ಸ್ವದೇಶಿ ಭಾರತಕ್ಕೆ ಆನೆಬಲ ! ಚೀನಾಗೆ ಮರ್ಮಾಘಾತ ! ಭರ್ಜರಿ ಗೆಲುವು ಸಾಧಿಸುತ್ತಿದೆ ಭಾರತ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ಸ್ವದೇಶಿ ಭಾರತಕ್ಕೆ ಆನೆಬಲ ! ಚೀನಾಗೆ ಮರ್ಮಾಘಾತ ! ಭರ್ಜರಿ ಗೆಲುವು ಸಾಧಿಸುತ್ತಿದೆ ಭಾರತ ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶದಿಂದ ಹಲವಾರು ಕಂಪನಿಗಳು ಇತರ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ. ವಿವಿಧ ದೇಶಗಳು ಒಟ್ಟಾಗಿ ಕೈಜೋಡಿಸಿ ಒಗ್ಗಟ್ಟು ತೋರಿಸುತ್ತೇವೆ, ಎಲ್ಲರೂ ಸೇರಿಕೊಂಡು ಚೀನಾ ದೇಶಕ್ಕೆ ಬುದ್ಧಿ ಕಲಿಸಿದ ತೀರುತ್ತೇವೆ ಎಂದು ಪಣತೊಟ್ಟಿದ್ದಾರೆ. ವಿಶ್ವದ ಬಲಕ್ಕೆ ಆರ್ಥಿಕತೆ ಗಳನ್ನು ಹೊಂದಿರುವ ಜಪಾನ್, ದಕ್ಷಿಣ ಕೊರಿಯಾ, ಅಮೇರಿಕಾ, ಫ್ರಾನ್ಸ್ ಸೇರಿದಂತೆ ಭಾರತ ದೇಶವು ಕೂಡ ತನ್ನ ಕಂಪನಿಗಳನ್ನು ಇತರ ದೇಶಗಳಿಗೆ ಸ್ಥಳಾಂತರಿಸಲು ಆದೇಶ ನೀಡಿದೆ ಹಾಗೂ ಅದಕ್ಕಾಗಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಿವೆ. ಭಾರತ ದೇಶವು ಈ ಆದೇಶದ ಜೊತೆಗೆ ಸ್ವದೇಶಿ ಭಾರತ ಎಂಬ ಆಲೋಚನೆ ನಡೆಸಿ ಚೀನಾ ದೇಶದಿಂದ ಹೊರ ಬರುತ್ತಿರುವ ಇನ್ನಿತರ ದೇಶಗಳ ಕಂಪನಿಗಳನ್ನು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸಲು ಉತ್ತೇಜನ ನೀಡಲು ಆರಂಭಿಸಿದೆ. ಇದರಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಇಲ್ಲಿನ ಸಾಮಾನ್ಯ ಜನರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ, ಸ್ವದೇಶಿ ಭಾರತಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ, ಚೀನಾ ದೇಶದಲ್ಲಿ ನಿರ್ಮಿತಗೊಂಡ ವಸ್ತುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡೋಣ ಎಂದು ಪಣತೊಟ್ಟಿದ್ದಾರೆ ಹಾಗೂ ಅದರ ಫಲಿತಾಂಶ ಈಗಾಗಲೇ ಹೊರಬಿದ್ದಿದೆ. ಚೀನಾ ದೇಶ ಕಂಡು ಕೇಳರಿಯದ ರೀತಿಯಲ್ಲಿ ಸಾವಿರಾರು ಕೋಟಿಗಳಷ್ಟು ನಷ್ಟ ಕಾಣುತ್ತಿದೆ. ಇದೀಗ ಇದರ ಜೊತೆಗೆ ವಿಶ್ವ ದೇಶಿ ಭಾರತ ಅಭಿಯಾನಕ್ಕೆ ಆನೆ ಬಲ ಬಂದಂತಾಗಿದ್ದು ಬರೋಬ್ಬರಿ ಒಟ್ಟು 22 ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಭಾರತದಲ್ಲಿ ಸ್ಥಾಪಿಸಲು ಅರ್ಜಿ ಸಲ್ಲಿಸಿವೆ. ಈ ಸಂಪೂರ್ಣ ಕಂಪನಿಗಳ ಮೌಲ್ಯ ಕಂಡರೇ ಖಂಡಿತ ಸ್ವದೇಶಿ ಭಾರತಕ್ಕೇ ಆನೆ ಬಲ ಬಂದಿದೆ ಎನ್ನಲೇ ಬೇಕಾಗಿದೆ.

ಯಾಕೆಂದರೆ ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿರುವ 22 ಕಂಪನಿಗಳಲ್ಲಿ 12 ಕಂಪನಿಗಳು ಮೊಬೈಲ್ ಕಂಪನಿಗಳಾಗಿವೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ಒಟ್ಟಾರೆಯಾಗಿ ಈ ಮೊಬೈಲ್ ಕಂಪನಿಗಳು ಬರೋಬ್ಬರಿ 11.5 ಲಕ್ಷ ಕೋಟಿ ಬೆಲೆ ಬಾಳುವ ಮೊಬೈಲ್ ಫೋನ್ಗಳನ್ನು ತಯಾರಿಸಲಿವೆ. ಇದರಲ್ಲಿ ಏಳು ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುವುದು ಎಂಬುದು ತಿಳಿದು ಬಂದಿದೆ. ಈ ಕಂಪನಿಗಳು ನೇರವಾಗಿ 3 ಲಕ್ಷ ಉದ್ಯೋಗ ಹಾಗೂ ಪರೋಕ್ಷವಾಗಿ 9,00,000 ಉದ್ಯೋಗಗಳನ್ನು ಸೃಷ್ಟಿಸಲಿವೆ. ಉತ್ಪಾದನಾ ಘಟಕಗಳನ್ನು ಪ್ರೋತ್ಸಾಹಿಸಲು ಬರೋಬ್ಬರಿ 41,000 ಕೋಟಿ ಬಜೆಟ್ ಮೀಸಲಿರಿಸಲಾಗಿದೆ ಹಾಗೂ ಕೆಲವೊಂದು ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ವಿಶ್ವದ ಇತರ ಕಂಪನಿಗಳನ್ನು ಆಹ್ವಾನಿಸುವ ಕೆಲಸದಲ್ಲಿ ಭಾರತ ತೊಡಗಿಕೊಂಡಿರುವುದು ನಿಜಕ್ಕೂ ಒಳ್ಳೆಯ ಸಂಗತಿಯಾಗಿದೆ.