ಭೂಮಿ ಪೂಜೆಗೆ ತೆರಳುವ ಮುನ್ನ ಮೋದಿರವರು ಅನುಮತಿ ಪಡೆಯಲು ತೆರಳುತ್ತಿರುವ ವಿಶೇಷ ಸ್ಥಳ ಹಾಗೂ ಇಲ್ಲಿನ ಮಹತ್ವವೇನು ಗೊತ್ತೇ?

ಭೂಮಿ ಪೂಜೆಗೆ ತೆರಳುವ ಮುನ್ನ ಮೋದಿರವರು ರಾಮ ಬಂಟನ ಅನುಮತಿ ಪಡೆಯಲು ತೆರಳುತ್ತಿರುವ ವಿಶೇಷ ಸ್ಥಳ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕೊನೆಗೂ ಕೋಟ್ಯಂತರ ಭಾರತೀಯರ ಕನಸು ಈಡೇರುತ್ತಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಲಿದೆ. ಆಗಸ್ಟ್ 5 ರಂದು ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ರವರು ಭಾಗಿಯಾಗಲಿದ್ದು, ಇಡೀ ಅಯೋಧ್ಯೆ ನವ ವಧುವಿನಂತೆ ಕಂಗೊಳಿಸುತ್ತಿದೆ. ಈಗಾಗಲೇ ಅಯೋಧ್ಯೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ನರೇಂದ್ರ ಮೋದಿ ರವರು ಹಲವಾರು ವರ್ಷಗಳ ನಂತರ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ, ಆದರೆ ಅಯೋಧ್ಯೆಗೆ ಭೇಟಿಗೆ ಮುನ್ನ ಶ್ರೀ ರಾಮನ ರಾಮಾಯಣದ ಕಾಲದ ಆಚಾರದಂತೆ ರಾಮ ಬಂಟ ಹನುಮಂತನ ಅನುಮತಿ ಪಡೆದು ಕೊಂಡು ಅಯೋಧ್ಯೆಗೆ ಕಾಲಿಡಲಿದ್ದಾರೆ.

ಆ ಪ್ರದೇಶದ ಮಹತ್ವ ಹಾಗೂ ಯಾವ ಕಾರಣಕ್ಕೆ ನರೇಂದ್ರ ಮೋದಿ ರವರಾಗಲಿ ಅಥವಾ ಇತರರು ಯಾರೇ ಆಗಲಿ ಅಯೋಧ್ಯೆಗೆ ಭೇಟಿ ನೀಡುವ ಮುನ್ನ ಈ ಪ್ರದೇಶಕ್ಕೆ ತೆರಳಬೇಕು ಎಂಬ ನಂಬಿಕೆ ಇದೆ ಎಂಬುದರ ಬಗ್ಗೆ ನಾವು ಇಂದು ತಿಳಿದು ಕೊಳ್ಳೋಣ.‌ ಶ್ರೀ ರಾಮನು ಲಂಕೆಯಲ್ಲಿ ರಾವಣನನ್ನು ಸಂಹ-ರಿಸಿ, ವಿಜಯ ಸಾಧಿಸಿ, ಧರ್ಮ ಸ್ಥಾಪಿಸಿದ ಮೇಲೆ ತನ್ನ ರಾಜ್ಯವಾದ ಅಯೋಧ್ಯೆಗೆ ವಾಪಸಾಗುತ್ತಾರೆ. ವಾಪಸ್ಸಾಗುವ ಸಂದರ್ಭದಲ್ಲಿ ಶ್ರೀ ರಾಮನು ಅಯೋಧ್ಯೆ ಪ್ರವೇಶಿಸುವಾಗ ಹನುಮಂತನಿಗೆ ಈ ಪ್ರದೇಶದಲ್ಲಿ ನೆಲೆಸಲು ಆದೇಶ ನೀಡಿದನು. ಅದರಂತೆಯೇ ಹನುಮಂತನು ಹನುಮಾನ್ ಗರ್ಹಿ ಅಥವಾ ಹನುಮಾನ್ ಕೋಟೆ ಎಂಬ ದೇವಾಲಯದಲ್ಲಿ ವಾಸವಾಗಿದ್ದಾನೆ ಎಂಬ ಪ್ರತೀತಿ ಇದೆ.

ಯಾರೇ ಆಗಲಿ ಶ್ರೀ ರಾಮನ ಅಯೋಧ್ಯೆಗೆ ಭೇಟಿ ನೀಡಬೇಕು ಎಂದರೇ ಹನುಮನ ಅನುಮತಿ ಪಡೆದು ಕೊಂಡು ಭೇಟಿಯಾಗಬೇಕು, ಹನುಮನು ಅಯೋಧ್ಯೆಯನ್ನು ಕಾಯುತ್ತಿರುತ್ತಾನೆ. ಆದ ಕಾರಣ ರಾಮ ಬಂಟ ಹನುಮನ ಅನುಮತಿಯಿಲ್ಲದೆ ಯಾರೂ ಅಯೋಧ್ಯೆ ಪ್ರವೇಶಿಸಬಾರದು ಎಂಬ ಪ್ರತೀತಿ ಇದೆ. ಈ ಪ್ರದೇಶದಲ್ಲಿ ಹನುಮಾನ್ ನೆಲೆಸಿ ರಾಮ್‌ಕೋಟ್ ಅಥವಾ ರಾಮನ ಜನ್ಮಸ್ಥಳವನ್ನು ಕಾಯುತ್ತಿರುತ್ತಾರೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕಾಗಿ ನರೇಂದ್ರ ಮೋದಿರವರು ಕೂಡ ಅಯೋಧ್ಯೆಗೆ ಭೇಟಿ ನೀಡುವ ಮುನ್ನ ಆಚಾರದಂತೆ ಹನುಮಾನ್ ಅನುಮತಿ ಪಡೆಯಲು ಈ ದೇವಾಲಯಕ್ಕೆ ತೆರಳಲಿದ್ದಾರೆ.