ಐಪಿಎಲ್ ನಲ್ಲಿ ಬಲಾಡ್ಯ ಬೌಲಿಂಗ್ ವಿಭಾಗವನ್ನು ಹೊಂದಿರುವ ಟಾಪ್ 3 ತಂಡಗಳು

ಐಪಿಎಲ್ ನಲ್ಲಿ ಬಲಾಡ್ಯ ಬೌಲಿಂಗ್ ವಿಭಾಗವನ್ನು ಹೊಂದಿರುವ ಟಾಪ್ 3 ತಂಡಗಳು

ನಮಸ್ಕಾರ ಸ್ನೇಹಿತರೇ, ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸ್ಮನ್ಗಳ ದರ್ಬಾರು ಎಷ್ಟೇ ನಡೆದರೂ ಕೂಡ ಹಲವಾರು ಪಂದ್ಯಗಳನ್ನು ಏಕಪಕ್ಷೀಯವಾಗಿ ಹಲವಾರು ತಂಡಗಳಿಗೆ ತಮ್ಮ ತಮ್ಮ ಬೌಲಿಂಗ್ ವಿಭಾಗಗಳು ಗೆಲ್ಲಿಸಿ ಕೊಡುತ್ತವೆ. ಬೌಲಿಂಗ್ ವಿಭಾಗದಲ್ಲಿ ಕೊಂಚ ಏರುಪೇರಾದರೂ ಬ್ಯಾಟ್ಸ್ಮನ್ಗಳು ಕಲೆಹಾಕಿದ ರನ್ ಶಿಖರವು ಕೂಡ ಕ್ಷಣ ಮಾತ್ರದಲ್ಲಿ ಕರಗಿ ಹೋಗುತ್ತದೆ. ಹೀಗಿರುವಾಗ ಇನ್ನು ಕೆಲವೇ ಕೆಲವು ದಿನಗಳಲ್ಲಿ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಟಾಪ್ 3 ತಂಡಗಳ ಬಗ್ಗೆ ತಿಳಿದುಕೊಳ್ಳೋಣ.

ಮೂರನೇ ಸ್ಥಾನದಲ್ಲಿ ಕಳೆದ 2016 ರಿಂದ ಪ್ರತಿ ವರ್ಷವೂ ಪ್ಲೇ ಆಫ್ ಗೆ ಅರ್ಹತೆ ಪಡೆಯುತ್ತಿರುವ ಹಾಗೂ 2016 ನಂತರ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರರನ್ನು ಒಳಗೊಂಡಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಸ್ಥಾನ ಪಡೆದುಕೊಂಡಿದೆ. ಸನ್ರೈಸರ್ಸ್ ತಂಡದ ಸಂಭಾವ್ಯ ತಂಡದಲ್ಲಿ ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಂದೀಪ್ ಶರ್ಮಾ, ಬಸಿಲ್ ತಂಪಿ, ಶಹಬಾಜ್ ನದೀಮ್ ರವರಂತಹ ಉತ್ತಮ ಬೌಲರ್ಗಳು ಇದ್ದು, ಹೊಸ ಚೆಂಡಿನೊಂದಿಗೆ ಬೌಲಿಂಗ್ ಪ್ರಕ್ರಿಯೆಯನ್ನು ಆರಂಭಿಸಲು ಭುವನೇಶ್ವರ್ ಕುಮಾರ್ ಹಾಗೂ ಸಂದೀಪ್ ಸಿಂಗ್ ರವರು ಬಹಳ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಇನ್ನು ಆಫ್ಘಾನಿಸ್ತಾನ ತಂಡದ ಆಟಗಾರರಾದ ರಶೀದ್ ಖಾನ್ ಹಾಗೂ ನಬಿ ರವರು ಪಂದ್ಯದ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡುವ ಕಾರಣ ಸನ್ರೈಸರ್ಸ್ ತಂಡಕ್ಕೆ ಕ್ರಿಕೆಟ್ ವಿಶ್ಲೇಷಕರು ಮೂರನೇ ಸ್ಥಾನವನ್ನು ನೀಡಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಂಡ ಸ್ಥಾನ ಪಡೆದುಕೊಂಡಿದ್ದು, ಸೌತ್ ಆಫ್ರಿಕಾ ತಂಡದ ಕಗಿಸೋ ರಬಾಡ ರವರ ನೇತೃತ್ವದಲ್ಲಿ ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಸಂದೀಪ್ ಲಮಿಚಾನೆ ಸೇರಿದಂತೆ ಅಕ್ಷರ ಪಟೇಲ್, ಅಮಿತ್ ಮಿಶ್ರಾ ರವರು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ತುಂಬಲಿದ್ದಾರೆ. ಇನ್ನುಳಿದಂತೆ ಹರ್ಷ ಪಟೇಲ್, ವಿದೇಶಿ ಆಲ್-ರೌಂಡರ್ ಗಳಾದ ಕಿಮೋ ಪಾಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ರವರು ಕೂಡ ಅಗತ್ಯದ ಸಂದರ್ಭದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಲ್ಲಾ ಆಯ್ಕೆಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎರಡನೇ ಸ್ಥಾನದಲ್ಲಿ ತಂದು ನಿಲ್ಲಿಸಿವೆ.

ಇನ್ನು ಮೊದಲನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸ್ಥಾನ ಪಡೆದು ಕೊಂಡಿದ್ದು, ವಿಶೇಷವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಟ್ಟಾಗಿರುವ 24 ಆಟಗಾರರಲ್ಲಿ 13 ಆಟಗಾರರು ಯಾವುದೇ ಪಂದ್ಯದಲ್ಲಿಯೂ ಕೂಡ 4 ಓವರ್ಗಳ ಕೋಟಾವನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕ್ರಿಕೆಟ್ ವಿಶ್ಲೇಷಕರು ತಿಳಿಸಿದ್ದಾರೆ. ದೀಪಕ್ ಚಹರ್, ಬ್ರಾವೊ, ಶಾರ್ದೂಲ್ ಠಾಕೂರ್, ಲುಂಗಿ ಎನ್ಜಿಡಿ, ಇಮ್ರಾನ್ ತಾಹೀರ್ ಸೇರಿದಂತೆ ಹರ್ಭಜನ್ ಸಿಂಗ್ ಹಾಗೂ ಪಿಯುಷ್ ಚಾವ್ಲ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.