ಜಿಯೋ, ಪತಂಜಲಿ ನಂತರ ಐಪಿಎಲ್ ಪ್ರಾಯೋಜಕತ್ವಕ್ಕೆ ಮತ್ತೊಂದು ಭಾರತೀಯ ದಿಗ್ಗಜ ಕಂಪನಿ ಎಂಟ್ರಿ ! ಸಿಕ್ಕರೇ ಅಂತೂ TRP ಗಗನಕ್ಕೆ !

ಜಿಯೋ, ಪತಂಜಲಿ ನಂತರ ಐಪಿಎಲ್ ಪ್ರಾಯೋಜಕತ್ವಕ್ಕೆ ಮತ್ತೊಂದು ಭಾರತೀಯ ದಿಗ್ಗಜ ಕಂಪನಿ ಎಂಟ್ರಿ ! ಸಿಕ್ಕರೇ ಅಂತೂ TRP ಗಗನಕ್ಕೆ !

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಬಾಯ್ಕಾಟ್ ಚೀನಾ ಅಭಿಯಾನಕ್ಕೆ ಬೆಂಬಲ ನೀಡಲು ಬಿಸಿಸಿಐ ಸಂಸ್ಥೆಗೆ ವಿವೊ ಪ್ರಾಯೋಜಕತ್ವವನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಆರಂಭವಾಗಿದ್ದವು. ಆದರೆ ನಮ್ಮಲ್ಲಿನ ಕೆಲವು ಜನರು, ಸಾಮಾನ್ಯ ಜನರು ಅಂದು ಆರ್ಥಿಕ ತಜ್ಞರಾಗಿ ಬದಲಾಗಿ ವಿವೋ ಕಂಪನಿಯನ್ನು ಪ್ರಾಯೋಜಕತ್ವವನ್ನು ಹಿಂಪಡೆಯುವಂತೆ ಆದೇಶ ನೀಡುವುದು ಸುಲಭ, ಆದರೆ ಪ್ರಾಯೋಜಕತ್ವವಿಲ್ಲದೇ ಐಪಿಎಲ್ ಟೂರ್ನಿ ನಡೆಸಲು ಸಾಧ್ಯವಿಲ್ಲ ಹಾಗೂ ಇನ್ಯಾವುದೇ ಇತರ ದೇಶಿಯ ಕಂಪನಿಗಳು ನೂರಾರು ಕೋಟಿ ಖರ್ಚು ಮಾಡಿ ಪ್ರಾಯೋಜಕತ್ವವನ್ನು ಪಡೆಯಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಬಿಸಿಸಿಐ ಸಂಸ್ಥೆಯು, ಐಪಿಎಲ್ ಪ್ರಾಯೋಜಕತ್ವ ಎಂದರೇ ಚೀನಾ ದೇಶದಿಂದ ನಮಗೆ ಹಣ ಬರುತ್ತದೆ. ಆದರೂ ಕೂಡ ಜನರ ಒತ್ತಾಯದ ಮೇರೆಗೆ ನಾವು ಪರಿಶೀಲನೆ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಕೊನೆಗೂ ಐಪಿಎಲ್ ಪ್ರಾಯೋಜಕತ್ವದಿಂದ ವಿವೊ ಕಂಪನಿ ತಾನಾಗಿಯೇ ಹಿಂದೆ ಸರಿದಿದೆ.

ವಿವೊ ಕಂಪನಿ ಹಿಂದೆ ಸರಿದ ಮೇಲೆ ಇದನ್ನು ಕಂಡ ಹಲವಾರು ಜನರು ಕ್ಷಮಿಸಿ ಸಾಮಾಜಿಕ ಜಾಲತಾಣಗಳ ಆರ್ಥಿಕ ತಜ್ಞರು, ಐಪಿಎಲ್ ಟೂರ್ನಿ ನಡೆಯುವುದಿಲ್ಲ, ಸುಖಾ ಸುಮ್ಮನೆ ನಷ್ಟವಾಯಿತು ಎಂದು ಚೀನಾ ದೇಶದ ಕಂಪನಿಯ ಪರ ಧ್ವನಿಯೆತ್ತಿದ್ದರು. ಆದರೆ ಅವರೆಲ್ಲರ ಲೆಕ್ಕಾಚಾರಗಳು ಇದೀಗ ಉಲ್ಟಾ ಆಗಿದ್ದು ಜಿಯೋ, ಪತಂಜಲಿ ಸೇರಿದಂತೆ ಇನ್ನು ಎರಡು-ಮೂರು ಭಾರತೀಯ ಕಂಪನಿಗಳು ಐಪಿಎಲ್ ಪ್ರಾಯೋಜಕತ್ವವನ್ನು ಪಡೆಯಲು ರೇಸ್ ನಲ್ಲಿ ನಿಂತಿವೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಭಾರತದ ಮತ್ತೊಂದು ದಿಗ್ಗಜ ಕಂಪನಿ, ಐಪಿಎಲ್ ಪ್ರಾಯೋಜಕತ್ವ ವನ್ನು ಪಡೆಯಲು ಆಸಕ್ತಿ ತೋರಿದ್ದು ಟೆಂಡರ್ ಗೆ ಅರ್ಜಿ ಹಾಕಲು ತಯಾರಿ ನಡೆಸಿದೆ.

ವಿಶೇಷವೇನೆಂದರೆ, ಐಪಿಎಲ್ ಪ್ರಾಯೋಜಕತ್ವ ವೇನಾದರೂ ಈ ಕಂಪನಿಗೆ ದೊರೆತಲ್ಲಿ ಖಂಡಿತ ಐಪಿಎಲ್ ನೋಡದವರೂ ಕೂಡ ಐಪಿಎಲ್ ನೋಡಿ ಟಿಆರ್ಪಿ ಬೆಳೆಸುವುದಂತು ಖಚಿತ. ಯಾಕೆಂದರೆ, ಈ ಕಂಪನಿಯು ಭಾರತೀಯರ ಕಷ್ಟಕ್ಕೆ ಸದಾ ಸಹಾಯ ಹಸ್ತ ಚಾಚುತ್ತದೆ. ಭಾವನಾತ್ಮಕವಾಗಿ ಭಾರತೀಯರ ಜೊತೆ ಸಂಬಂಧ ಬೆಳೆಸಿದೆ. ಅದುವೇ ನಮ್ಮ ರತನ್ ಟಾಟಾ ನೇತೃತ್ವದ ಟಾಟಾ ಗ್ರೂಪ್ಸ್. ಹೌದು ಸ್ನೇಹಿತರೇ ಇದೀಗ ಐಪಿಎಲ್ ಪ್ರಾಯೋಜಕತ್ವವನ್ನು ಪಡೆಯಲು ಟಾಟಾ ಗ್ರೂಪ್ ಆಸಕ್ತಿ ತೋರಿಸಿದ್ದು, ಇದನ್ನು ಕಂಡ ನೆಟ್ಟಿಗರು ಖಂಡಿತ ಒಂದು ವೇಳೆ ಟಾಟಾ ಗ್ರೂಪ್ ತಂಡಕ್ಕೆ ಪ್ರಾಯೋಜಕತ್ವ ದೊರೆತರೇ ಐಪಿಎಲ್ ಟೂರ್ನಿಯ ಮತ್ತಷ್ಟು ರಂಗು ಏರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೆಗಳನ್ನು ನೀಡಿದ್ದಾರೆ.