ಆತ್ಮ ನಿರ್ಭರ್ ಭಾರತದತ್ತ ಐತಿಹಾಸಿಕ ಹೆಜ್ಜೆ ! ಐತಿಹಾಸಿಕ ಆದೇಶ ಹೊರಡಿಸಿದ ರಕ್ಷಣಾ ಸಚಿವ !

ಆತ್ಮ ನಿರ್ಭರ್ ಭಾರತದತ್ತ ಐತಿಹಾಸಿಕ ಹೆಜ್ಜೆ ! ಐತಿಹಾಸಿಕ ಆದೇಶ ಹೊರಡಿಸಿದ ರಕ್ಷಣಾ ಸಚಿವ !

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಇತರ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಆತ್ಮ ನಿರ್ಭರ್ ಭಾರತ ಎಂಬ ಘೋಷಣೆಯ ಮೂಲಕ ಭಾರತದಲ್ಲಿಯೇ ವಸ್ತುಗಳನ್ನು ತಯಾರಿಸೋಣ ಒಮ್ಮೆಲೆ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಸಾಧ್ಯ ಇಲ್ಲದಿದ್ದರೂ ಕೂಡ ‌ದಿನೇ ದಿನೇ ಹಂತಹಂತವಾಗಿ ಇಲ್ಲಿಯ ವಸ್ತುಗಳನ್ನು ತಯಾರಿಸುತ್ತಾ, ಉದ್ಯೋಗ ಸೃಷ್ಟಿಸುತ್ತಾ, ಸ್ವದೇಶಿ ಭಾರತವನ್ನು ಕಟ್ಟೋಣ ಎಂಬ ಕೂಗುಗಳು ಹೆಚ್ಚಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಪ್ರಮುಖವಾಗಿ ಚೀನಾ ದೇಶದಿಂದ ಆಮದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಆಲೋಚನೆ ಮಾಡಿ ಘೋಷಿಸಿದ ಯೋಜನೆ ಇದೀಗ ಇತರ ದೇಶಗಳ ಆಮದನ್ನು ಕೂಡ ಕಡಿಮೆ ಮಾಡಬೇಕು ಎಂಬ ಹಾದಿಯಲ್ಲಿ ಮುನ್ನುಗ್ಗುತ್ತಿದೆ.‌ ಭಾರತವು ಇತರ ದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಸಾಮಾನ್ಯ ಆದರೆ ಪ್ರಮುಖವಾಗಿ ಭಾರತ ಆಮದು ಮಾಡಿಕೊಳ್ಳುವುದು ಮಿಲಿಟರಿ ಉಪಕರಣಗಳನ್ನು ಎಂದು ನಿಮಗೆಲ್ಲರಿಗೂ ತಿಳಿದಿದೆ.

ನಾವು ಇತರ ವಸ್ತುಗಳನ್ನು ಉತ್ಪಾದನೆ ಮಾಡುತ್ತಾ ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದರೆ ಖಂಡಿತಾ ಭಾರತಕ್ಕೆ ನಷ್ಟವೇ ಹೊರತು ಯಾವುದೇ ಲಾಭ ವಿರುವುದಿಲ್ಲ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಿಲಿಟರಿ ಉಪಕರಣಗಳನ್ನು ಪ್ರತಿಬಾರಿಯೂ ವಿದೇಶಗಳಿಂದ ತರಿಸಿಕೊಳ್ಳುವುದರಿಂದ ಇತರ ದೇಶಗಳ ಮೇಲೆ ಅವಲಂಬನೆ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ಇದೀಗ ರಕ್ಷಣಾ ಸಚಿವಾಲಯವು ಐತಿಹಾಸಿಕ ಘೋಷಣೆಯನ್ನು ಮಾಡಿದ್ದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಕುರಿತು ಅಧಿಕೃತ ಆದೇಶ ಹೊರಡಿಸಿರುವ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ರವರು, ಇನ್ನು ಮುಂದೆ ಭಾರತದಲ್ಲಿ ಅತ್ಯಾಧುನಿಕ ಮಿಲಿಟರಿ ಉಪಕರಣಗಳು, ಹೆಲಿಕ್ಯಾಪ್ಟರ್, ಸರಕು ಸಾಗಾಣಿಕ ವಿಮಾನಗಳು, ಸೇನೆಗೆ ಅತ್ಯಗತ್ಯವಾಗಿರುವ ಶಸ್ತ್ರಾಸ್ತ್ರಗಳು ಸೇರಿದಂತೆ ಒಟ್ಟಾರೆ 101 ಮಿಲಿಟರಿ ಉಪಕರಣಗಳನ್ನು ಭಾರತದಲ್ಲಿಯೇ ತಯಾರಿ ಮಾಡಲು ಉತ್ತೇಜನ ನೀಡಲಾಗುವುದು ಹಾಗೂ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಕನಿಷ್ಠ ನಾಲ್ಕು ಲಕ್ಷ ಕೋಟಿ ಬೆಲೆ ಬಾಳುವ ಮಿಲಿಟರಿ ಉಪಕರಣಗಳನ್ನು ನಾವು ಭಾರತದಲ್ಲಿಯೇ ತಯಾರು ಮಾಡಲು ಯೋಜನೆ ರೂಪಿಸಿದ್ದೇವೆ. ನೌಕಾಪಡೆಯಲ್ಲಿ ಬಳಸುವ 1.4 ಲಕ್ಷ ಕೋಟಿ ಮಿಲಿಟರಿ ಉಪಕರಣಗಳನ್ನು ಹಾಗೂ ಭೂ ಸೇನೆಯಲ್ಲಿ, ವಾಯುಪಡೆಯಲ್ಲಿ ಬಳಸುವ 1.3 ಲಕ್ಷ-ಕೋಟಿ ಮಿಲಿಟರಿ ಉಪಕರಣಗಳನ್ನು ಇನ್ನು ಮುಂದೆ ಭಾರತದಲ್ಲಿ ತಯಾರು ಮಾಡಲಾಗುತ್ತದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ. ಈ ಲಿಸ್ಟಿನಲ್ಲಿ ಇನ್ನೂ 101 ಉಪಕರಣಗಳು ಇದ್ದು, ಭಾರತದಲ್ಲಿ ಈಗಾಗಲೇ 5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕಾ ಕಾರ್ಯದಲ್ಲಿ ಶರವೇಗದಿಂದ ಮುನ್ನುಗ್ಗುತ್ತಿದೆ. ಭಾರತ ಹೇಗೆ ವಿಶ್ವಗುರು ಆಗಲಿದೆ ಎಂದು ಪ್ರಶ್ನೆ ಕೇಳುತ್ತಿದ್ದವರಿಗೆ, ಒಂದು ವೇಳೆ ಈ ಮೇಲಿನ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತ ವಿಶ್ವಗುರು ಆಗಿ ರಾರಾಜಿಸಲಿದೆ. ಆದರೆ ಗುರಿ ಮುಟ್ಟಿಸುವುದು ಇದೀಗ ಸರ್ಕಾರ ಮತ್ತು ಭಾರತೀಯರ ಕೈಯಲ್ಲಿ ಇದೆ.