ನಾಗ ಪಂಚಮಿಯ ವಿಶೇಷ ಶ್ರಾವಣ ಶನಿವಾರದಂದು ಶನಿಯ ಕೃಪೆಗೆ ಪಾತ್ರರಾಗಲು ಈ ಸುಲಭ ಕೆಲಸಗಳನ್ನು ಮಾಡಿ

ನಾಗ ಪಂಚಮಿಯ ವಿಶೇಷ ಶ್ರಾವಣ ಶನಿವಾರದಂದು ಶನಿಯ ಕೃಪೆಗೆ ಪಾತ್ರರಾಗಲು ಈ ಸುಲಭ ಕೆಲಸಗಳನ್ನು ಮಾಡಿ

ನಮಸ್ಕಾರ ಸ್ನೇಹಿತರೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನಮಾನಗಳ ಆಧಾರದ ಮೇಲೆ ಪ್ರತಿಯೊಂದು ರಾಶಿ ಫಲಗಳ ಮೇಲೆ ಶನಿ ದೇವರ ಪ್ರಭಾವ ಇದ್ದೇ ಇರುತ್ತದೆ. ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ತಾವು ಮಾಡಿದ ಕರ್ಮ ಫಲಗಳನ್ನು ಶನಿ ದೇವನು ತನ್ನ ದೃಷ್ಟಿ ಹರಿಸುವ ಮೂಲಕ ನೀಡುತ್ತಾನೆ ಎಂಬ ನಂಬಿಕೆ ಇದೆ. ಇದೀಗ ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು ಶನಿಯನ್ನು ಮೆಚ್ಚಿಸಲು ಶ್ರಾವಣ ತಿಂಗಳು ಬಹಳ ಉತ್ತಮವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಲ್ಲಿಯೂ ವಿಶೇಷವಾಗಿ ನಾಗ ಪಂಚಮಿಯು ಶ್ರಾವಣ ಶನಿವಾರದ ಸಮಯದಲ್ಲಿ ಆಗಮಿಸಿರುವುದು ಬಹಳ ಒಳ್ಳೆಯದಾಗಿದೆ‌. ಶನಿವಾರ ಶನಿಯನ್ನು ಪೂಜಿಸಿದರೆ ಶನಿಯ ಪ್ರಭಾವದಿಂದ ಕಡಿಮೆ ಮಾಡಿಕೊಳ್ಳಬಹುದು ಅಥವಾ ತಪ್ಪಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಇಂತಹ ಸಂದರ್ಭದಲ್ಲಿ ಶ್ರಾವಣ ಶನಿವಾರದ ದಿನ, ನಾಗ ಪಂಚಮಿ ಹಬ್ಬ ಬಂದಿರುವ ಕಾರಣ ಈ ದಿನ ಬಹಳ ವಿಶೇಷ ಪಡೆದು ಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮಕರ ರಾಶಿಯಲ್ಲಿ ಶನಿ ದೇವನು ಸಂಚರಿಸುತ್ತಿದ್ದಾನೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನ ಮಕರ ಪ್ರವೇಶಿಸಿದ ಕೂಡಲೇ ಕುಂಭ ರಾಶಿಯವರ ಮೇಲೆ ಮೊದಲನೇ ಹಂತದ ದೃಷ್ಟಿ ಹರಿಸುತ್ತಾನೆ ಎನ್ನಲಾಗಿದೆ. ಇನ್ನು ಧನು ರಾಶಿಯವರ ಮೇಲೆ ಕೂಡ ಶನಿ ದೇವನ ದೃಷ್ಟಿ ಹರಿಯುತ್ತಿದ್ದು, ತುಲಾ ಹಾಗೂ ವೃಶ್ಚಿಕ ರಾಶಿ ಯವರು ಕೂಡ ಶನಿ ದೇವನ ಪ್ರಭಾವಕ್ಕೆ ಒಳಗಾಗಿದ್ದಾರೆ. ಈ 5 ರಾಶಿಗಳ ಜೊತೆ ಇನ್ನಿತರ ರಾಶಿಗಳ ಜನರು ಕೂಡ ಸಾಧ್ಯವಾದರೇ ನಾಗ ಪಂಚಮಿಯ ದಿನ ಅಥವಾ ಇನ್ನಿತರ ಶ್ರಾವಣ ಶನಿವಾರ ಗಳಲ್ಲಿ ಈ ರೀತಿಯ ಕಾರ್ಯಗಳನ್ನು ಮಾಡುವ ಮೂಲಕ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಉತ್ತಮ ಹಾದಿಯಲ್ಲಿ ಸಾಗಬಹುದು ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ.

ಶ್ರಾವಣ ತಿಂಗಳಿನಲ್ಲಿ ಶನಿವಾರ ಗಳು ಬಹಳ ವಿಶೇಷವಾಗಿದ್ದು, ಸಾಧ್ಯವಾದಷ್ಟು ಈ ಕೆಳಗಿನ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಕಾರ್ಯಗಳನ್ನು ನಡೆಸಿ. ಮೊದಲನೆಯದಾಗಿ ಶನಿ ದೇವನು ಅರಳಿ ಮರದಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ, ಆದ್ದರಿಂದ ಸಾಧ್ಯವಾದರೇ ನಾಗ ಪಂಚಮಿಯ ದಿನ ಅಥವಾ ಇನ್ನಿತರ ಯಾವುದಾದರೂ ಶ್ರಾವಣ ಶನಿವಾರದ ದಿನ ದಂದು ಸಕ್ಕರೆ ಮತ್ತು ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಅರಳಿ ಮರದ ಬೇರಿನ ಬಳಿ ಇಟ್ಟು ಪೂಜೆ ಮಾಡಿ ಹಾಗೂ ಮರದ ಸುತ್ತ ಪ್ರದಕ್ಷಿಣೆ ನಡೆಸಿ ಶನಿ ದೇವನನ್ನು ಪ್ರಾರ್ಥಿಸಿ. ಇದರಿಂದ ಶನಿಯ ದೋಷವು ತೆಗೆದು ಹಾಕಲಾಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಶಿವನನ್ನು ಆರಾಧಿಸುವುದರ ಮೂಲಕ ಶನಿ ದೇವನು ಸಂತೋಷಗೊಳ್ಳುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ಶ್ರಾವಣ ಶನಿವಾರದಂದು ಶಿವನ ಪ್ರಾರ್ಥನೆ ಮಾಡಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದರಿಂದ ಶನಿ ದೋಷ ಶೀಘ್ರದಲ್ಲಿಯೇ ದೂರವಾಗಲಿದೆ. ಅಷ್ಟೇ ಅಲ್ಲದೆ ಸಾಧ್ಯವಾದರೇ ಕಪ್ಪು ಬಟ್ಟೆ, ಕಪ್ಪುಎಳ್ಳು, ಕಬ್ಬಿಣದ ವಸ್ತುಗಳು, ಕಂಬಳಿ ಇತ್ಯಾದಿಗಳನ್ನು ಶನಿವಾರ ದಾನ ಮಾಡಿ. ಶ್ರಾವಣ ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಸಾಸಿವೆ ಎಣ್ಣೆಯನ್ನು ಅರ್ಪಿಸಿ ಕಪ್ಪು ಎಳ್ಳಿನಿಂದ ಪೂಜೆ ಮಾಡಿ.

ಇನ್ನು ಮೂರನೆಯದಾಗಿ ಶನಿ ದೇವನು ಪುರಾಣದಲ್ಲಿ ದಶರಥ ಮಹಾರಾಜನಿಗೆ ವರ ನೀಡಿದ್ದು ಮಹಾರಾಜ ದಶರಥ ಬರೆದಿರುವ ದಶರಥ ಸ್ತೋತ್ರವನ್ನು ಪಠಿಸುವ ಮೂಲಕ ಶನಿ ದೇವನನ್ನು ಮೆಚ್ಚಿಸಬಹುದಾಗಿದೆ. ಈ ಎಲ್ಲಾ ಕಾರ್ಯಗಳ ಜೊತೆ ಪ್ರಮುಖವಾಗಿ ಕೆಟ್ಟ ಪದಗಳನ್ನು ಬಳಸಬೇಡಿ ಹಾಗೂ ಕೆಟ್ಟ ಅಲೋಚನೆಯನ್ನು ಮಾಡಬೇಡಿ. ಎಲ್ಲರಿಗೂ ಒಳ್ಳೆಯದನ್ನು ಮಾಡುವ ಆಲೋಚನೆ ನಿಮ್ಮದಾಗಿರಲಿ ಹಾಗೂ ಅಗತ್ಯವಿರುವ ಜನರಿಗೆ ಸಹಾಯ ಹಸ್ತ ಚಾಚಿ. ಆಲ್ಕೋಹಾಲ್ ಹಾಗೂ ಇನ್ನಿತರ ಕೆಟ್ಟ ಚಟಗಳಿಂದ ದೂರವಿರಿ. ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡಬೇಡಿ, ಮಹಿಳೆಯರನ್ನು ಗೌರವಿಸಿ. ಸಂಜೆಯ ಹೊತ್ತಿನಲ್ಲಿ ಕಪ್ಪು ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚುವ ಮೂಲಕ ಶನಿ ದೋಷದಿಂದ ಮುಕ್ತರಾಗಿ.