ದಾಖಲೆ ನಿರ್ಮಿಸಿದ ಕಾರ್ಯಕ್ರಮ ! ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದ ಜನರೆಷ್ಟು ಗೊತ್ತಾ?

ದಾಖಲೆ ನಿರ್ಮಿಸಿದ ಕಾರ್ಯಕ್ರಮ ! ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸಿದ ಜನರೆಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರವನ್ನು ನಿರ್ಮಾಣ ಮಾಡಲು ಇತ್ತೀಚಿಗಷ್ಟೇ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಎಲ್ಲಾ ಅಂದು ಕೊಂಡಂತೆ ದೇಶದ ಪರಿಸ್ಥಿತಿ ಇದ್ದಿದ್ದರೇ ಕೇವಲ ಶಿಲನ್ಯಾಸ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ಜನರು ಸೇರಿ ಬಹಳ ವಿಜೃಂಭಣೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರು ವಂತೆ ಮಾಡುತ್ತಿದ್ದರು.

ಆದರೆ ದೇಶದಲ್ಲಿನ ಕರೋನ ಪರಿಸ್ಥಿತಿಯ ಕಾರಣ ಕೇವಲ ಕೆಲವು ಮಂದಿ ಮಾತ್ರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಈ ಶಿಲಾನ್ಯಾಸ ಕಾರ್ಯಕ್ರಮವು ಇದೀಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದು, ದೇಶದ ಮೂಲೆ ಮೂಲೆಯಲ್ಲಿಯೂ ಜನರನ್ನು ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೀ ರಾಮ ಮಂದಿರ ಶಿಲನ್ಯಾಸ ಕಾರ್ಯಕ್ರಮದ ಲೈವ್ ಟೀವಿಯಲ್ಲಿ ಪ್ರಸಾರವಾಗಿತ್ತು. ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಅಂಕಿ ಅಂಶಗಳು ಇದೀಗ ಹೊರ ಬಿದ್ದಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ‌. ಆದರೆ ಈ ಅಂಕಿ ಅಂಶಗಳು ಕೇವಲ ಟಿವಿಗಳ ಲೆಕ್ಕದಲ್ಲಿ ಇದೆ, ನಮ್ಮ ದೇಶದಲ್ಲಿ ಬಹುತೇಕ ಮಧ್ಯಮ ವರ್ಗದವರ ಮನೆಯಲ್ಲಿ ಕೇವಲ ಒಂದೇ ಟಿವಿ ಇರುತ್ತದೆ ಹಾಗೂ ಅದೇ ಟಿವಿಯಲ್ಲಿ ಕುಟುಂಬದವರು ಸೇರಿ ಕುಳಿತುಕೊಂಡು ಟಿವಿ ನೋಡುತ್ತಾರೆ.

ಹೀಗೆ ಲೆಕ್ಕ ಹಾಕಿಕೊಂಡರೇ ಅದು ಮತ್ತಷ್ಟು ಕೋಟಿಗಳಷ್ಟು ಹೆಚ್ಚಾಗುತ್ತದೆ. ಆದರೆ ಸದ್ಯದ ಮಟ್ಟಿಗೆ ಕೇವಲ ಲೈವ್ ಪ್ರದರ್ಶನದ ಸಮಯದಲ್ಲಿ ನಾವು ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದಾದರೇ ಇಡೀ ದೇಶದಲ್ಲಿ ಬರೋಬ್ಬರಿ 160 ಮಿಲಿಯನ್ ಅಂದರೇ 16 ಕೋಟಿ ಯಷ್ಟು ಟಿವಿಗಳಲ್ಲಿ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಇನ್ನು ಡಿಜಿಟಲ್ ಪ್ಲಾಟ್ಫಾರ್ಮ್, ಕುಟುಂಬದವರ ಸಂಖ್ಯೆ ಎಲ್ಲಾ ಲೆಕ್ಕ ಹಾಕಿಕೊಂಡರೇ ಖಂಡಿತ ಇದು ಕನಿಷ್ಠ 50 ಕೋಟಿ ತಲುಪುತ್ತದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿವೆ. ಆದರೆ ಅಧಿಕೃತ ಅಂಕಿ-ಅಂಶಗಳ ಪ್ರಕಾರ 16 ಕೋಟಿ ಭಾರತೀಯರು ರಾಮ ಮಂದಿರ ಶಂಕುಸ್ಥಾಪನೆಯನ್ನು ವೀಕ್ಷಿಸಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿಯೇ ದಾಖಲೆ ಸೃಷ್ಟಿಸಿರುವ ರಾಮ ಮಂದಿರ ಇನ್ನೂ ಉದ್ಘಾಟನೆಯಾದ ಮೇಲೆ ದೇಶದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾದರೂ ಅಚ್ಚರಿ ಪಡಬೇಕಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. (ಒಟ್ಟು 200 ಟಿವಿ ಚಾನೆಲ್‌ಗಳು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದರು.)