ವರ್ಷಕ್ಕೆ 75 ಕೋಟಿ ದುಡಿಯುವ ಫುಟ್ಬಾಲ್ ಆಟಗಾರ, ಬಿರುಕು ಬಿಟ್ಟ ಫೋನ್ ಬಳಸಿದ್ದನ್ನು ಟೀಕೆ ಮಾಡಿದರು ! ಕಾರಣ ಕೇಳಿದ ನಂತರ ಸೆಲ್ಯೂಟ್ ಮಾಡಿದ್ದು ಯಾಕೆ ಗೊತ್ತಾ??

ವರ್ಷಕ್ಕೆ 75 ಕೋಟಿ ದುಡಿಯುವ ಫುಟ್ಬಾಲ್ ಆಟಗಾರ, ಬಿರುಕು ಬಿಟ್ಟ ಫೋನ್ ಬಳಸಿದ್ದನ್ನು ಟೀಕೆ ಮಾಡಿದರು ! ಕಾರಣ ಕೇಳಿದ ನಂತರ ಸೆಲ್ಯೂಟ್ ಮಾಡಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಕ್ರಿಕೆಟ್ ಆಟಗಾರರು ಒಮ್ಮೆಲೆ ರಾಷ್ಟ್ರೀಯ ತಂಡಕ್ಕೆ ಅಥವಾ ಐಪಿಎಲ್ ಟೂರ್ನಿ ಗಳಲ್ಲಿ ಆಟವಾಡಲು ಆರಂಭಿಸಿದರೆ ಕೋಟಿ ಕೋಟಿ ಹಣವನ್ನು ದುಡಿಯುತ್ತಾರೆ, ಎಲ್ಲರಿಗೂ ಕೋಟಿ ಇಲ್ಲವೆಂದರೂ, ಲಕ್ಷಗಳಂತೂ ಖಚಿತ. ಆಟಗಾರರ ಸಾಮರ್ಥ್ಯಕ್ಕೆ ತಕ್ಕಂತೆ ತಂಡಗಳು ಕೋಟಿ ಕೋಟಿಗಳಷ್ಟು ಹಣ ಸುರಿದು ಆಟಗಾರರನ್ನು ಖರೀದಿ ಮಾಡುತ್ತಾರೆ. ಅದರಲ್ಲಿಯೂ ಅತ್ಯುತ್ತಮ ಟಾಪ್ ಪ್ಲೇಯರ್ ಗಳಿಗೆ ಬಹಳ ಡಿಮಾಂಡು, ತಂಡಗಳು ಮುಗಿಬಿದ್ದು ಆಟಗಾರರನ್ನು ಖರೀದಿ ಮಾಡಿ ಕೇವಲ ಹತ್ತರಿಂದ ಹದಿನೈದು ಪಂದ್ಯಗಳಾಡಲು ಕೋಟಿಗಳಷ್ಟು ಹಣ ನೀಡುತ್ತಾರೆ. ಅದರಂತೆಯೇ ಫುಟ್ಬಾಲ್ ಆಟದಲ್ಲೂ ಕೂಡ ಆಟಗಾರರು ಕೋಟಿಗಟ್ಟಲೆ ಹಣ ಗಳಿಸುತ್ತಾರೆ, ಜಾಹೀರಾತು ಸೇರಿದಂತೆ ವಿಶ್ವದ ಪ್ರತಿಷ್ಠಿತ ತಂಡಗಳಲ್ಲಿ ಸ್ಥಾನ ಪಡೆದುಕೊಂಡರೆ ಕನಿಷ್ಠ ವರ್ಷಕ್ಕೆ 50 ಕೋಟಿ ಹಣ ದುಡಿಯುತ್ತಾರೆ. ಇನ್ನು ಅತ್ಯುತ್ತಮ ಪ್ಲೇಯರ್ ಆಗಿದ್ದರೇ ನೂರಾರು ಕೋಟಿ ಹಣವನ್ನು ಬಹಳ ಸುಲಭವಾಗಿ ಗಳಿಸುತ್ತಾರೆ. ಅಷ್ಟಕ್ಕೂ ಈಗ ಯಾಕೆ ಈ ಲೆಕ್ಕಾಚಾರಗಳು ಎಂದು ಕೊಂಡಿರಾ? ಇಲ್ಲಿದೆ ನೋಡಿ ಉತ್ತರ.

ವಿಶ್ವದ ಪ್ರತಿಷ್ಠಿತ ಫುಟ್ಬಾಲ್ ತಂಡಗಳಲ್ಲಿ ಒಂದಾಗಿರುವ ಲಿವರ್ಪೂಲ್ ತಂಡದ ಸ್ಟಾರ್ ಆಟಗಾರ ಸ್ಯಾಡಿಯೌ ಮಾನೆ ರವರು, ಲಿವರ್ಪೂಲ್ ತಂಡದ ಸೂಪರ್ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವ ಪ್ರಮುಖ ಆಟಗಾರರ ಸಾಲಿನಲ್ಲಿ ಸ್ಥಾನ ಪಡೆದು ಕೊಂಡಿರುವ ಮಾನೆ ರವರ ಆದಾಯ 2 ವರ್ಷಗಳ ಹಿಂದೆಯೇ ವರ್ಷಕ್ಕೆ 75 ಕೋಟಿ. ಇಷ್ಟೆಲ್ಲಾ ಆದಾಯ ಗಳಿಸುತ್ತಿರುವ ಆಟಗಾರ ಫುಟ್ಬಾಲ್ ಪಂದ್ಯವೊಂದಕ್ಕೆ ಕ್ರೀಡಾಂಗಣಕ್ಕೆ ತೆರಳುವಾಗ ಪತ್ರಕರ್ತ ರೊಬ್ಬರು ಫೋಟೋ ತೆಗೆದಿದ್ದರು. ಆ ಫೋಟೋದಲ್ಲಿ ಮಾನೆ ರವರ ಕೈಯಲ್ಲಿದ್ದ ಐ ಫೋನ್ ಸ್ಕ್ರೀನ್ ಬಿರುಕು ಬಿಟ್ಟಿತ್ತು. ಇದನ್ನು ಗಮನಿಸಿದ ಕೆಲವರು ಟ್ರೋಲ್ ಮಾಡಿದ್ದರು, ಇಂಟರ್ನೆಟ್ನಲ್ಲಿ ಬಾರಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾನೆರವರು ಹೊಸ ಫೋನ್ ಖರೀದಿ ಮಾಡುವಂತೆ ಕಾಣುತ್ತಿಲ್ಲ, ಇಷ್ಟೊಂದು ಜಿಪುಣ, ಹೊಸ ಫೋನ್ ಬಿಡಿ ದಯವಿಟ್ಟು ನೀವು ಒಬ್ಬ ಫುಟ್ಬಾಲ್ ಆಟಗಾರ, ಕನಿಷ್ಠ ಪಕ್ಷ ಸ್ಕ್ರೀನ್ ಬದಲಾಯಿಸಿ ಫೋನಿಗೆ ಒಂದು ಸ್ಕ್ರೀನ್ ಗಾರ್ಡ್ ತೆಗೆದುಕೊಂಡು ಹಾಕಿಕೊಳ್ಳಿ ಎಂದು ಮನ ಬಂದಂತೆ ಮಾತುಗಳ ಮೂಲಕ ಮಾನೆ ರವರನ್ನು ಟ್ರೋಲ್ ಮಾಡಿದ್ದರು.

ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದರೂ ಕೂಡ ಮಾನೆ ರವರು ಫೋನ್ ಬದಲಾಯಿಸಲಿಲ್ಲ, ಇದು ಎಷ್ಟರ ಮಟ್ಟಿಗೆ ಸದ್ದು ಮಾಡಿತ್ತು ಎಂದರೇ ಟಿವಿ ಸಂದರ್ಶನಕ್ಕೆಂದು ತೆರಳಿದಾಗ ಅಲ್ಲಿಯೂ ಕೂಡ ನಿರೂಪಕರು ಮಾನೆ ರವರನ್ನು ಇದೇ ಪ್ರಶ್ನೆ ಕೇಳಿದರು. ನಿಮ್ಮ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿರುಕು ಬಿಟ್ಟಿರುವ ಫೋನ ಬಳಸುತ್ತಿದ್ದೀರಾ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ, ಆದರೂ ಕೂಡ ನೀವು ಇಲ್ಲಿಯವರೆಗೂ ಹೊಸ ಫೋನ್ ಖರೀದಿ ಮಾಡಿಲ್ಲ, ಅಷ್ಟೇ ಯಾಕೆ ಆ ಸ್ಕ್ರೀನ್ ಇನ್ನೂ ಕೂಡ ಹಾಗೆಯೇ ಇದೆ, ಯಾಕೆ ನೀವು ಸ್ಕ್ರೀನ್ ಬದಲಾಯಿಸಿ, ಸ್ಕ್ರೀನ್ ಗಾರ್ಡ್ ಕೂಡ ಹಾಕಿ ಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಮಾನೆ ರವರು ನೀಡಿದ ಉತ್ತರ ಟ್ರೋಲ್ ಮಾಡಿದ್ದ ಎಲ್ಲರೂ ಪಶ್ಚಾತಾಪ ಪಟ್ಟು ಸೆಲ್ಯೂಟ್ ಮಾಡುವಂತೆ ಇತ್ತು. ಮೊದಲಿಗೆ ಈ ಫೋನ್ ನಾನು ಖರೀದಿ ಮಾಡಿಲ್ಲ, ಇದನ್ನು ಗಿನಿ ವಿಜ್ನಾಲ್ಡಮ್, ಡಚ್ ಫುಟ್ಬಾಲ್ ಆಟಗಾರ ನನಗೆ ಉಡುಗೊರೆಯನ್ನಾಗಿ ನೀಡಿದರು. ಬೇಡ ಎಂದೇ, ಆದರೂ ಸ್ನೇಹಕ್ಕೆ ಕಟ್ಟಿಬಿದ್ದು ತೆಗೆದುಕೊಳ್ಳಲೇಬೇಕಾಯಿತು.

ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರ ಮುಂದುವರೆಸಿದ ಮಾನೆ ರವರು, ನಾನು ಆದಾಯ ಗಳಿಸುವ ಹಣದಲ್ಲಿ 10 ಫೆರಾರಿ ಕಾರುಗಳು, 20 ಡೈಮಂಡ್ ಗಡಿಯಾರಗಳು, ಎರಡು ಖಾಸಗಿ ವಿಮಾನಗಳು ಎಲ್ಲವನ್ನು ಖರೀದಿಸಿ ನಾನು ಐಷಾರಾಮಿ ಜೀವನ ಮಾಡುವುದು ಬಹಳ ಸುಲಭದ ಕೆಲಸ. ಹಣ ಗಳಿಕೆಗಾಗಿ ಮತ್ತಷ್ಟು ಜಾಹೀರಾತುಗಳಲ್ಲಿ ನಟಿಸಿ, ಮತ್ತಷ್ಟು ಹಣ ಮಾಡಿ ಬೇಕಾದ ಎಲ್ಲವನ್ನು ನಾನು ಖರೀದಿ ಮಾಡಬಹುದು, ಆದರೆ ಅದರಿಂದ ಜಗತ್ತಿಗೆ ಏನು ಲಾಭ?? ಟ್ರೋಲ್ ಮಾಡುತ್ತಿದ್ದಾರಲ್ಲ ಅವರಿಗೆ ಏನಾದರೂ ಲಾಭ ಸಿಗುತ್ತದೇಯೇ? ನಾನು ಒಂದು ಕಾಲದಲ್ಲಿ ಹಸಿವಿನಿಂದ ಬಳಲಿದ್ದೇನೆ, ಊಟವಿಲ್ಲದೆ ಅದೆಷ್ಟೋ ದಿನಗಳು ಉಪವಾಸ ಮಲಗಿದ್ದೇನೆ. ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಹೊಲಗಳಲ್ಲಿ ಕೂಲಿ ಕೆಲಸ ಮಾಡಿದ್ದೇನೆ. ಫುಟ್ಬಾಲ್ ಕ್ರೀಡೆಯನ್ನು ಆಟವಾಡಲು ನನ್ನ ಬಳಿ ಶೂ ಖರೀದಿ ಮಾಡಲು ಹಣವಿರಲಿಲ್ಲ, ಬರಿಗಾಲಿನಲ್ಲಿ ಫುಟ್ಬಾಲ್ ಅಭ್ಯಾಸ ಮಾಡಿದ್ದೇನೆ. ಹಣದ ಕೊರತೆಯಿಂದಾಗಿ ನಾನು ಶಾಲೆಯ ಬಿಟ್ಟೆ, ಆದರೆ ಇಂದು ನನ್ನ ಬಳಿ ಹಣವಿದೆ, ಅದರಿಂದ ನಾನು ಇತರರಿಗೆ ಸಹಾಯ ಮಾಡಬಹುದು.

ನಾನು ಗಳಿಸಿದ ಹಣ ಗಳಿಂದ ಶಾಲೆಗಳನ್ನು ನಿರ್ಮಿಸುತ್ತಿದ್ದೇನೆ, ಕೆಲವು ಶಾಲೆಗಳು ಈಗಾಗಲೇ ನಿರ್ಮಾಣಗೊಂಡಿವೆ. ಬಡ ಜನರಿಗೆ ಆಹಾರ ಮತ್ತು ಬಟ್ಟೆಗಳನ್ನು ಕೂಡ ನೀಡುತ್ತಿದ್ದೇನೆ. ಕ್ರೀಡೆಗಳಿಗೆ ಉತ್ತೇಜನ ನೀಡಲು ಶಾಲೆಯ ಜೊತೆ ಕ್ರೀಡಾಂಗಣವನ್ನು ನಿರ್ಮಿಸಿ ತೀವ್ರ ಬಡತನದಲ್ಲಿ ಇರುವ ಜನರಿಗೆ ಬಟ್ಟೆ, ಆಹಾರಗಳನ್ನು ಕೂಡ ಒದಗಿಸುತ್ತೇನೆ. ಇನ್ನು ಸೆನೆಗಲೀಸ್ ಎಂಬ ಪ್ರದೇಶದಲ್ಲಿ ಜನರು ತುಂಬಾ ಬಡವರಾಗಿರುವ ಕಾರಣ ತಿಂಗಳಿಗೆ ಸುಮಾರು 70 ಯೂರೋ (6000 ರೂಪಾಯಿ) ಹಣವನ್ನು ಪ್ರತಿ ಬಡ ಕುಟುಂಬಗಳಿಗೆ ನೀಡುತ್ತಿದ್ದೇನೆ. ನಾನು ಐಷಾರಾಮಿ ಕಾರುಗಳು, ಐಶಾರಾಮಿ ಮನೆ, ವಿವಿಧ ದೇಶಗಳಿಗೆ ಪ್ರವಾಸಗಳು ಮತ್ತು ಐಷಾರಾಮಿ ವಿಮಾನಗಳ ಮೂಲಕ ಜನರಿಗೆ ನಾನು ಗಳಿಸಿದ ಹಣವನ್ನು ಪ್ರದರ್ಶಿಸುವ ಅಗತ್ಯವಿಲ್ಲ. ನಾನು ಇಂದು ಎಷ್ಟೇ ದುಡಿದಿದ್ದರೊ ಆ ಹಣವೆಲ್ಲವು ಕೂಡ ಜನರ ಅಭಿಮಾನದಿಂದ ನಾನು ಗಳಿಸಿದ ಹಣ. ಆದಕಾರಣ ಸ್ವಲ್ಪಮಟ್ಟಿಗೆ ನಾನು ಅವೆಲ್ಲವನ್ನು ಅವರಿಗೆ ನೀಡುತ್ತಿದ್ದೇನೆ. ಅದೇ ಕಾರಣಕ್ಕಾಗಿ ನಾನು ಹೊಸ ಫೋನು ಖರೀದಿಸಿಲ್ಲ ಎಂದರು.

ಈಗ ಫೋನ್ ಅನ್ನು ಸುಲಭವಾಗಿ ಬಳಸಬಹುದು, ಬಿರುಕು ಬಿಟ್ಟಿರಬಹುದು ಆದರೂ ಕೂಡ ಬಳಸಬಹುದು, ಸುಮ್ಮನೆ ನಾವು ಫೋನ್ ಖರೀದಿ ಮಾಡುವ ಹಣದಲ್ಲಿ ಅದೆಷ್ಟೋ ಕುಟುಂಬಗಳು ಒಂದು ತಿಂಗಳ ಕಾಲ ಹೊಟ್ಟೆ ತುಂಬಿಸಿಕೊಳ್ಳುತ್ತವೆ ಎಂದರು. ಮಾನೆ ರವರ ಈ ಉತ್ತರ ಕೇಳಿದ ಜನರು ಮಾನೆ ರವರ ಉದಾರ ಮನಸ್ಸಿಗೆ ಸೆಲ್ಯೂಟ್ ಮಾಡಿದರು. ಇನ್ನೂ ಟ್ರೋಲ್ ಮಾಡಿದ ಪ್ರತಿಯೊಬ್ಬರು, ಸಾಮಾಜಿಕ ಜಾಲತಾಣಗಳಲ್ಲಿ ಸಾರಿ ಮಾನೆ ಎಂಬ ಆಶ್ ಟ್ಯಾಗ್ ಕ್ಷಮಿಸಿ ಎಂದು ಟ್ರೆಂಡಿಂಗ್ ಸೃಷ್ಟಿ ಮಾಡಿದ್ದರು. ಒಟ್ಟಿನಲ್ಲಿ ಅದೇನೇ ಆಗಲಿ ಈ ರೀತಿಯ ಅದ್ಭುತ ವ್ಯಕ್ತಿಗಳು ಪ್ರಪಂಚದಲ್ಲಿ ಕೆಲವೇ ಕೆಲವರು ಇದ್ದಾರೆ, ಇವರಿಗೊಂದು ನಮ್ಮ ಪರವಾಗಿ ಬಿಗ್ ಸೆಲ್ಯೂಟ್.