ಆರ್ಸಿಬಿ ಕಪ್ ಗೆಲ್ಲಲು ಪ್ರಮುಖ ಕಾರಣಗಳನ್ನು ತಿಳಿಸಿದ ವಿಶ್ಲೇಷಕರು ! ಕಳೆದ ಸೀಸನ್ಗಳಿಗಿಂತ ತಂಡ ಹೇಗೆ ವಿಭಿನ್ನವಾಗಿದೆ ಗೊತ್ತಾ?

ಆರ್ಸಿಬಿ ಕಪ್ ಗೆಲ್ಲಲು ಪ್ರಮುಖ ಕಾರಣಗಳನ್ನು ತಿಳಿಸಿದ ವಿಶ್ಲೇಷಕರು ! ಕಳೆದ ಸೀಸನ್ಗಳಿಗಿಂತ ತಂಡ ಹೇಗೆ ವಿಭಿನ್ನವಾಗಿದೆ ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯಾವಾಗಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಲ್ಲಿ ಉನ್ನತ ಮಟ್ಟದ ತಂಡಗಳಲ್ಲಿ ಒಂದಾಗಿದೆ , ಆದರೆ ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದು ಬರುವಲ್ಲಿ ಯಶಸ್ವಿಯಾಗಲಿಲ್ಲ, ಆದರೂ ಅಭಿಮಾನಿಗಳು ಬೆಂಬಲ ನೀಡುವುದನ್ನು ನಿಲ್ಲಿಸಿಲ್ಲ, ನಿಲ್ಲಿಸುವುದು ಇಲ್ಲ. ಆದರೆ ಹಲವಾರು ವರ್ಷಗಳಿಂದಲೂ ವಿಶ್ವ ದರ್ಜೆಯ ಆಟಗಾರರು ಮತ್ತು ಭಾರತೀಯ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಹೊರತಾಗಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ, ಯಾಕೆಂದರೆ ಪ್ರತಿ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ, ಬಹುತೇಕ ಪಂದ್ಯಗಳಲ್ಲಿ ಇವರಿಬ್ಬರು ಮಾತ್ರ ಮಿಂಚುತ್ತಾರೆ, ಉಳಿದ ಯಾವುದೇ ಆಟಗಾರರಿಂದ ಯಾವುದೇ ರೀತಿಯ ಬೆಂಬಲ ಸಿಗುವುದಿಲ್ಲ, ಅದರಲ್ಲಿಯೂ ಬೌಲಿಂಗ್ ವಿಭಾಗವು ಬಹಳ ಕಳಪೆ ಗುಣಮಟ್ಟದ ಆಟವನ್ನು ಪ್ರದರ್ಶನ ಮಾಡುತ್ತದೆ. ಆದರೆ ಆರ್ಸಿಬಿ ತಂಡವು ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಸ್ಪೋರ್ಟ್ಸ್ ಖೆಡ್ಡಾ ಸಂಸ್ಥೆಯ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ಮೂರು ಕಾರಣಗಳನ್ನು ನೀಡುತ್ತಾ, ವಿವರಣೆ ನೀಡಿದ್ದಾರೆ.

ಕಾರಣ 3: ಆರ್‌ಸಿಬಿ ಯುವ ಆಟಗಾರರು, ತಮ್ಮನ್ನು ತಾವು ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ. ತಮ್ಮ 21 ಸದಸ್ಯರ ತಂಡದಲ್ಲಿ, ಆರ್‌ಸಿಬಿ ವಿಶ್ವದ ಅತ್ಯಂತ ಪ್ರತಿಷ್ಠಿತ ಟಿ 20 ಲೀಗ್‌ನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಲು ಉತ್ಸುಕರಾಗಿರುವ ಯುವ ಆಟಗಾರರನ್ನು ಹೊಂದಿದೆ. ದೇವದುತ್ ಪಡಿಕಲ್, ಅವರು ಅಸಾಧಾರಣ ಪ್ರಥಮ ದರ್ಜೆ ಋತುವನ್ನು ಹೊಂದಿದ್ದಾರೆ, 2019-20 ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಬ್ಬರಿ 609 ರನ್ ಗಳಿಸಿ ಮಿಂಚಿದ್ದಾರೆ. ಮತ್ತೊಬ್ಬ ಆಟಗಾರ ಜೋಶ್ ಫಿಲಿಪ್ ಅವರನ್ನು ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಭವಿಷ್ಯವೆಂದು ಹೇಳಲಾಗುತ್ತಿದೆ, ಅವರು ಕೂಡ ಆರ್‌ಸಿಬಿ ತಂಡಕ್ಕೆ ಬಲ ತುಂಬಲಿದ್ದಾರೆ. ಇವರ ಜೊತೆಗೆ ಆಸ್ಟ್ರೇಲಿಯಾ ತಂಡದ ಆಟಗಾರ ಅರೋನ್ ಫಿಂಚ್ ತಂಡ ಬಲ ತುಂಬಲಿದ್ದಾರೆ. ಆರ್‌ಸಿಬಿ ವಾಷಿಂಗ್ಟನ್ ಸುಂದರ್ ಅವರ ಸರ್ವಾಂಗೀಣ ಪ್ರತಿಭೆಯನ್ನು ಸಹ ಹೊಂದಿದೆ, ತಮಿಳುನಾಡು ಆಫ್-ಸ್ಪಿನ್ನರ್ ತಿರುವು ನೀಡುವ ಪಿಚ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಆದ ಕಾರಣ ಈ ಬಾರಿ ಇವರು ಪ್ರಮುಖ ಟ್ರಂಪ್ ಕಾರ್ಡ್ ಎಂದು ಹೇಳಲಾಗುತ್ತಿದೆ.

ಇನ್ನು ಆರ್ಸಿಬಿ ತಂಡಕ್ಕೆ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ಎಂದರೇ ಅದು ಕೊನೆಯ ಓವರ್ಗಳಲ್ಲಿ ಬೌಲಿಂಗ್ ಮಾಡುವುದು. ಕೆಲವೊಂದು ಪಂದ್ಯಗಳಲ್ಲಿ ಬೌಲಿಂಗ್ ವಿಭಾಗವು ಸಂಪೂರ್ಣವಾಗಿ ಯಶಸ್ಸು ಕಾಣುವುದಿಲ್ಲವಾದರೂ, ಪ್ರಮುಖವಾಗಿ ಕೊನೆಯ ಓವರ್ ಗಳಲ್ಲಂತೂ ತೀರ ಕಳಪೆ ಗುಣಮಟ್ಟದ ಬೌಲಿಂಗ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಆರ್ಸಿಬಿ ತಂಡಕ್ಕೆ ಬೌಲಿಂಗ್ ವಿಭಾಗದ ಯಾವುದೇ ಕೊರತೆ ಕಾಣುವುದಿಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ, ಆರಂಭದಿಂದ ಡೇಲ್ ಸ್ಟೆನ್/ ಕೆನ್ ರಿಚರ್ಡ್ಸನ್ ಸೇರಿದಂತೆ ಕೊನೆಯ ಓವರ್ ಗಳ ಸ್ಪೆಷಲಿಸ್ಟ್ ಎಂದು ಖ್ಯಾತಿ ಪಡೆದು ಕೊಂಡಿರುವ ಕ್ರಿಸ್ ಮೋರಿಸ್ ರವರು ತಂಡದಲ್ಲಿ ಇದ್ದಾರೆ. ಇನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಅನುಭವ ಪಡೆದುಕೊಂಡಿರುವ ನವದೀಪ್ ಸೈನಿ ರವರು ನಿಧಾನಗತಿಯ ಬಾಲುಗಳನ್ನು ಬೌಲ್ ಮಾಡಲು ಅಭ್ಯಾಸ ಮಾಡಿರುವ ಕಾರಣ ಖಂಡಿತ ಇವರು ಕೊನೆಯ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಕ್ರಿಕೆಟ್ ವಿಶ್ಲೇಷಕರು ವಿವರಣೆ ನೀಡಿದ್ದಾರೆ.

ಇನ್ನು ಬ್ಯಾಟಿಂಗ್ ವಿಭಾಗ, ಆರ್ಸಿಬಿ ತಂಡ ಮೊದಲಿನಿಂದಲೂ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ, ಇಷ್ಟು ದಿವಸ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ರವರ ಮೇಲೆ ಬಹುತೇಕ ಬಾರಿ ಅವಲಂಬಿ ಆಗಿದ್ದರೂ ಕೂಡ ಈ ಬಾರಿ ಆರನ್ ಫಿಂಚ್ ಅಥವಾ ಫಿಲಿಪ್, ದೇವದತ್ತ ಪಡಿಕಲ್ ಸೇರಿದಂತೆ ಮೊಯಿನ್ ಆಲಿ ಅಥವಾ ಕ್ರಿಸ್ ಮಾರಿಸ್ ಉತ್ತಮ ಲಯದಲ್ಲಿ ಇರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಈ ಎಲ್ಲಾ ಪ್ರಮುಖ ಕಾರಣಗಳಿಂದ ಈ ವರ್ಷ ಆರ್ಸಿಬಿ ತಂಡವು ಕಪ್ ಗೆಲ್ಲುವ ನೆಚ್ಚಿನ ತಂಡ ಗಳಲ್ಲಿ ಮೊದಲನೇ ಸಾಲಿನಲ್ಲಿ ಕಂಡುಬರುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರು ವಿವರಣೆ ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.