ಮಹೇಶ್ ಭಟ್, ಆಲಿಯಾ ಭಟ್, ಸಂಜಯ್ ದತ್ ಗೆ ಒಮ್ಮೆಲೇ ಶಾಕ್ ನೀಡಿ ಗೆದ್ದು ಬೀಗಿದ ಅಭಿಮಾನಿಗಳು ! ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಹೇಶ್ ಭಟ್ ರವರು 20 ವರ್ಷಗಳ ಹಿಂದೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಂತೆ ದಾಖಲೆ ಸೃಷ್ಟಿಸಿದ್ದರು. ಇನ್ನು ಇತ್ತೀಚೆಗೆ ಆಲಿಯಾ ಭಟ್ ರವರು ನಟನೆ ಮಾಡಿದ ಹಲವಾರು ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿವೆ. ಹಲವಾರು ಜಾಹೀರಾತುಗಳಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿಯೂ ಕೂಡ ನಟನೆ ಮಾಡುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಮಾಡುವಂತೆ ಮಾಡಿದ್ದರು. ಆದರೆ ಈ ಎಲ್ಲಾ ದಾಖಲೆಗಳು ಇದೀಗ ಸುಶಾಂತ್ ಸಿಂಗ್ ರವರ ಅಭಿಮಾನಿಗಳ ಮುಂದೆ ಎಲ್ಲವೂ ಠುಸ್ ಆಗಿವೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಮಹೇಶ್ ಭಟ್ ರವರು 20 ವರ್ಷಗಳ ಬಳಿಕ ನಿರ್ದೇಶಕರಾಗಿ ಆಲಿಯಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ಹಾಗೂ ಪೂಜಾ ಭಟ್ ರವರೊಂದಿಗೆ ಸದಕ್ 2 ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ವಾಪಸಾಗುತ್ತಿದ್ದಾರೆ.

ಈ ಚಿತ್ರದ ಮೇಲೆ ಹಲವಾರು ನಿರೀಕ್ಷೆಗಳನ್ನು ಬಾಲಿವುಡ್ ಚಿತ್ರರಂಗ ಹೊಂದಿತ್ತು, ಯಾಕೆಂದರೆ ಮಹೇಶ್ ಭಟ್ ರವರು 20 ವರ್ಷಗಳ ನಂತರ ನಿರ್ದೇಶಕರಾಗಿ ಮರಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪೂಜಾ ಭಟ್, ಆಲಿಯಾ ಭಟ್ ಸೇರಿದಂತೆ ಸಂಜಯ್ ದತ್ ಅವರ ನಟನೆಯಿಂದ ಚಿತ್ರವು ಅದ್ಭುತ ರೆಸ್ಪಾನ್ಸ್ ಪಡೆದು ಕೊಳ್ಳಲಿದೆ, ಖಂಡಿತ ಈ ಚಿತ್ರ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಸ್ವಜನ ಪಕ್ಷಪಾತ ನಡೆಯುತ್ತಿದೆ ಎನ್ನಲಾಗುತ್ತಿರುವುದರಿಂದ ಕಂಡು ಕೇಳರಿಯದ ರೀತಿಯಲ್ಲಿ ದಾಖಲೆ ನಿರ್ಮಾಣ ಮಾಡುತ್ತದೆ ಎಂದು ಕೊಂಡಿದ್ದ ಸಡಕ್ 2 ಚಿತ್ರದ ಟ್ರೈಲರ್ ಕುಖ್ಯಾತ ದಾಖಲೆ ಮಾಡಿದೆ ಹಾಗೂ ಬಿಡುಗಡೆ ಮಾಡಬಾರದು ಎಂಬ ಒತ್ತಾಯ ಕೇಳಿ ಬಂದಿದೆ.

ಹೌದು ಸ್ನೇಹಿತರೇ, ಸ್ವಜನ ಪಕ್ಷಪಾತದ ಪರ ಧ್ವನಿ ಎತ್ತಿರುವ ಸೆಲೆಬ್ರೆಟಿಗಳು ಹಾಗೂ ಸುಶಾಂತ್ ಸಿಂಗ್ ರವರ ಅಭಿಮಾನಿಗಳು ಸ್ವಜನ ಪಕ್ಷಪಾತಕ್ಕೆ ಮತ್ತೊಂದು ಮುಖ ಎಂದು ಹೇಳುತ್ತಿರುವ ಮಹೇಶ್ ಭಟ್ ನಿರ್ದೇಶನದ, ಆಲಿಯಾ ಹಾಗೂ ಪೂಜಾ ಭಟ್ ಅಭಿನಯದ ಈ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಯೂಟ್ಯೂಬ್ನಲ್ಲಿ ಟ್ರೈಲರ್ ರಿಲೀಸ್ ಆದ ಬಳಿಕ ಡಿಸ್ ಲೈಕ್ ಬಟನ್ ಕ್ಲಿಕ್ ಮಾಡಲು ಆರಂಭಿಸಿದ್ದಾರೆ. ಬಿಡುಗಡೆಗೊಂಡ ಕೇವಲ 24 ಗಂಟೆಗಳಲ್ಲಿ ಈ ಪೋಸ್ಟ್ ಬರೆಯುವ ವೇಳೆಗೆ 28 ಲಕ್ಷ ಜನ ಈ ವಿಡಿಯೋ ಅನ್ನು ಡಿಸ್ ಲೈಕ್ ಮಾಡಿದ್ದಾರೆ, ಕೇವಲ 1.6 ಲಕ್ಷ ಜನ ಲೈಕ್ ಮಾಡಿದ್ದಾರೆ. ಈ ಮೂಲಕ ಸುಶಾಂತ್ ಸಿಂಗ್ ಅಭಿಮಾನಿಗಳು ಚಿತ್ರ ಬಿಡುಗಡೆ ಮಾಡಬಾರದು ಎಂದು ಒತ್ತಾಯ ಮಾಡಿ, ಇದು ಕೇವಲ ಆರಂಭ, ಸಿನಿಮಾ ಒಂದು ವೇಳೆ ಬಿಡುಗಡೆಗೊಂಡರೇ ಅದಕ್ಕೂ ಇದೇ ಗತಿ ಎಂದಿದ್ದಾರೆ. ಮತ್ತೊಂದೆಡೆ ಆಲಿಯಾ ಭಟ್ ರವರು ಇಂದಿಗೂ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸ್ವಜನ ಪಕ್ಷಪಾತದ ಕುರಿತು ಕಮೆಂಟ್ಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಪೋಸ್ಟ್ ಗಳಿಗೆ ಕಮೆಂಟ್ ಮಾಡದಂತೆ ತಡೆಹಿಡಿದಿದ್ದಾರೆ.

Facebook Comments

Post Author: Ravi Yadav