ಕರ್ಣನು ಮಹಾಭಾರತದಲ್ಲಿ ಸೋಲನ್ನು ಕಂಡು ಇಹಲೋಕ ತ್ಯಜಿಸಲು ಕಾರಣವಾಗಿದ್ದು ಈ 3 ಶಾಪಗಳು ! ಯಾವ್ಯಾವು ಗೊತ್ತಾ?

ಕರ್ಣನು ಮಹಾಭಾರತದಲ್ಲಿ ಸೋಲನ್ನು ಕಂಡು ಇಹಲೋಕ ತ್ಯಜಿಸಲು ಕಾರಣವಾಗಿದ್ದು ಈ 3 ಶಾಪಗಳು ! ಯಾವ್ಯಾವು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾ ಭಾರತ ವ್ಯಾಖ್ಯಾನದಲ್ಲಿ ಕರ್ಣನು ಸೋಲು ಎಲ್ಲರಿಗೂ ಕಣ್ಣೀರು ತರಿಸುತ್ತದೆ. ಕರ್ಣನು ಒಬ್ಬ ಮಹಾನ್ ಜ್ಞಾನಿ, ಯುದ್ಧ ವಿದ್ಯೆಗಳನ್ನು ಬಲ್ಲ ವೀರ, ದಾನಕ್ಕೆ ಹೆಸರು ವಾಸಿಯಾಗಿದ್ದ ಕಾರಣ ಎಲ್ಲರೂ ಮೆಚ್ಚಿ ಕೊಳ್ಳುವಂತಹ ಒಬ್ಬ ಮಹಾನ್ ವ್ಯಕ್ತಿಯಾಗಿದ್ದಾನೆ. ಕೃಷ್ಣನೇ ಹೇಳಿದಂತೆ ಅರ್ಜುನನಿಗಿಂತ ಬಿಲ್ವಿದ್ಯೆಯಲ್ಲಿ ಕರ್ಣನು ಒಂದು ಕೈ ಮೇಲೆ ಇದ್ದನು. ಆದರೂ ಕೂಡ ಕರ್ಣನು ಕೌರವ ಪಡೆಯಲ್ಲಿ ಇದ್ದ ಕಾರಣಕ್ಕಾಗಿ ಆತ ಸೋತನು ಎಂದು ನಂಬಲಾಗಿದೆ. ಆದರೆ ಯುದ್ಧ ಭೂಮಿಯಲ್ಲಿ ಸೋಲನ್ನು ಕಾಣಲು, ಕರ್ಣನ ಮೇಲಿದ್ದ ಆ ಮೂರು ಶಾಪಗಳೇ ಕಾರಣವಾಗಿವೆ. ಮೊದಲನೆಯದಾಗಿ ಕರ್ಣನು ಒಮ್ಮೆ ಹೀಗೆ ಆಕಸ್ಮಿಕವಾಗಿ ಒಂದು ಪುಟ್ಟ ಬಾಲಕಿ ಹಾಲನ್ನು ನೆಲದ ಮೇಲೆ ಚೆಲ್ಲಿ, ತನ್ನ ತಾಯಿ ಶಿಕ್ಷೆ ನೀಡುತ್ತಾರೆ ಎಂಬ ಭಯದಿಂದ ಹೆದರಿ ಕುಳಿತಿರುತ್ತಾಳೆ. ಇದೇ ಸಮಯದಲ್ಲಿ ಪುಟ್ಟ ಬಾಲಕಿಯನ್ನು ನೋಡಿದ ಕರ್ಣನು, ಪುಟ್ಟ ಬಾಲಕಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನೆಲದ ಮಣ್ಣನ್ನು ಹಿಂಡುತ್ತಾ ಹಾಗೂ ತಿರುಚುವ ಮೂಲಕ ಹಾಲನ್ನು ಬೇರ್ಪಡಿಸಲು ಪ್ರಯತ್ನ ಪಡುತ್ತಾನೆ.

ಆದರೆ ಕರ್ಣನು ಮಹಾನ್ ಶಕ್ತಿಗೆ ಭೂಮಿ ತಾಯಿಗೆ ನೋವಾಗುತ್ತದೆ. ಭೂಮಿ ತಾಯಿಯೂ ಈ ನೋವನ್ನು ಸಹಿಸಿಕೊಳ್ಳಲು ಬಹಳ ಕಷ್ಟವೆನಿಸುತ್ತದೆ. ಆಗ ಭೂಮಿ ತಾಯಿಯು ಕರ್ಣನಿಗೆ ಒಂದು ಶಾಪ ನೀಡಿ, ನಿನ್ನ ಜೀವನದಲ್ಲಿ ಪ್ರಮುಖ ಸಮಯದಲ್ಲಿ ಹಾಗೂ ನಿನಗೆ ಹೆಚ್ಚಿನ ಅಗತ್ಯವಿರುವ ಸಂದರ್ಭದಲ್ಲಿ ನಾನು ನಿನಗೆ ಸಹಾಯ ಮಾಡುವುದಿಲ್ಲ. ಅಷ್ಟೇ ಅಲ್ಲದೇ ನೀನು ಯುದ್ಧ ಮಾಡುವ ಸಂದರ್ಭದಲ್ಲಿ ನಿನ್ನನ್ನು ದುರ್ಬಲ ಗೊಳಿಸಲು ನಾನು ಪ್ರಯತ್ನ ಪಡುತ್ತೇನೆ ಎಂದು ಶಾಪ ನೀಡುತ್ತಾರೆ. ಇದೇ ಕಾರಣಕ್ಕಾಗಿ ಕುರುಕ್ಷೇತ್ರದಲ್ಲಿ ಕರ್ಣನು ಯುದ್ಧ ಮಾಡುವ ಸಂದರ್ಭದಲ್ಲಿ ಕರ್ಣನ ರಥದ ಚಕ್ರ ಮಣ್ಣಿನಲ್ಲಿ ಸಿಲುಕಿಕೊಳ್ಳುತ್ತದೆ ಹಾಗೂ ಇದರಿಂದ ಆತನ ಯುದ್ಧದ ಗಮನದ ವಿಚಾರದಲ್ಲಿ ವಿಚಲಿತನಾಗುತ್ತಾನೆ. (ಇದು ಮೂರನೇ ಶಾಪದ ಜೊತೆಗೆ ಸೇರಿಕೊಳ್ಳುತ್ತದೆ, ಆ ಸಂದರ್ಭದಲ್ಲಿ ಕರ್ಣನಿಗೆ ಸೋಲಾಗುತ್ತದೆ.)

ಇನ್ನು ಎರಡನೆಯದಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ದ್ರೋಣಾಚಾರ್ಯರು ಕರ್ಣನಿಗೆ ಯುದ್ಧಕಲೆ ಕಲಿಸುವುದಿಲ್ಲ, ನಾನು ಕೇವಲ ಕ್ಷತ್ರಿಯರಿಗೆ ಮಾತ್ರ ವಿದ್ಯೆ ನೀಡುತ್ತೇನೆ ಎಂದು ಕರ್ಣನನ್ನು ತಮ್ಮ ಶಿಷ್ಯರಾಗಿ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ದ್ರೋಣಾಚಾರ್ಯರು ನಿರಾಕರಿಸಿದ ನಂತರ ದ್ರೋಣಾಚಾರ್ಯರ ಗುರು ಪರಶುರಾಮರಿಂದ ವಿದ್ಯೆ ಕಲಿಯಲು ಶಿಷ್ಯನಾಗಿ ಸೇರಿಕೊಳ್ಳುತ್ತಾನೆ. ಇಲ್ಲಿ ಕೂಡ ಕರ್ಣನಿಗೆ ಒಂದು ಸವಾಲು ಎದುರಾಗುತ್ತದೆ ಅದುವೇ ಪರಶುರಾಮರು ಕೇವಲ ಬ್ರಾಹ್ಮಣರಿಗೆ ಮಾತ್ರ ವಿದ್ಯೆ ಕಲಿಸುತ್ತಾರೆ. ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸದೇ ಕರ್ಣನು ಬ್ರಾಹ್ಮಣನಾಗಿ ಪರಶುರಾಮರ ಬಳಿ ಶಿಷ್ಯನಾಗಿ ಸೇರಿಕೊಳ್ಳುತ್ತಾನೆ. ಪರಶುರಾಮರ ಬಳಿ ವಿದ್ಯೆ ಕಲಿತು ಮಹಾನ್ ಶಕ್ತಿಶಾಲಿಯಾಗಿ ಹೊರಹೊಮ್ಮಿದ ಮೇಲೆ, ಒಮ್ಮೆ ತರಬೇತಿಯ ನಂತರ ಪರಶುರಾಮರು ವಿಶ್ರಾಂತಿ ಪಡೆದುಕೊಳ್ಳಲು ಕರ್ಣನ ಮಡಿಲಲ್ಲಿ ತಲೆಹಾಕಿ ಮಲಗುತ್ತಾರೆ.

ಭಗವಾನ್ ಇಂದ್ರನು ತನ್ನ ಮಗ ಅರ್ಜುನನಿಗೆ ಅನುಕೂಲವಾಗುವಂತೆ ಜೇನುನೊಣದ ರೂಪವನ್ನು ತೆಗೆದು ಕೊಂಡು ಕರ್ಣನ ತೊಡೆಯ ಭಾಗದಲ್ಲಿ ಕುಟುಕುತ್ತದೆ. ತನ್ನ ತೊಡೆಯಿಂದ ರ-ಕ್ತ ಬರಲಾರಂಭಿಸಿದಾಗ ಕರ್ಣನ ಪರಶುರಾಮರ ವಿಶ್ರಾಂತಿ ಪಡೆದು ಕೊಳ್ಳುತ್ತಿರುವ ಕಾರಣ ತೊಂದರೆ ನೀಡಬಾರದು ಎಂದು ನೋವನ್ನು ತಡೆದುಕೊಂಡು ಹಾಗೆಯೇ ಕುಳಿತಿರುತ್ತಾನೆ. ಗುರು ಪರಶುರಾಮರು ಎಚ್ಚರವಾದ ಬಳಿಕ ಕರ್ಣನ ತೊಡೆಯಲ್ಲಿ ಆದ ಗಾ’ಯವನ್ನು ಕಂಡು ನೀನು ಹೇಗೆ ನೋವು ತಡೆದುಕೊಂಡಿದ್ದೆ, ಇಂತಹ ನೋವನ್ನು ತಡೆದುಕೊಳ್ಳಲು ಬ್ರಾಹ್ಮಣರಿಗೆ ಸಾಧ್ಯವಿಲ್ಲ. ನೀನು ಅಸಲಿಗೆ ಬ್ರಾಹ್ಮಣನೇ ಅಲ್ಲ ಎನ್ನುತ್ತಾರೆ. ಕರ್ಣನು ತಪ್ಪೊಪ್ಪಿಕೊಂಡ ನಂತರ ಪರಶುರಾಮರು ನೀನು ಬ್ರಾಹ್ಮಣನಲ್ಲ ಎಂದು ಹೇಳದೇ, ನನ್ನಿಂದ ಜ್ಞಾನವನ್ನು ಕದಿಯುತ್ತಿದ್ದೀಯ.

ನಿನಗೆ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ನಿನ್ನ ಎಲ್ಲಾ ಜ್ಞಾನವನ್ನು ನೀನು ಮರೆತು ಬಿಡುತ್ತೀಯ ಎಂದು ಶಪಿಸುತ್ತಾರೆ. ಇದನ್ನು ಕೇಳಿದ ನಂತರ ಕರ್ಣನು ತುಂಬಾ ದುಃಖಕ್ಕೆ ಒಳಗಾಗಿ ತಾನು ಮಾಡಿದ್ದು ತಪ್ಪು ಎಂದು ಅರಿತುಕೊಂಡು ಪರಶುರಾಮರ ಬಳಿ ಕ್ಷಮಿಸಿ ಎಂದು ಬೇಡಿಕೊಳ್ಳುತ್ತಾನೆ. ಕರ್ಣನು ಮನವಿ ಮಾಡಿಕೊಂಡ ನಂತರ ಪರಶು ರಾಮರು ನನ್ನ ಶಾಪವನ್ನು ಮಾರ್ಪಡಿಸುತ್ತಿದ್ದೇನೆ, ನೀನು ನಿನ್ನ ಸಮಾನ ವ್ಯಕ್ತಿಯ ಜೊತೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ನಿನಗೆ ನಿನ್ನ ಜ್ಞಾನ ಹೆಚ್ಚು ಅಗತ್ಯವಿದ್ದಾಗ ನೀನು ಬ್ರಹ್ಮಸ್ತ್ರ ಪ್ರಯೋಗವನ್ನು ಮಾಡುವ ಮಂತ್ರವನ್ನು ಮರೆತು ಬಿಡುತ್ತೀಯ ಎನ್ನುತ್ತಾರೆ. ಇದೇ ಶಾಪದಿಂದಾಗಿ ಅರ್ಜುನನ ಜೊತೆ ಕರ್ಣ ಯುದ್ಧ ಮಾಡುವ ಸಂದರ್ಭದಲ್ಲಿ, ಯುದ್ಧ ಭೂಮಿಯಲ್ಲಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾದಾಗ ಅತಿಹೆಚ್ಚು ಅಗತ್ಯವಿರುವ ಸಂದರ್ಭ ಇದಾಗಿರುವ ಕಾರಣ ಕರ್ಣನು ಆ ಮಂತ್ರವನ್ನು ಮರೆತು ಹೋಗುತ್ತಾನೆ ಹಾಗೂ ಸೋಲನ್ನು ಕಾಣುತ್ತಾನೆ.

ಇನ್ನು ಮೂರನೆಯದಾಗಿ ಕರ್ಣನು ಒಮ್ಮೆ ಕಾಡಿನಲ್ಲಿ ತನ್ನ ಬಿಲ್ಲು ಮತ್ತು ಬಾಣದಿಂದ ಬಿಲ್ಲುಗಾರಿಕೆಯ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿತವಾಗಿ ಆತನ ಬಾಣ ಬ್ರಾಹ್ಮಣರ ಹಸುವಿಗೆ ತಾಕುತ್ತದೆ, ಹಸುವು ಕೆಲವೇ ಕ್ಷಣಗಳಲ್ಲಿ ಅಸುನೀಗುತ್ತದೆ. ಇದರಿಂದ ಕೋಪಗೊಂಡ ಬ್ರಾಹ್ಮಣನು ನೀನು ಯುದ್ಧ ಮಾಡುವ ಸಂದರ್ಭದಲ್ಲಿ ನಿನ್ನ ಗಮನ ಬೇರೆಡೆಗೆ ವಿಚಲಿತ ಗೊಂಡಿರುವ ಸಂದರ್ಭದಲ್ಲಿ ನೀನು ನಿನ್ನ ಜೀವನವನ್ನು ಅಂತ್ಯಗೊಳಿಸುತ್ತೀಯ ಎಂದು ಶಪಿಸಿ ಬಿಡುತ್ತಾರೆ. ಭೂಮಿ ತಾಯಿಯ ಶಾಪದಿಂದಾಗಿ ಕರ್ಣನ ರಥವು ಮಣ್ಣಿನಲ್ಲಿ ಸಿಕ್ಕಿಕೊಂಡಾಗ ಕರ್ಣನು ರಥದ ಚಕ್ರವನ್ನು ಹೊರತೆಗೆಯುವ ಸಂದರ್ಭದಲ್ಲಿ ಶಾಪವೂ ಜಾರಿಗೆ ಬಂದು ಅರ್ಜುನನ ಕೈಯಲ್ಲಿ ಸೋಲು ಕಾಣುತ್ತಾನೆ ಹಾಗೂ ಇಹಲೋಕ ತ್ಯಜಿಸುತ್ತಾನೆ.