇ ಅಲ್ಲದೇ ಗಡಿಯಲ್ಲಿ ಯುದ್ಧ ವಿಮಾನಗಳು ಹೆಲಿಕ್ಯಾಫ್ಟರ್ ಗಳ ಬಾರಿ ಹಾರಾಟವನ್ನು ನಡೆಸುತ್ತಿದೆ. ಒಂದು ವೇಳೆ ಇದೇ ರೀತಿ ಮಾತುಕತೆಗಳು ವಿಫಲವಾಗುತ್ತಿದ್ದರೇ ಮಿಲಿಟರಿ ಆಯ್ಕೆಯನ್ನು ಕೂಡ ನಾವು ಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕವೂ ಚೀನಾ ದೇಶ ಇಂದು ಕೂಡ ಅದೇ ರೀತಿಯ ವರ್ತನೆ ಮುಂದುವರಿಸಿದ್ದು ಇದೀಗ ಇದನ್ನು ಕಂಡ ಭಾರತೀಯ ಸೇನೆಯು ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಹೊಸ ಬ್ರಹ್ಮಾಸ್ತ್ರವನ್ನು ಕಳುಹಿಸಿ ಕೊಟ್ಟಿದೆ.

ಹೌದು ಸ್ನೇಹಿತರೇ, ಚೀನಾ ದೇಶಕ್ಕೆ ಬುದ್ದಿ ಕಲಿಸುವ ಸಲುವಾಗಿ ಯಾವುದೇ ಹೆಲಿಕ್ಯಾಪ್ಟರ್ ಗಳು ಹಾಗೂ ಫೈಟರ್ ಹೆಲಿಕ್ಯಾಪ್ಟರ್ ಗಳನ್ನು ಕ್ಷಣಮಾತ್ರದಲ್ಲಿ ಉಡೀಸ್ ಮಾಡಬಹುದಾದ ಇಗ್ಲಾ ಕ್ಷಿಪಣಿ ಶ್ರೇಣಿಯನ್ನು ಸೈನಿಕರಿಗೆ ಕಳುಹಿಸಿಕೊಟ್ಟಿದೆ. ಈ ಕ್ಷಿಪಣಿ ವ್ಯವಸ್ಥೆಯ ವಿಶೇಷವೇನೆಂದರೆ, ಚೀನಾ ದೇಶದ ವಾಯುಪಡೆ ಭಾರತದ ವಾಯು ಪ್ರದೇಶಕ್ಕೆ ಪ್ರವೇಶಿಸಿದ ತಕ್ಷಣ ಕಾಲ್ನಡಿಗೆಯ ಸೈನಿಕರು ಕೂಡ ತಮ್ಮ ಭುಜದ ಮೇಲೆ ಅವುಗಳನ್ನು ಹೊತ್ತುಕೊಂಡು ಕ್ಷಿಪಣಿಗಳನ್ನು ಹಾರಿಸಬಹುದಾಗಿದೆ. ಇವುಗಳು ಬಹಳ ಹಗುರವಾಗಿರಲಿದ್ದು, ಪ್ರತಿಯೊಬ್ಬರು ಒಂದೊಂದು ಕ್ಷಿಪಣಿ ವ್ಯವಸ್ಥೆಯನ್ನು ಹೊತ್ತೋಯಬಹುದಾಗಿದೆ. ಇದರಿಂದ ಚೀನಿ ವಾಯುಪಡೆಗೆ ಕಾಲ್ನಡಿಗೆಯ ಸೈನಿಕರು ಉತ್ತರ ನೀಡುವ ಶಕ್ತಿಯನ್ನು ಪಡೆದು ಕೊಂಡಿದ್ದಾರೆ. ಒಂದು ವೇಳೆ ಚೀನಿ ವಾಯುಪಡೆಯು ಇದ್ದಕ್ಕಿದ್ದಂತೆ ಭಾರತದ ವಾಯು ಪ್ರದೇಶಕ್ಕೆ ಎಂಟ್ರಿ ಕೊಟ್ಟರೆ ವಾಯುಪಡೆ ಅಖಾಡಕ್ಕೆ ಇಳಿಯುವ ಕೆಲವು ಕ್ಷಣಗಳವರೆಗೂ ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಸೈನಿಕರಿಗೆ ಈ ವಿಶೇಷ ಬ್ರಹ್ಮಾಸ್ತ್ರವನ್ನು ಭಾರತೀಯ ಸೇನೆ ಕಳುಹಿಸಿಕೊಟ್ಟಿದೆ. ಒಟ್ಟಿನಲ್ಲಿ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ ಚೀನಾ ಯಾವ ಧೈರ್ಯದ ಮೇಲೆ ಯುದ್ಧೋನ್ಮಾದದಲ್ಲಿ ಇದೆ ಎಂಬುದು ಯಾರಿಗೂ ಉತ್ತರ ತಿಳಿಯದ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.