ಬಿಗ್ ಬ್ರೇಕಿಂಗ್: ಎಸ್ಡಿಪಿಐ ಸಂಘಟನೆ ವಿರುದ್ಧ ಕಠಿಣ ಹೆಜ್ಜೆ ಇಡಲು ಆದೇಶಿಸಿದ ಬಿಎಸ್ವೈ ! ಪ್ರತಿಕ್ರಿಯಿಸಿದ ಗುಂಡೂರಾವ್ !

ಬಿಗ್ ಬ್ರೇಕಿಂಗ್: ಎಸ್ಡಿಪಿಐ ಸಂಘಟನೆ ವಿರುದ್ಧ ಕಠಿಣ ಹೆಜ್ಜೆ ಇಡಲು ಆದೇಶಿಸಿದ ಬಿಎಸ್ವೈ ! ಪ್ರತಿಕ್ರಿಯಿಸಿದ ಗುಂಡೂರಾವ್ !

ನಮಸ್ಕಾರ ಸ್ನೇಹಿತರೇ, ಇದೀಗ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಸದ್ದು ಮಾಡಲು ಆರಂಭಿಸಿದೆ. ಘಟನೆಯ ಪರವಾಗಿ ಹಲವಾರು ನಾಯಕರು ವಾದ ಮಾಡುತ್ತಿದ್ದಾರೆ, ಇನ್ನು ಹಲವಾರು ಜನರು ಘಟನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಪರ ಹಾಗೂ ವಿರೋಧದ ಹೇಳಿಕೆಗಳ ನಡುವೆ ಕರ್ನಾಟಕ ಯಾವ ರೀತಿಯಲ್ಲಿ ಈ ಪ್ರಕರಣವನ್ನು ನಿಭಾಯಿಸುತ್ತದೆ ಎಂದು ದೇಶದ ಎಲ್ಲೆಡೆ ಪ್ರಶ್ನೆಗಳು ಕೇಳಿ ಬಂದಿವೆ. ನವೀನ್ ಹಾಗೂ ಎಸ್ಡಿಪಿಐ ಸಂಘಟನೆ ಸೇರಿದಂತೆ ಘಟನೆಯಲ್ಲಿ ಭಾಗಿಯಾದ ಯುವಕರ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಇದೀಗ ಮಾತನಾಡಿರುವ ಆರ್ ಅಶೋಕ್ ರವರು, ಈ ಕುರಿತು ಬಿಎಸ್ವೈ ರವರಿಗೆ ಸಂಪೂರ್ಣ ಮಾಹಿತಿ ನೀಡಿರುವುದಾಗಿ ಹಾಗೂ ಬಿಎಸ್ವೈ ರವರು ಮಾಹಿತಿ ಪಡೆದು ಕೊಂಡು ಮಹತ್ವದ ಹೆಜ್ಜೆ ಇಡಲು ತಯಾರಿ ನಡೆಸಿ ಎಂದು ಹೇಳಿಕೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಹೌದು ಸ್ನೇಹಿತರೇ, ಹಲವಾರು ದಿನಗಳಿಂದ ನಿಮಗೆಲ್ಲರಿಗೂ ತಿಳಿದಿರುವಂತೆ ಎಸ್ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಹಲವಾರು ಬಾರಿ ಹಲವಾರು ಜನ ಹೇಳುತ್ತಾ ಬಂದಿದ್ದಾರೆ. ಅದರಂತೆ ಎಸ್ಡಿಪಿಐ ಸಂಘಟನೆ ಪರವಾಗಿಯೂ ಕೂಡ ಹಲವಾರು ನಾಯಕರು ಧ್ವನಿ ಎತ್ತಿದ್ದಾರೆ.. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆಗೆ ನೇರ ಕಾರಣ ಎಸ್ಡಿಪಿಐ ಸಂಘಟನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನುತ್ತಿರುವ ರಾಜ್ಯ ಬಿ ಜೆ ಪಿ ನಾಯಕರು ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು, ಇನ್ನುಳಿದ ಹಿಂದಿನ 16 ಪ್ರಕರಣಗಳ ವಿವರಣೆಗಳನ್ನು ಆಧಾರವಾಗಿಟ್ಟು ಕೊಂಡು ಎಸ್ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡಲು ಬೇಕಾಗಿರುವ ತಯಾರಿ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನು ಸ್ವತಹ ಆರ್ ಅಶೋಕ್ ರವರೇ ತಿಳಿಸಿದ್ದಾರೆ.

ಇದರ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ಬಿಎಸ್ವೈ ರವರು ಆದೇಶ ನೀಡಿದ್ದು, ಎಸ್ಡಿಪಿಐ ಸಂಘಟನೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಆದ ಕಾರಣ ಕೇಂದ್ರಕ್ಕೆ ಶಿಫಾರಸು ಮಾಡಲು ತಯಾರಿ ನಡೆಸಲಾಗಿದೆ ಎಂಬುದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಈ ನಡೆಯ ಕುರಿತು ಮಾತನಾಡಿರುವ ದಿನೇಶ್ ಗುಂಡೂರಾವ್ ರವರು, ಯಾವುದೇ ಸಂಘಟನೆಗಳನ್ನು ಬ್ಯಾನ್ ಮಾಡಲು ಒಂದು ಕಾರಣ ಇರಬೇಕು. ಕಾರಣ ನೀಡಿ ಬ್ಯಾನ್ ಮಾಡಿ ಸುಖಾಸುಮ್ಮನೆ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ನಿರ್ಧಾರದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.