ಸೋತು ಮಣ್ಣು ಮುಕ್ಕಿದ ಪಾಕ್ ! ಭಾರತಕ್ಕೆ ಭರ್ಜರಿ ಗೆಲುವು ! ಸೋತರು ಹೊಸ ಹಾದಿ ಹಿಡಿದ ಪಾಕ್ ! ಅಲ್ಲೂ ಗೆಲುವು ಖಚಿತ ಹೇಗೆ ಗೊತ್ತಾ?

ಸೋತು ಮಣ್ಣು ಮುಕ್ಕಿದ ಪಾಕ್ ! ಭಾರತಕ್ಕೆ ಭರ್ಜರಿ ಗೆಲುವು ! ಸೋತರು ಹೊಸ ಹಾದಿ ಹಿಡಿದ ಪಾಕ್ ! ಅಲ್ಲೂ ಗೆಲುವು ಖಚಿತ ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ಪಾಕ್ ಅಕ್ಷರಸಃ ಮಾನಸಿಕ ಸ್ಥಿಮಿತ ಕಳೆದು ಕೊಂಡಿರುವಂತೆ ವಿಚಿತ್ರವಾಗಿ ವರ್ತಿಸುತ್ತಿದೆ. ಇದು ಭಾರತದ ಆಂತರಿಕ ವಿಚಾರ ಎಂದು ತಿಳಿದಿದ್ದರೂ ಕೂಡ ತನ್ನ ಬೇಳೆ ಬೇಯಿಸಿಕೊಂಡು ಚೀನಾ ದೇಶಕ್ಕೆ ನಿಯತ್ತು ಪ್ರದರ್ಶನ ಮಾಡಲು ಇದರ ವಿರುದ್ಧವಾಗಿ ಧ್ವನಿ ಎತ್ತಲು ಆರಂಭಿಸಿದೆ. ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಜಮ್ಮು ಹಾಗೂ ಕಾಶ್ಮೀರ ದ ವಿಚಾರಗಳು ಭಾರತದ ಆಂತರಿಕ ವಿಚಾರವಾಗಿದ್ದು ಇತರ ಯಾವುದೇ ದೇಶಗಳು ಇದರ ಕುರಿತು ಗಮನ ಹರಿಸುವ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಕೂಡ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನು ವಿವಿಧ ಸಭೆಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಇದರ ಕುರಿತು ಮಾತನಾಡಿ ಬಾರಿ ಮುಜುಗರ ಅನುಭವಿಸಿದೆ.

ವಿಶ್ವಸಂಸ್ಥೆಯಲ್ಲಿಯು ಕೂಡ ಜಮ್ಮು ಹಾಗೂ ಕಾಶ್ಮೀರ ದ ವಿಚಾರಗಳನ್ನು ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಚೀನಾ ಹಾಗೂ ಇನ್ನಿತರ ಕೆಲವು ದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಷ್ಟ್ರಗಳು ಭಾರತದ ಪರವಾಗಿ ಬೆಂಬಲ ಸೂಚಿಸಿ ಧ್ವನಿಯೆತ್ತಿ, ಪಾಕಿಸ್ತಾನ ಹಾಗೂ ಚೀನಾ ದೇಶವು ಅನಗತ್ಯವಾಗಿ ವಿಶ್ವಸಂಸ್ಥೆಯ ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದು ಹೇಳಿಕೆ ನೀಡಿವೆ. ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಸೌದಿ ಅರೇಬಿಯಾ ದೇಶದ ಜೊತೆ ಮಾತುಕತೆ ನಡೆಸಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬೇಕು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೌದಿ ಅರೇಬಿಯ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಘಟನೆಯ ಬೆಂಬಲ ಪಡೆದುಕೊಂಡು ಜಮ್ಮು ಹಾಗೂ ಕಾಶ್ಮೀರ ದ ವಿಚಾರವನ್ನು ಪ್ರಸ್ತಾಪ ಮಾಡುವ ಪಾಕಿಸ್ತಾನದ‌ ಪ್ರಯತ್ನವೂ ಕೂಡಾ ವಿಫಲವಾಗಿದೆ. ಸೌದಿ ಅರೇಬಿಯಾ ದೇಶವು ಹಲವಾರು ಬಾರಿ ಈ ವಿಷಯ ಚರ್ಚೆಗೆ ಸೂಕ್ತವಲ್ಲ ಎಂದು ಹೇಳಿದರೂ ಕೂಡ ಪಾಕಿಸ್ತಾನ ಚೀನಾ ಹಾಗೂ ಟರ್ಕಿ ದೇಶಗಳ ಜೊತೆ ಸೇರಿಕೊಂಡು ಚೀನಾ ದೇಶದ ಮಾತು ಕೇಳಿ ಅಂತರಾಷ್ಟ್ರೀಯ ಇಸ್ಲಾಮಿಕ ಸರ್ಕಾರ ಸಂಘಟನೆಯ ಇತರ ದೇಶಗಳ ಬೆಂಬಲ ಕೇಳಲು ಆರಂಭಿಸಿ ಸಂಸ್ಥೆಯನ್ನು ಇಬ್ಬಾಗದ ನಿರ್ಧಾರ ತೆಗೆದು ಕೊಳ್ಳುವಂತೆ ಮಾಡಲು ಹರಸಾಹಸ ಪಟ್ಟಿತ್ತು.

ಈ ವಿಷಯ ತಿಳಿದ ಕೂಡಲೇ ಸೌದಿ ಅರೇಬಿಯಾ ದೇಶವು ಪಾಕಿಸ್ತಾನ ಜೊತೆ ಎಲ್ಲಾ ಸಂಬಂಧಗಳನ್ನು ಕಡಿತ ಮಾಡಿ, ಈ ಕೂಡಲೇ ಪಡೆದು ಕೊಂಡಿರುವ ಎಲ್ಲಾ ಸಾಲವನ್ನು ವಾಪಸು ನೀಡುವಂತೆ ಆದೇಶ ನೀಡಿತು. ಪಾಕಿಸ್ತಾನ ಎಷ್ಟೇ ಮನವಿ ಮಾಡಿದರೂ ಕೂಡ ಸೌದಿ ಅರೇಬಿಯ ದೇಶ ಕ್ಯಾರೇ ಎನ್ನದೆ ಹಣ ಹಿಂತಿರುಗಿಸದೇ ಹೋದಲ್ಲಿ ಕಠಿಣ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತ್ತು. ಬೇರೆ ವಿಧಿ ಇಲ್ಲದೆ ಮತ್ತೊಮ್ಮೆ ಚೀನಾ ದೇಶದ ಬಾಗಿಲು ತಟ್ಟಿ ಒಂದು ಬಿಲಿಯನ್ ಡಾಲರ್ ಸಾಲವನ್ನು ಪಡೆದುಕೊಂಡು ಆ ಹಣವನ್ನು ಸೌದಿ ಅರೇಬಿಯಾ ದೇಶಕ್ಕೆ ನೀಡಿದೆ. ಇಷ್ಟೆಲ್ಲಾ ವಿದ್ಯಮಾನಗಳು ನಡೆದರೂ ಕೂಡ ಟರ್ಕಿ, ಚೀನಾ ಸೇರಿದಂತೆ ಇತರ ಎರಡು, ಮೂರು ದೇಶಗಳು ಹೊರತುಪಡಿಸಿದರೆ ಉಳಿದ ಯಾವುದೇ ರಾಷ್ಟ್ರಗಳು ಜಮ್ಮು ಹಾಗೂ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಲು ಇಷ್ಟಪಡುತ್ತಿಲ್ಲ. ಇದು ಭಾರತದ ರಾಜತಾಂತ್ರಿಕತೆಯ ತಾಕತ್ತನ್ನು ತೋರಿಸುತ್ತದೆ.

ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಮತ್ತೊಂದು ಹೊಸ ಮಾರ್ಗವನ್ನು ಹುಡುಕಿಕೊಂಡಿದ್ದು ಮತ್ತೊಮ್ಮೆ ಅಮೇರಿಕಾ ದೇಶದ ಬಾಗಿಲು ಕಟ್ಟಲು ತಯಾರಿ ನಡೆಸಿದೆ. ಈ ಕುರಿತು ಪಾಕಿಸ್ತಾನ ದೇಶದ ವಿದೇಶಾಂಗ ಕಾರ್ಯದರ್ಶಿ ಸೋಹೈಲ್ ಮೊಹಮ್ಮದ್ ರವರು ಮಾತನಾಡಿ ಅಮೇರಿಕಾ ದೇಶದ ಅಧಿಕಾರಿಗಳೊಂದಿಗೆ ನಾವು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಅಮೆರಿಕಾ ದೇಶವು ಭಾರತ ಹಾಗೂ ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿ ಜಮ್ಮು ಹಾಗೂ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಕುರಿತು ನ್ಯಾಯ ದೊರಕಿಸುವಂತೆ ಮಾಡಬೇಕು. ಭಾರತ ಹಾಗೂ ಪಾಕಿಸ್ತಾನ ಜೊತೆಗಿನ ನಡುವಿನ ಸಂಬಂಧ ಸರಿ ಹೋಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಮೇರಿಕ ದೇಶ ಪಾಕಿಸ್ತಾನದ ಮಾತಿಗೆ ಯಾವುದೇ ಸೊಪ್ಪು ಹಾಕಲು ಸಾಧ್ಯವಿಲ್ಲ, ಯಾಕೆಂದರೆ ಕಳೆದ ಬಾರಿ ಮಧ್ಯಸ್ಥಿಕೆ ನಡೆಸಲು ಸಿದ್ಧ ಎಂದು ಅಮೆರಿಕ ದೇಶ ಹೇಳಿದ ಕೂಡಲೇ ಕೆಲವೇ ಕೆಲವು ನಿಮಿಷಗಳಲ್ಲಿ ಭಾರತದ ಕಡೆಯಿಂದ ಮೂರನೇ ವ್ಯಕ್ತಿಗೆ ಜಮ್ಮು ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಭಾರತ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ಬಳಿಕ ಪಿಓಕೆ ವಾಪಸ್ಸು ಪಡೆಯುತ್ತೇವೆ ಎಂದು ಕೂಡ ಅಂದೇ ತಿಳಿದಿತ್ತು. ಆದ್ದರಿಂದ ಅಮೇರಿಕಾ ದೇಶವು ಇದೀಗ ಪಾಕಿಸ್ತಾನಕ್ಕೆ ಬಾಗಿಲು ಮುಚ್ಚುವುದು ಬಹುತೇಕ ಖಚಿತವಾಗಿದೆ. ಒಟ್ಟಿನಲ್ಲಿ ದೆಹಲಿಯಲ್ಲಿ ಕೂತು ಭಾರತ ಆಡುತ್ತಿರುವ ಆಟಕ್ಕೆ ಇಡೀ ವಿಶ್ವವೇ ಪಾಕಿಸ್ತಾನ ದೇಶದ ಮಾತುಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಇದು ಭಾರತದ ರಾಜತಾಂತ್ರಿಕ ಶಕ್ತಿಯನ್ನು ತೋರಿಸುತ್ತದೆ.