ಕೊನೆಗೂ ನಿಟ್ಟುಸಿರು ಬಿಟ್ಟ ಆರ್ಸಿಬಿ ಅಭಿಮಾನಿಗಳು ! ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಐಪಿಎಲ್ ಟೂರ್ನಿಯು ಏಪ್ರಿಲ್ ತಿಂಗಳಿಂದ ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲ್ಪಟ್ಟ ಬಳಿಕ ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಅಧಿಕೃತವಾಗಿ ಆದೇಶ ಬರುವುದು ಮಾತ್ರ ಬಾಕಿ ಇದ್ದು ಈಗಾಗಲೇ ದಿನಾಂಕಗಳು ಕೂಡ ಘೋಷಣೆಯಾಗಿವೆ ಹಾಗೂ ಇದಕ್ಕಾಗಿ ಯುಎಇ ದೇಶದಲ್ಲಿ ಐಪಿಎಲ್ ಟೂರ್ನಿಗಾಗಿ ಭರದ ಸಿದ್ಧತೆ ನಡೆದಿವೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಯುಎಇ ದೇಶದಲ್ಲಿ ಶೇಕಡಾ 30 ರಿಂದ 50 ಆಸನಗಳನ್ನು ಭರ್ತಿ ಮಾಡುವ ಅವಕಾಶದ ಮೂಲಕ ಟೂರ್ನಿ ನಡೆಸಲು ಆಲೋಚನೆ ನಡೆಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಆದರೆ ಈ ಮಾಹಿತಿಗಳು ಹೊರಬಿದ್ದ ಕೆಲವೇ ಕೆಲವು ದಿನಗಳಲ್ಲಿ ಆರ್ಸಿಬಿ ತಂಡಕ್ಕೆ ಕಹಿ ಸುದ್ದಿ ಒಂದು ಕೇಳಿ ಬಂದಿತ್ತು.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಸಿಬಿ ತಂಡದ ಮೂರು ಪ್ರಮುಖ ಆಟಗಾರರು ಸೌತ್ ಆಫ್ರಿಕಾ ದೇಶದವರಾಗಿದ್ದಾರೆ. ಅದರಲ್ಲಿಯೂ ಆರ್ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ನ ಆಧಾರಸ್ತಂಭ ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ರವರು ಇಲ್ಲದೇ ತಂಡವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಎಬಿ ಡಿವಿಲಿಯರ್ಸ್ ರವರನ್ನು ಹೊರತು ಪಡಿಸಿದರೇ ಬಾರಿ ಭರವಸೆ ಮೂಡಿಸಿರುವ ಕ್ರಿಸ್ ಮೋರಿಸ್ ಹಾಗೂ ಡೇಲ್ ಸ್ಟೇನ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗಿರುವಾಗ ದಕ್ಷಿಣ ಆಫ್ರಿಕಾ ದೇಶದಲ್ಲಿ ಭಾರತ ದೇಶದಂತೆಯೇ ಕೊರೊನ ಕಾರಣದಿಂದಾಗಿ ಅಂತರರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಲಾಗಿದೆ. ಆದ ಕಾರಣ ಮುಂದಿನ ಆದೇಶದ ವರೆಗೂ ನಡೆಯುವ ಪಂದ್ಯಗಳಿಗೆ ಈ ಮೂವರು ಸೇರಿದಂತೆ ದಕ್ಷಿಣ ಆಫ್ರಿಕಾ ದೇಶದಿಂದ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಯಾವುದೇ ಆಟಗಾರರು ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿತ್ತು.

ಆರ್ಸಿಬಿ ತಂಡವು ಪ್ರಮುಖವಾದ ಮೂರು ಆಟಗಾರರು ಇಲ್ಲದೇ ಕಣಕ್ಕೆ ಇಳಿಯಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಈ ಎಲ್ಲ ಮಾತುಗಳಿಗೆ ಬ್ರೇಕ್ ಬಿದ್ದಿದ್ದು, ಫ್ರಾಂಚೈಸಿ ತಂಡಗಳು ದಕ್ಷಿಣ ಆಫ್ರಿಕಾ ದೇಶದಲ್ಲಿ ಅಂತರರಾಷ್ಟ್ರೀಯ ವಿಮಾನಗಳು ಇಲ್ಲದಿದ್ದರೇನಂತೆ ನಾವು ಖಾಸಗಿ ವಿಮಾನಗಳನ್ನು ಕಳುಹಿಸಿಕೊಡಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದು ಆರ್ಸಿಬಿ ತಂಡಕ್ಕೆ ಮೂರು ಆಟಗಾರರು ಸೇರಿಕೊಳ್ಳುವುದು ಖಚಿತವಾಗಿದೆ. ಸೌತ್ ಆಫ್ರಿಕಾ ದೇಶ ಅನುಮತಿ ನೀಡಿದಲ್ಲಿ ಖಾಸಗಿ ವಿಮಾನಗಳು ಸೌತ್ ಆಫ್ರಿಕಾ ದೇಶಕ್ಕೆ ತಲುಪಲಿದ್ದು, ಪ್ರತಿಯೊಬ್ಬ ಆಟಗಾರರಿಗೂ ವಿಶೇಷ ಪ್ರತ್ಯೇಕ ವಿಮಾನಗಳನ್ನು ಕಳುಹಿಸಿ ಕೊಡಲು ಕೂಡ ಸಿದ್ಧರಿರುವುದಾಗಿ ಫ್ರಾಂಚೈಸಿಗಳು ಹೇಳಿಕೊಂಡಿವೆ. ಇದರ ನಡುವೆ ಎಲ್ಲರಿಗೂ ಸೇರಿ ಒಂದೇ ಖಾಸಗಿ ವಿಮಾನ ಕಳುಹಿಸಿದರೂ ಸಾಕು ಯಾಕೆಂದರೆ ಸೌತ್ ಆಫ್ರಿಕಾ ದೇಶದಲ್ಲಿ ಆಟಗಾರರು ಸುರಕ್ಷಿತವಾಗಿರುತ್ತಾರೆ ಎಂಬ ನಂಬಿಕೆ ಇದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.

Post Author: Ravi Yadav