ಕರ್ನಾಟಕ ಗೃಹ ಮಂತ್ರಿ ಬದಲಾಗಬೇಕು ! ಹೊಸ ಅಭಿಯಾನ ಆರಂಭಿಸಿದ ಬಿಜೆಪಿ ಬೆಂಬಲಿಗರು ! ಯಾರಾಗಬೇಕಂತೆ ಗೊತ್ತಾ?

ಕರ್ನಾಟಕ ಗೃಹ ಮಂತ್ರಿ ಬದಲಾಗಬೇಕು ! ಹೊಸ ಅಭಿಯಾನ ಆರಂಭಿಸಿದ ಬಿಜೆಪಿ ಬೆಂಬಲಿಗರು ! ಯಾರಾಗಬೇಕಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬೆಂಗಳೂರಿನಲ್ಲಿ ನಡೆದ ಘಟನೆ ಇದೀಗ ರಾಜ್ಯ ರಾಜ ಕಾರಣದಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ರಾಜಧಾನಿಯ ಪಾದರಾಯನಪುರ ದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದ ಕಾರಣ ಅಂದು ಹಲವಾರು ಜನರನ್ನು ವಶಕ್ಕೆ ಪಡೆದುಕೊಂಡು ಕೆಲವು ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಅಷ್ಟು ಯುವಕರಿಗೆ ಶಾಸಕರಾಗಿರುವ ಜಮೀರ್ ಅಹಮ್ಮದ್ ರವರು ನಗದು ಬಹುಮಾನದೊಂದಿಗೆ ಬರಮಾಡಿ ಕೊಂಡಿದ್ದರು. ಜೈಲಿಗೆ ಹೋಗಿ ಬಂದವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಪೊಲೀಸರು ತೆಗೆದುಕೊಂಡ ಕ್ರಮಗಳಿಂದ ಅವರು ಬುದ್ದಿ ಕಲಿತಿಲ್ಲ ಎಂಬ ಮಾತುಗಳು ಆ ದಿನವೇ ಕೇಳಿ ಬಂದಿದ್ದವು.

ಇದನ್ನು ಸ್ವತಃ ಬಿಜೆಪಿ ಬೆಂಬಲಿಗರೇ ಹೇಳುತ್ತಿದ್ದರು, ಅದಾದ ಬಳಿಕ ಕೆಲವು ದಿನಗಳ ನಂತರ ಮತ್ತೊಮ್ಮೆ ಅಕ್ಷರ ಸಹ ಬೆಂಗಳೂರು ತಲ್ಲಣಗೊಂಡಿದೆ. ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಹಿ ಘಟನೆಗಳು ಕೇವಲ ಬೆಂಗಳೂರು ಅಥವಾ ಕರ್ನಾಟಕದಲ್ಲಿ ಅಲ್ಲದೇ ಇಡೀ ದೇಶದಲ್ಲಿ ಸದ್ದು ಮಾಡಲು ಆರಂಭಿಸಿವೆ. ಒಂದೆಡೆ ಎಲ್ಲರೂ ಈ ಘಟನೆಯನ್ನು ಖಂಡಿಸುತ್ತಾ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದರೇ ಅದೇ ಸಮಯದಲ್ಲಿ ಬಿಜೆಪಿ ಬೆಂಬಲಿಗರು ಮತ್ತೊಂದು ಅಭಿಯಾನ ಆರಂಭಿಸಿದ್ದಾರೆ. ನೀವು ಈ ರೀತಿ ಮಾಡುವವರನ್ನು ಜೈಲಿಗೆ ಕಳುಹಿಸಿ ಮತ್ತೆ ಬಿಡುಗಡೆ ಮಾಡಿ, ಮತ್ತೊಬ್ಬರು ಅವರಿಗೆ ಅದ್ದೂರಿ ಸ್ವಾಗತ ನೀಡುತ್ತಿದ್ದರೇ ಈ ರೀತಿಯ ಘಟನೆಗಳು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

ಅದೇ ಕಾರಣಕ್ಕಾಗಿ ಇದೀಗ ಹೇಗಿದ್ದರೂ ಕರ್ನಾಟಕ ರಾಜ್ಯದಲ್ಲಿ ಮೂರು ಗೃಹಮಂತ್ರಿಗಳು ಇದ್ದಾರೆ, ಯಾರಾದರೂ ಒಬ್ಬರ ಕೈಯಲ್ಲಿ ರಾಜೀನಾಮೆ ಕೊಡಿಸಿ ಇಲ್ಲವಾದಲ್ಲಿ ಮತ್ತೊಂದು ಗೃಹಮಂತ್ರಿ ಹುದ್ದೆಯನ್ನು ಸೃಷ್ಟಿಮಾಡಿ ಆ ಸ್ಥಾನಕ್ಕೆ ಬಸವನಗೌಡ ಪಾಟೀಲ್ ಅವರನ್ನು ಕರೆದು ಕೂರಿಸಿ. ಅಂದಿನಿಂದ ಈ ರೀತಿಯ ಘಟನೆಗಳು ಕಡಿಮೆಯಾಗುತ್ತವೆ, ಒಂದು ವೇಳೆ ನಡೆದರೂ ಕೂಡ ಒಮ್ಮೆ ನಡೆದ ಬಳಿಕ ಮತ್ತೊಮ್ಮೆ ಮಾಡುವವರಿಗೆ ಯಾವ ರೀತಿಯ ಪರಿಣಾಮ ಎದುರಾಗಬಹುದು ಎಂಬುದನ್ನು ತೋರಿಸಿ ಸಂಪೂರ್ಣವಾಗಿ ಈ ರೀತಿಯ ಘಟನೆಗಳಿಗೆ ಬ್ರೇಕ್ ಹಾಕುತ್ತಾರೆ. ರಾಜೀನಾಮೆ ನೀಡುತ್ತಿರಾ ಅಥವಾ ಹೊಸ ಹುದ್ದೆ ಸೃಷ್ಟಿಸುತ್ತಿರಾ ಗೊತ್ತಿಲ್ಲ ಆದರೆ ಬಸವನಗೌಡ ಪಾಟೀಲ್ ಅವರನ್ನು ಗೃಹ ಮಂತ್ರಿ ಮಾಡಿ ಎಂದು ಅಭಿಯಾನಗಳು ಆರಂಭವಾಗಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.