ಮಹತ್ವದ ತಿರುವು, ರಿಯಾ ಬಳಿ ಸಿಕ್ಕಿ ಬಿದ್ದವು ಮಹತ್ವದ ದಾಖಲೆ ! ಶಿವಸೇನೆ ಪ್ರಮುಖ ನಾಯಕನ ಪಾತ್ರ?? ನಡೆಯುತ್ತಿರುವುದಾದರೂ ಏನು ಗೊತ್ತಾ??

ಮಹತ್ವದ ತಿರುವು, ರಿಯಾ ಬಳಿ ಸಿಕ್ಕಿ ಬಿದ್ದವು ಮಹತ್ವದ ದಾಖಲೆ ! ಶಿವಸೇನೆ ಪ್ರಮುಖ ನಾಯಕನ ಪಾತ್ರ?? ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆ ದಿನಕ್ಕೊಂದು ಮಹತ್ವದ ತಿರುವು ಪಡೆದು ಕೊಳ್ಳುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಘಟನೆಯನ್ನು ಸಿಬಿಐ ಸಂಸ್ಥೆಗೆ ವಹಿಸಬಾರದು, ಮಹಾರಾಷ್ಟ್ರ ಪೊಲೀಸರು ಸಂಪೂರ್ಣ ತನಿಖೆಯನ್ನು ನಡೆಸಿ ನ್ಯಾಯ ಒದಗಿಸಿಕೊಡುತ್ತಾರೆ ಎಂದು ಶಿವಸೇನಾವು ಅಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಆದರೆ ಸುಶಾಂತ್ ಸಿಂಗ್ ರಜಪೂತ್ ರವರ ಪೋಷಕರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಮಹಾರಾಷ್ಟ್ರ ರಾಜ್ಯಕ್ಕೆ ತನಿಖೆ ನಡೆಸಲು ಬಂದಾಗ ಪೊಲೀಸರಿಗೆ ಯಾವುದೇ ಸೌಲಭ್ಯ ಒದಗಿಸದೇ ಹಾಗೂ ಪ್ರಮುಖ ಐಪಿಎಸ್ ಅಧಿಕಾರಿಯನ್ನು ಬಲವಂತದ ಕ್ವಾರಂಟೈನ್ ಮಾಡಿ, ಮಹಾರಾಷ್ಟ್ರ ರಾಜ್ಯ ನಡೆದು ಕೊಂಡ ರೀತಿಯನ್ನು ನೋಡಿದ ನಂತರ ಬಿಹಾರ ರಾಜ್ಯ ಸಿಬಿಐ ತನಿಖೆಗೆ ಆದೇಶಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು ಹಾಗೂ ಕೇಂದ್ರ ಇದಕ್ಕೆ ಅಸ್ತು ಎಂದು ಸಿಬಿಐ ತನಿಖೆ ಪ್ರಾರಂಭವಾಗಿದೆ.

ಮೊದಲಿಗೆ ತನ್ನ ಮೇಲೆ ಆರೋಪಗಳು ಕೇಳಿ ಬಂದ ತಕ್ಷಣ ರಿಯಾ ಚಕ್ರವರ್ತಿ ರವರು ಕೂಡ ಸಿಬಿಐ ತನಿಖೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದರು. ಆದರೆ ಇದೀಗ ಅವರು ಸಿಬಿಐ ತನಿಖೆ ನಡೆಸಬಾರದು ಸಂಪೂರ್ಣ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರಿಗೆ ವರ್ಗಾವಣೆ ಮಾಡಿ ಕೂಡಲೇ ಬಿಹಾರ ಪೊಲೀಸರು ಹಾಗೂ ಸಿಬಿಐ ಅಧಿಕಾರಿಗಳು ತನಿಖೆ ಯಿಂದ ಹಿಂದೆ ಸರಿಯಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಶಿವಸೇನಾದ ನಾಯಕರು ಅಂದಿನಿಂದಲೂ ಸಿಬಿಐ ತನಿಖೆಯನ್ನು ವಿರೋಧಿಸುತ್ತಾ ಬಂದಿದ್ದಾರೆ, ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ ಎಂದು ಪ್ರತಿಪಾದಿಸುತ್ತಾ ಬಂದು ಸಿಬಿಐ ತನಿಖೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದಾರೆ ಹಾಗೂ ಸಿಬಿಐ ಅಧಿಕಾರಿಗಳು ಮುಂಬೈಗೆ ಬಂದರೆ ಅವರಿಗೆ ಒಳಪಡಿಸುವುದಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡ ಕಾರಣ ಸಿಬಿಐ ಅಧಿಕಾರಿಗಳು ಇಲ್ಲಿಯವರೆಗೂ ಮುಂಬೈಗೆ ಎಂಟ್ರಿ ಕೊಟ್ಟಿಲ್ಲ.

ಎಲ್ಲಾ ವಿದ್ಯಮಾನಗಳ ಬಳಿಕ ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಮತ್ತೊಂದು ಮಹತ್ವದ ತಿರುವು ಸಿಕ್ಕಿದ್ದು, ಇದರ ಹಿಂದೆ ಶಿವಸೇನಾ ದ ಪ್ರಮುಖ ನಾಯಕನ ಕೈವಾಡವಿದೆ ಎಂಬ ಬಲವಾದ ಆರೋಪ ಕೇಳಿಬಂದಿದೆ. ಇದು ಕೇವಲ v ಯಾರೂ ಅಷ್ಟಾಗಿ ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಇದಕ್ಕೆ ರಿಯಾ ಚಕ್ರವರ್ತಿ ರವರ ಫೋನಿನಲ್ಲಿ ದಾಖಲೆ ಸಿಕ್ಕಿರುವುದು ಬಹಳಷ್ಟು ಅನುಮಾನಗಳಿಗೆ ದಾರಿ ಮಾಡಿ ಕೊಡುತ್ತಿದೆ. ಹೌದು ಸ್ನೇಹಿತರೇ, ನೆನ್ನೆ ಬಿಹಾರ ಪೊಲೀಸರ ಪರವಾದ ವಕೀಲರು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಶಿವಸೇನಾ ಪಕ್ಷದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರ ಕೈವಾಡವಿದೆ ಎಂದು ಆರೋಪ ಮಾಡಿದ್ದರು, ಆದರೆ ಯಾರು ಈ ಆರೋಪದಲ್ಲಿ ಹುರುಳಿಲ್ಲ ಯಾಕೆಂದರೆ ಶಿವಸೇನಾ ಪಕ್ಷವು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬಾರದು ಎಂದು ಒತ್ತಾಯ ಮಾಡುತ್ತಿದೆ ಅದೇ ಕಾರಣಕ್ಕೆ ಈ ಅನುಮಾನ ಮೂಡಿ ಬರುತ್ತಿದೆ ಎಂದು ಸುಮ್ಮನಾಗಿದ್ದರು.

ಆದರೆ ರಿಯಾ ಚಕ್ರವರ್ತಿ ರವರ ಮತ್ತೊಂದು ಫೋನ್ ಸಿಕ್ಕಿಬಿದ್ದಿದ್ದು, ಆ ಫೋನಿನಲ್ಲಿ ಎಯು(AU) ಎಂದು ಸೇವ್ ಮಾಡಲಾಗಿರುವ ಪ್ರೈವೇಟ್ ನಂಬರಿಗೆ ಬರೋಬ್ಬರಿ ಸುಶಾಂತ್ ಸಿಂಗ್ ಘಟನೆಗೂ ಮುನ್ನ ಹಾಗೂ ನಂತರ 44 ಬಾರಿಕರೆಗಳನ್ನು ಮಾಡಲಾಗಿದೆ. ಈ ನಂಬರ್ ಯಾವ ವ್ಯಕ್ತಿಯದ್ದು ಎಂದು ಇದೀಗ ತನಿಖೆ ನಡೆಸಲಾಗುತ್ತಿದೆ. ಈ ನಂಬರ್ ಯಾರದು ಎಂದು ಹುಡುಕಿಕೊಂಡು ಹೊರಟಾಗ ಮೊದಲ ಅನುಮಾನ ಬಂದದ್ದು ಆದಿತ್ಯ ಠಾಕ್ರೆ ಅವರ ಮೇಲೆ. ಯಾಕೆಂದರೆ ಮೊದಲಿನಿಂದಲೂ AU ಎಂಬ ಟ್ಯಾಗ್ ಲೈನ್ ಬಳಸುತ್ತಿರುವುದು ಆದಿತ್ಯ ಠಾಕ್ರೆ ಅವರು ಇಂದಿಗೂ ಕೂಡ ಅವರ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳಿಗೆ ಎಂಬ ಟ್ಯಾಗ್ ಲೈನ್ ಗಿದೆ. ಅವರ ಹೆಸರು ಆದಿತ್ಯ ಠಾಕ್ರೆ ಆಗಿದ್ದರೂ ಕೂಡ AU ಠಾಕ್ರೆ ಎಂದು ಅವರು ಅವರನ್ನು ಗುರುತಿಸಿಕೊಳ್ಳುತ್ತಾರೆ, ಎಲ್ಲಾ ಕಡೆ ಇದೇ ರೀತಿ ಅವರೇ ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಸಿಬಿಐ ತನಿಖೆಯನ್ನು ಶಿವಸೇನಾ ಪಕ್ಷ ಯಾಕೆ ವಿರೋಧ ಮಾಡುತ್ತಿದೆ ಎಂದು ನಮಗೆ ಈಗ ತಿಳಿಯಿತು. ಇದರ ಹಿಂದೆ ಖಂಡಿತವಾಗಲೂ ಆದಿತ್ಯ ಠಾಕ್ರೆ ಅವರ ಕೈವಾಡವಿದೆ ಎಂದಿದ್ದಾರೆ. ಈ ಸುದ್ದಿ ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು, ಈ ಮಾಹಿತಿ ನಡೆಯುತ್ತಿರುವ ಸಂಪೂರ್ಣ ತನಿಖೆಯಲ್ಲಿ ಮಹತ್ವದ ತಿರುವು ನೀಡಲಿದೆ ಎನ್ನಲಾಗುತ್ತಿದೆ.