ಸುಶಾಂತ್ ಘಟನೆಯಲ್ಲಿ ಮತ್ತೊಂದು ಮಹತ್ವದ ತಿರುವು ನೀಡಲು ಚಾಲಕನ ಜೊತೆ ಎಂಟ್ರಿ ಕೊಟ್ಟ ಸ್ವಾಮಿ! ಏನು ಗೊತ್ತಾ?

ಸುಶಾಂತ್ ಘಟನೆಯಲ್ಲಿ ಮತ್ತೊಂದು ಮಹತ್ವದ ತಿರುವು ನೀಡಲು ಚಾಲಕನ ಜೊತೆ ಎಂಟ್ರಿ ಕೊಟ್ಟ ಸ್ವಾಮಿ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕೊನೆಗೂ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಲಾಗಿದೆ. ಸುಶಾಂತ್ ಸಿಂಗ್ ರವರ ಘಟನೆಯಲ್ಲಿ ನಡೆದ ಹಲವಾರು ಘಟನೆಗಳ ಮೇಲೆ ಹಲವಾರು ಅನುಮಾನಗಳು ಕೇಳಿ ಬಂದಿದ್ದ ಕಾರಣ ಇಡೀ ದೇಶದಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಬೇಕು ಎಂಬ ಕೂಗು ಕೇಳಿ ಬಂದಿತ್ತು, ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಜನರು ಇದೇ ಅಭಿಪ್ರಾಯವನ್ನು ಹೊರ ಹಾಕಿದ್ದರು. ಕೊನೆಗೂ ಹಲವಾರು ದಿನಗಳ ಬಳಿಕ ಘಟನೆಯ ತನಿಖೆಯನ್ನು ಸಿಬಿಐ ಸಂಸ್ಥೆಗೆ ವಹಿಸಲಾಗಿದೆ, ಇದರಲ್ಲಿ ಸುಬ್ರಹ್ಮಣ್ಯಂ ಸ್ವಾಮಿ ರವರ ಪಾತ್ರ ಎಷ್ಟರ ಮಟ್ಟಿಗೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ.

ಆದರೆ ಸಿಬಿಐ ಸಂಸ್ಥೆಗೆ ತನಿಖೆ ಹಸ್ತಾಂತರಿಸಿದ ತಕ್ಷಣ ನನ್ನ ಜವಾಬ್ದಾರಿ ಮುಗಿದಿದೆ ನಾನು ಹೇಳಿದಂತೆ ಸಿಬಿಐ ತನಿಖೆಗೆ ಇದೀಗ ಅಸ್ತು ಎನ್ನಲಾಗಿದೆ. ಇನ್ನು ನಾನು ಹೋರಾಡುತ್ತೇನೆ ಎಂದು ಪ್ರಕರಣದಿಂದ ದೂರ ಸರಿಯುವ ಮುನ್ಸೂಚನೆಯನ್ನು ಸುಬ್ರಹ್ಮಣ್ಯ ಸ್ವಾಮಿ ಅವರು ನೀಡಿದ್ದರು. ಆದರೆ ಇದೀಗ ಮಹಾರಾಷ್ಟ್ರ ರಾಜ್ಯದ ವರ್ತನೆ ಕಂಡು ಸುಬ್ರಹ್ಮಣ್ಯ ಸ್ವಾಮಿ ರವರು ಮತ್ತಷ್ಟು ಪ್ರಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಿದ್ದರಾಗಿ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಮಹತ್ವದ ತಿರುವು ನೀಡಲು ಹೊರಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ರವರು ಇಹಲೋಕ ತ್ಯಜಿಸಿದ ಮೇಲೆ ದೇಹ ತೆಗೆದು ಕೊಳ್ಳಲು ಬಂದ ಅಂಬುಲೆನ್ಸ್ ಚಾಲಕನ ಮಾತುಗಳನ್ನು ಕೇಳಿರುವ ಸುಬ್ರಹ್ಮಣ್ಯ ಸ್ವಾಮಿ ರವರು ಮತ್ತೊಮ್ಮೆ ಧ್ವನಿಯೆತ್ತಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಕುರಿತು ಆಂಬುಲೆನ್ಸ್ ಚಾಲಕ ಮಾತನಾಡಿದ್ದು, ಸುಶಾಂತ್ ಸಿಂಗ್ ರವರ ದೇಹವನ್ನು ಆಂಬುಲೆನ್ಸ್ ನಲ್ಲಿ ಕರೆದು ಕೊಂಡು ಹೋಗುವಾಗ ಅವರ ಕಾಲುಗಳು ಮುರಿದಂತೆ ಟ್ವಿಸ್ಟ್ ಆಗಿದ್ದವು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಚಾಲಕನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ, ಇದನ್ನು ಕಂಡ ಸುಬ್ರಹ್ಮಣ್ಯಂ ಸ್ವಾಮಿ ಅವರು ಕೂಡಲೇ ಚಾಲಕನ ಬೆಂಬಲಕ್ಕೆ ನಿಂತು ಈ ಕೂಡಲೇ ಚಾಲಕನಿಂದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ, ಸಿಬಿಐ ಸಂಸ್ಥೆಯು ಸುಶಾಂತ್ ಸಿಂಗ್ ರಜಪೂತ್ ರವರ ದೇಹವನ್ನು ಪರೀಕ್ಷೆ ಮಾಡಿರುವ ಎಲ್ಲಾ ವೈದ್ಯರನ್ನೂ ವಿಚಾರಣೆ ನಡೆಸಿ ಯಾವ ಪರಿಸ್ಥಿತಿಯಲ್ಲಿ ದೇಹ ಸಿಕ್ಕಿತ್ತು ಎಂಬುದನ್ನು ಸಂಪೂರ್ಣ ತನಿಖೆ ನಡೆಸಿ ವಿವರಣೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ನ್ಯಾಯ ಸಿಗುವವರೆಗೂ ನನ್ನ ಪ್ರಯತ್ನಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಕೊನೆಯವರೆಗೂ ಪ್ರಕರಣದಲ್ಲಿ ಉಳಿಯುವುದಾಗಿ ಖಚಿತಪಡಿಸಿದ್ದಾರೆ.