ಇಂಡಿಯಾ ಟುಡೇ ಸಮೀಕ್ಷೆ: ಮುಂದಿನ ಪ್ರಧಾನಿ ಯಾರು, ಬೆಸ್ಟ್ ಸಿಎಂ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಭಾರತೀಯರು

ಇಂಡಿಯಾ ಟುಡೇ ಸಮೀಕ್ಷೆ: ಮುಂದಿನ ಪ್ರಧಾನಿ ಯಾರು, ಬೆಸ್ಟ್ ಸಿಎಂ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ ಭಾರತೀಯರು

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ನರೇಂದ್ರ ಮೋದಿ ರವರ ಸರ್ಕಾರವನ್ನು ಎರಡನೇ ಬಾರಿಗೆ ಆಯ್ಕೆ ಮಾಡಿ ಜನರು ತಪ್ಪು ಮಾಡಿದ್ದೇವೆ ಎಂಬುದನ್ನು ಅರಿತು ಕೊಂಡಿದ್ದಾರೆ. ಉದ್ಯೋಗ ಸೃಷ್ಟಿ, ಅರ್ಥವಿಲ್ಲದ ಲಾಕ್ಡೌನ್, ಕೊರೋನಾ ನಿರ್ವಹಣೆ ಹಾಗೂ ಜಾತ್ಯಾತೀತತೆಯನ್ನು ಮರೆತು ರಾಮ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ಜನರ ಕೆಂಗಣ್ಣಿಗೆ ನರೇಂದ್ರ ಮೋದಿರವರು ಗುರಿಯಾಗಿದ್ದಾರೆಂದು ಹಲವಾರು ವಿಪಕ್ಷ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ಪಕ್ಷವು ತನ್ನ ಲಾಭಕ್ಕಾಗಿ ರಾಮ ಮಂದಿರವನ್ನು ಬಳಸಿ ಕೊಳ್ಳುತ್ತಿದೆ, ಖಂಡಿತ ಮುಂದೆಂದೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಆಲೋಚನೆ ಕೂಡ ಜನರು ಮಾಡುವುದಿಲ್ಲ ಎಂಬ ಮಾತುಗಳ ಮೂಲಕ ಟೀಕೆಗಳ ಬಾಣಗಳನ್ನು ಸುರಿಸಿದ್ದರು.

ಇಂತಹ ಸಂದರ್ಭದಲ್ಲಿಯೇ ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯಾ ಟು ಡೇ ಸಂಸ್ಥೆಯು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮೂಲಗಳಿಂದ ಮೂಡ್ ಆಫ್ ದಿ ನೇಷನ್ ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಪ್ರಶ್ನೆಗಳಿಗೆ ಜನ ಉತ್ತರ ನೀಡಿದ್ದಾರೆ. ಪ್ರಮುಖವಾಗಿ ಮುಂದಿನ ಪ್ರಧಾನಿ ಯಾರಾಗಬೇಕು, ನರೇಂದ್ರ ಮೋದಿ ರವರ ಸರ್ಕಾರದ ಕಾರ್ಯ ಎಷ್ಟರ ಮಟ್ಟಿಗೆ ತೃಪ್ತಿ ತಂದಿದೆ, ಅತ್ಯಂತ ಪ್ರಭಾವಿ ಕೇಂದ್ರ ಸಚಿವ ಯಾರು, ದೇಶದಲ್ಲಿನ ಯಾವ ಮುಖ್ಯಮಂತ್ರಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಈ ಕ್ಷಣದಲ್ಲಿ ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಪ್ರಶ್ನೆಗಳಿಗೆ ಜನರು ಉತ್ತರ ನೀಡಿದ್ದಾರೆ. ಮೊದಲಿಗೆ ಈ ಕ್ಷಣದಲ್ಲಿ ಲೋಕಸಭಾ ಚುನಾವಣೆ ನಡೆದರೇ ಕಾಂಗ್ರೆಸ್ ಪಕ್ಷವು 49 ಸೀಟುಗಳನ್ನು ಗೆಲ್ಲಲಿದೆ, ಉಳಿದಂತೆ ಇತರ ಪಕ್ಷಗಳು 211 ಹಾಗೂ ಬಿಜೆಪಿ ಪಕ್ಷವು 283 ಸೀಟುಗಳ ಮೂಲಕ ಬಹುಮತ ಸಾಧಿಸಲಿದೆ ಎಂದು ಜನ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಎರಡನೆಯದಾಗಿ ನರೇಂದ್ರ ಮೋದಿ ರವರ ಕಾರ್ಯವೈಕರಿ ಅದ್ಭುತವಾಗಿದೆ ಎಂದು ಶೇಕಡಾ 30 ರಷ್ಟು ಜನ ಉತ್ತರ ನೀಡಿದ್ದರೇ, ಉತ್ತಮವಾಗಿದೆ ಎಂದು ಶೇಕಡಾ 48ರ ಷ್ಟು ಜನ ಉತ್ತರ ನೀಡಿದ್ದಾರೆ. ಇನ್ನುಳಿದಂತೆ ಶೇಕಡ 17 ರಷ್ಟು ಜನರು ಪರವಾಗಿಲ್ಲ ಎಂದರೇ ಕೇವಲ ಶೇಕಡಾ ಐದರಷ್ಟು ಜನ ಮಾತ್ರ ಚೆನ್ನಾಗಿಲ್ಲ ಎಂದು ಉತ್ತರ ನೀಡಿದ್ದಾರೆ. ಇನ್ನುಳಿದಂತೆ ಶೇಕಡ 24 ರಷ್ಟು ಜನ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯ ಕ್ಷಮತೆ ಬಹಳ ತೃಪ್ತಿ ತಂದಿದೆ ಎಂದರೇ, ಶೇಕಡಾ 48 ರಷ್ಟು ಜನ ತೃಪ್ತಿ ತಂದಿದೆ ಎಂದಿದ್ದಾರೆ, ಇನ್ನು ಶೇಕಡ 19 ರಷ್ಟು ಜನರು ತೃಪ್ತಿಯು ತಂದಿಲ್ಲ ಹಾಗೆಂದು ಅಸಂತೃಪ್ತಿಯೂ ಇಲ್ಲ ಎಂದರೇ, ಶೇಕಡ ಎಂಟರಷ್ಟು ಜನ ನಮಗೆ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ಷಮತೆ ತೃಪ್ತಿ ತಂದಿಲ್ಲ ಎಂದು ಕಡ್ಡಿ ಮುರಿದಿದ್ದಾರೆ. ಇನ್ನುಳಿದ ಶೇಕಡಾ ಒಂದರಷ್ಟು ಜನ ಸದ್ಯದ ಮಟ್ಟಿಗೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವ ಕೇಂದ್ರ ಸಚಿವ ಅತ್ಯುತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಶೇಕಡ 39 ರಷ್ಟು ಜನ ಅಮಿತ್ ಶಾ ರವರನ್ನು ಆಯ್ಕೆ ಮಾಡಿದ್ದರೇ, ಶೇಕಡ 17 ರಷ್ಟು ರಾಜನ ರಾಜನಾಥ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ, ಇನ್ನುಳಿದಂತೆ ನಿತಿನ್ ಗಡ್ಕರಿ 10, ನಿರ್ಮಲಾ ಸೀತಾರಾಮನ್ ಒಂಬತ್ತು ಸೇರಿದಂತೆ ವಿವಿಧ ಕೇಂದ್ರ ಸಚಿವರು ವಿವಿಧ ಶೇಕಡವಾರು ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಪ್ರಮುಖವಾಗಿ ದೇಶದ ಪ್ರಧಾನಿ ಯಾರಾಗಬೇಕು ಎಂದು ಕೇಳಿದ ಪ್ರಶ್ನೆಗೆ ಶೇಕಡಾ 66 ರಷ್ಟು ಜನ ಮುಂದಿನ ಪ್ರಧಾನಿ ನರೇಂದ್ರ ಮೋದಿ ರವರೇ ಪ್ರಧಾನಿಯಾಗಬೇಕು ಎಂದರೇ ಕೇವಲ ಶೇಕಡಾ 8 ರಷ್ಟು ಜನ ಮಾತ್ರ ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ, ಇನ್ನುಳಿದಂತೆ ಸೋನಿಯಾ ಗಾಂಧಿ 5 ರಷ್ಟು ಮತಗಳನ್ನು ಪಡೆದಿದ್ದಾರೆ. ಕೇಂದ್ರ ಸಚಿವ ಅಮಿತ್ ಶೇಕಡ 4 ರಷ್ಟು, ಯೋಗಿ ಆದಿತ್ಯನಾಥ್ ಶೇಕಡಾ 3 ರಷ್ಟು ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ನಿತಿನ್ ಗಡ್ಕರಿ, ಮಮತಾ ಬ್ಯಾನರ್ಜಿ ಪ್ರಿಯಾಂಕ ಗಾಂಧಿ, ರಾಜನಾಥ್ ಸಿಂಗ್ ಅವರು ಕೆಲವು ಮತಗಳನ್ನು ಪಡೆದು ಕೊಂಡಿದ್ದಾರೆ. ಇನ್ನು ದೇಶದಲ್ಲಿಯೇ ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಯಾರು ಎಂಬ ಕೇಳಿದ ಪ್ರಶ್ನೆಗೆ ಜನರು ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದು, ಸತತ ಮೂರು ವರ್ಷಗಳಿಂದ ಯೋಗಿ ಆದಿತ್ಯನಾಥ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಸ್ಥಾನ ಪಡೆದು ಕೊಂಡಿದ್ದಾರೆ.