ವಿಶೇಷ ಉಡುಗೊರೆಯ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಹೊತ್ತು ಕೊಂಡು ಕೋರೋನ ಸಂದರ್ಭದಲ್ಲಿ ಕೈಜೋಡಿಸಿದ ಇಸ್ರೇಲ್ ! ಏನು ಗೊತ್ತಾ?

ವಿಶೇಷ ಉಡುಗೊರೆಯ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಹೊತ್ತು ಕೊಂಡು ಕೋರೋನ ಸಂದರ್ಭದಲ್ಲಿ ಕೈಜೋಡಿಸಿದ ಇಸ್ರೇಲ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶದಲ್ಲಿ ದಿನೇ ದಿನೇ ಕೊರೋನ ಸಂಖ್ಯೆಗಳು ಹೆಚ್ಚಾಗುತ್ತಿವೆ. ಆದರೆ ಗುಣಮುಖರಾಗುತ್ತಿರುವ ಸಂಖ್ಯೆಗಳು ಕೂಡ ಹೆಚ್ಚಾಗುತ್ತಿದ್ದು ತುಸು ನೆಮ್ಮದಿ ನೀಡಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳು ಕೊರೋನಾ ತಡೆಯಲು ವಿಫಲವಾಗಿರುವ ಸಂದರ್ಭದಲ್ಲಿ 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶ ‌ಬಹಳ ಉತ್ತಮವಾಗಿ ಕೋರೋನ ಸೋಂಕನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇತರ ಕೆಲವು ದೇಶಗಳಿಗೆ ಹೋಲಿಸಿದರೇ ಭಾರತದಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇಡೀ ವಿಶ್ವದಲ್ಲಿ ಭಾರತದ ಅತಿ ಹೆಚ್ಚು ಕೋವಿಡ್ ಟೆಸ್ಟ್ ಮಾಡಿದ ದೇಶಗಳಲ್ಲಿ ಎರಡನೇ ಸ್ಥಾನ ಪಡೆದು ಕೊಂಡಿದೆ. ಅಮೇರಿಕ ದೇಶ ಅತಿ ಹೆಚ್ಚು ಟೆಸ್ಟ್ ಮಾಡಿದ ಮೊದಲನೇ ಸ್ಥಾನದಲ್ಲಿ ಇದೆ.

ಆದರೆ ನಾವು ಎಷ್ಟೇ ಪರೀಕ್ಷೆಗಳನ್ನು ನಡೆಸುತ್ತಿದ್ದರೂ ಕೂಡ ಭಾರತದಲ್ಲಿ ವೇಗವಾಗಿ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೌದು, ಹಲವಾರು ರಾಜ್ಯಗಳಲ್ಲಿ ಸೋಂಕಿತರ ಕೋವಿಡ್ ಟೆಸ್ಟ್ ವರದಿಯ ಫಲಿತಾಂಶ ಪಡೆಯಲು ಈಗಲೂ ಕೂಡ ಮೂರರಿಂದ ನಾಲ್ಕು ದಿನಗಳವರೆಗೆ ಕಾಯಲೇಬೇಕು ಹಾಗೂ ಇದು ಕನಿಷ್ಠ ನಿಗದಿಪಡಿಸಿದ ಸಮಯ. ಇವುಗಳಿಗೆ ಪ್ರಮುಖ ಕಾರಣವೇನೆಂದರೆ ಮೊದಲನೆಯದಾಗಿ ಹೆಚ್ಚುಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿರುವುದು, ಎರಡನೇಯದಾಗಿ ಭಾರತದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಿಮಿಷಗಳಲ್ಲಿ ನಡೆಸ ಬಹುದಾದ ಅತ್ಯಾಧುನಿಕ ಸಾಧನಗಳು ಆವಿಷ್ಕರಣೆ ಮಾಡಲಾಗಿಲ್ಲ, ಮಾಡಿದ್ದರೂ ಸಾಧನಗಳು ಇನ್ನು ಪ್ರಯೋಗದ ಹಂತಗಳಲ್ಲಿ ಮಾತ್ರ ಇವೆ. ಆದ ಕಾರಣ ಈಗಲೂ ಕೂಡ ಫಲಿತಾಂಶಕ್ಕೆ ದಿನಗಳ ಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಆದರೆ ತುಸು ನೆಮ್ಮದಿ ನೀಡುವ ಸುದ್ದಿಯೇನೆಂದರೆ ಪರೀಕ್ಷೆ ನಡೆಸಲು ಕನಿಷ್ಠ ಮೂರ್ನಾಲ್ಕು ದಿನಗಳು ತೆಗೆದುಕೊಂಡರೂ ಕೂಡ ಭಾರತದಲ್ಲಿ ಸೋಂಕು ನಿಯಂತ್ರಣದಲ್ಲಿದೆ.

ಒಂದು ವೇಳೆ ನಾವು ಈ ಪರೀಕ್ಷಾ ದಿನಗಳನ್ನು ಕಡಿಮೆ ಮಾಡಿದಲ್ಲಿ ಮತ್ತಷ್ಟು ವೇಗವಾಗಿ ಸೋಂಕಿತರನ್ನು ಪತ್ತೆ ಹಚ್ಚುವ ಮೂಲಕ ಸಂಪೂರ್ಣ ಕಡಿವಾಣ ಹಾಕಲು ಬಹಳ ಉಪಯುಕ್ತವಾಗಲಿದೆ. ಈ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇಸ್ರೇಲ್ ದೇಶದಿಂದ ಮಹತ್ವದ ಸುದ್ದಿ ಹೊರಬಂದಿದ್ದು, ಭಾರತ ದೇಶವು ಕಳೆದ ಕೆಲವು ದಿನಗಳ ಹಿಂದೆ ಅಂದರೇ ಕೊರೊನಾ ಸೋಂಕಿನ ಆರಂಭಿಕ ದಿನಗಳಲ್ಲಿ ವೈದ್ಯಕೀಯ ಉಪಕರಣಗಳ ರಫ್ತಿನ ಮೇಲೆ ವಿಧಿಸಿದ್ದ ಕಡಿವಾಣ ಗಳನ್ನು ತೆಗೆದುಹಾಕಿ, ಇಸ್ರೇಲ್ ದೇಶಕ್ಕೆ ಮಾಸ್ಕ್, ಮಾತ್ರೆಗಳು ಸೇರಿದಂತೆ ಇತರ ವಿವಿಧ ವೈದ್ಯಕೀಯ ಉಪಕರಣಗಳನ್ನು ತಲುಪಿಸಿದ ಕಾರಣಕ್ಕಾಗಿ ವಿಶೇಷ ವಂದನೆಗಳನ್ನು ಅರ್ಪಿಸುವ ಸಲುವಾಗಿ ಅತ್ಯಾಧುನಿಕ ಮೆಕಾನಿಕಲ್ ವೆಂಟಿಲೇಟರ್ ಗಳನ್ನು ಭಾರತ ದೇಶಕ್ಕೆ ಉಡುಗೊರೆಯಾಗಿ ಹೊತ್ತುಕೊಂಡು ತನ್ನದೇ ಆದ ವಿಜ್ಞಾನಿಗಳ ತಂಡವನ್ನು ಕಳುಹಿಸಿಕೊಡಲು ನಿರ್ಧಾರ ಮಾಡಿದ್ದು ಕೆಲವೇ ಕೆಲವು ಸೆಕೆಂಡುಗಳಲ್ಲಿ ಕೋವಿಡ್ ಫಲಿತಾಂಶ ನೀಡಬಹುದಾದಂತಹ ಹಲವಾರು ಸಲಕರಣೆಗಳ ಜೊತೆಗೆ ವಿಜ್ಞಾನಿಗಳ ತಂಡ ಭಾರತಕ್ಕೆ ಕಾಲಿಡಲಿದೆ ಹಾಗೂ ಭಾರತೀಯ ವಿಜ್ಞಾನಿಗಳ ಜೊತೆ ಕೆಲಸ ಮಾಡಲಿದೆ.

ಈ ಪರೀಕ್ಷಾ ಕಿಟ್ಗಳು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗದ ಕಾರಣ ಭಾರತದಲ್ಲಿ ಇದೀಗ ಅನುಸರಿಸುತ್ತಿರುವ ಪರೀಕ್ಷಾ ವಿಧಾನವನ್ನು ಮುಂದುವರಿಸಿ ಅದೇ ಸಮಯದಲ್ಲಿ ಅದೇ ವ್ಯಕ್ತಿಯ ಸ್ವಾಬ್ ಗಳನ್ನು ಬಳಸಿಕೊಂಡು ಪರೀಕ್ಷಾ ಕಿಟ್ ಗಳ ಟೆಸ್ಟಿಂಗ್ ನಡೆಸಲಾಗುತ್ತದೆ, ಅದೇ ರೀತಿ ಭಾರತದಲ್ಲಿಯೂ ತಯಾರಿ ಮಾಡಿರುವ ಟೆಸ್ಟಿಂಗ್ ಕಿಟ್ ಗಳ ಪ್ರಯೋಗವು ನಡೆಯಲಿದೆ. ಒಂದು ವೇಳೆ ಪರೀಕ್ಷಾ ಕಿಟ್ ಗಳು ಯಶಸ್ವಿಯಾಗಿ ಸೋಂಕನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರೇ ಭಾರತದಲ್ಲಿ ಸೋಂಕು ಪರೀಕ್ಷೆಯ ಸಮಯ ಕಡಿಮೆಯಾಗಲಿದ್ದು ಇದರಿಂದ ಸೋಂಕು ಹರಡುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ. ಇನ್ನು ಇಸ್ರೇಲ್ ವಿಜ್ಞಾನಿಗಳು ಧ್ವನಿಯಿಂದ, ವ್ಯಕ್ತಿಯ ಉಸಿರಿನಿಂದ, ದೇಹದ ತಾಪಮಾನದಿಂದ ಕೊರೊನ ಪತ್ತೆ ಮಾಡಬಹುದಾದ ವಿವಿಧ ರೀತಿಯ ಕಿಟ್ ಗಳನ್ನು ತೆಗೆದುಕೊಂಡು ಭಾರತಕ್ಕೆ ಬಂದಿಳಿಯಲಿದ್ದಾರೆ. ಒಂದು ವೇಳೆ ಈ ಪ್ರಯೋಗಗಳು ಯಶಸ್ವಿಯಾದರೇ, ಭಾರತದಲ್ಲಿ ಸೋಂಕಿತರ ವರದಿ ಪಡೆಯಲು ಕೇವಲ ಸೆಕೆಂಡುಗಳು ಕಾಯಬೇಕಾಗುತ್ತದೆಯಷ್ಟೆ.