ಕೋಲು ತಿರುಗಿಸಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯನ್ನು ಕಂಡು ಯಾರು ಆಲೋಚನೆ ಮಾಡದ ರೀತಿಯಲ್ಲಿ ಆಲೋಚಿಸಿದ ಸೋನು ಸೂದ್ ! ಮಾಡಿದ್ದೇನು ಗೊತ್ತಾ?

ಕೋಲು ತಿರುಗಿಸಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯನ್ನು ಕಂಡು ಯಾರು ಆಲೋಚನೆ ಮಾಡದ ರೀತಿಯಲ್ಲಿ ಆಲೋಚಿಸಿದ ಸೋನು ಸೂದ್ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಂಬತ್ತಕ್ಕೂ ಹೆಚ್ಚು ವಯಸ್ಸಾದ (85 ಎಂದು ಇದೀಗ ತಿಳಿದು ಬಂದಿದೆ) ಅಜ್ಜಿಯೊಬ್ಬರು ಕೋಲುಗಳನ್ನು ಎರಡು ಕೈಯಲ್ಲಿ ಸರಾಗವಾಗಿ ತಿರುಗಿಸುತ್ತಾ ನಡು ರಸ್ತೆಯಲ್ಲಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳಲು ಜನರ ಬಳಿ ಬೇಡಿ ಕೊಳ್ಳುತ್ತಿದ್ದರು. ಈ ವಿಡಿಯೋ ಅನ್ನು ರೆಕಾರ್ಡ್ ಮಾಡಿ ನೆಟ್ಟಿಗರೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡ ಬಳಿಕ ಹಲವಾರು ಜನ ಇವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ ನಾವು ಹಣವನ್ನು ನೀಡುತ್ತೇವೆ ಎಂದಿದ್ದರು. ಇನ್ನೂ ಕೆಲವು ನ್ಯೂಸ್ ಚಾನೆಲ್ಗಳ ರಿಪೋರ್ಟರ್ ಗಳು ಇವರನ್ನು ಇಂಟರ್ವ್ಯೂ ಮಾಡುವ ಮೂಲಕ ಮತ್ತಷ್ಟು ಟಿಆರ್ಪಿ ಬೆಳೆಸಿಕೊಳ್ಳುವ ಹಾದಿಯಲ್ಲಿ ಇವರನ್ನು ಹುಡುಕ ತೊಡಗಿದರು.

ಬಾರಿ ವೈರಲ್ ಆದ ಈ ವಿಡಿಯೋ ನೋಡಿದ ಬಹುತೇಕರು ಇವರಿಗೆ ಹಣ ನೀಡುತ್ತೇವೆ ಈ ಅಜ್ಜಿಯ ಮಾಹಿತಿ ನೀಡಿ, ಇವರನ್ನು ದಯವಿಟ್ಟು ಯಾರಾದರೂ ವೃದ್ಧಾಶ್ರಮಗಳಿಗೆ ಸೇರಿಸಿ ಎಂದು ಕಾಮೆಂಟ್ ಮಾಡಿದ್ದರು. ಈ ಅಜ್ಜಿಯ ಬಗ್ಗೆ ಮಾಹಿತಿ ಕಲೆ ಹಾಕಿ ಸಹಾಯ ಮಾಡಲು ಹಲವಾರು ಜನ ಮುಂದಾಗಿದ್ದರು. ಆದರೆ ಖ್ಯಾತ ಬಾಲಿವುಡ್ ವಿಲನ್ ಹಾಗೂ ನಿಜ ಜೀವನದ ಹೀರೋ ಸೋನು ಸೂದ್ ರವರು ವಿಶೇಷ ರೀತಿಯಲ್ಲಿ ಆಲೋಚನೆ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ. ಇವರು ಕೇವಲ ದುಡ್ಡು ನೀಡುತ್ತೇನೆ, ಆಶ್ರಯ ನೀಡುತ್ತೇನೆ ಎಂದರೇ ಎಲ್ಲಾ ಸೆಲೆಬ್ರಿಟಿಗಳ ಅಂತೆ ಇವರು ಕೂಡ ಆ ಸಾಲಿಗೆ ಸೇರಿ ಕೊಳ್ಳುತ್ತಿದ್ದರು. ಆದರೆ ಇವರು ಹಾಗೆ ಮಾಡಲಿಲ್ಲ. (ಒಂದು ವೇಳೆ ನೀವು ಆ ವಿಡಿಯೋ ನೋಡಿಲ್ಲವಾದರೆ ಈ ಕೆಳಗಡೆಯ ವಿಡಿಯೋ ಇದೆ ನೀವೇ ನೋಡಿ.)

ಹೌದು ಸ್ನೇಹಿತರೇ, ಈ ವಿಡಿಯೋ ಕಂಡ ಕೂಡಲೇ ಸೋನು ಸೂದ್ ರವರು ಟ್ವೀಟ್ ಮಾಡಿದ್ದು, ದಯವಿಟ್ಟು ಇವರ ಕುರಿತು ನನಗೆ ಮಾಹಿತಿ ನೀಡಿ. ನಾನು ಇವರಿಗೆ ಒಂದು ತರಬೇತಿ ಶಾಲೆಯನ್ನು ತೆರೆದು ಕೊಡುತ್ತೇನೆ, ತರಬೇತಿ ಶಾಲೆಯಲ್ಲಿ ಮಹಿಳೆಯರಿಗೆ ಆತ್ಮ ರಕ್ಷಣೆ ನ ಕುರಿತು ಅವರು ತರಬೇತಿ ನೀಡಲಿ ಎಂದು ಬರೆದು ಕೊಂಡು ಅಜ್ಜಿಯನ್ನು ಹುಡುಕಿ ಕೊಡಿ ಎಂದಿದ್ದಾರೆ. ಅಲ್ಲಿಗೆ ಶಾಲೆ ತೆರೆದು ಕೊಟ್ಟರೆ ಇದರಿಂದ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆ ಕುರಿತು ಹೇಳಿ ಕೊಡಲು ಸಹಾಯವಾಗುತ್ತದೆ ಹಾಗೂ ಆ ರೀತಿ ಮಾಡಿ ಗಳಿಸಿದ ಹಣದಲ್ಲಿ ಅಜ್ಜಿಯು ತನ್ನ ಜೀವನ ಸಾಗಿಸಲು ಸಹಾಯವಾಗುತ್ತದೆ ಎಂಬ ಅದ್ಭುತ ಆಲೋಚನೆ ಸೋನು ಸೂದ್ ರವರಲ್ಲಿ ಮೂಡಿರುವುದು ಸ್ವಾಗತಾರ್ಹ ಸಂಗತಿ. ಇವರ ಈ ನಿರ್ಧಾರವನ್ನು ಕಂಡ ನೆಟ್ಟಿಗರು ವಿಶೇಷ ರೀತಿಯಲ್ಲಿ ಆಲೋಚನೆ ಮಾಡಿದ್ದೀರಿ, ನಿಮ್ಮ ಈ ಸಮಾಜಮುಖಿ ಕಾರ್ಯಗಳು ಹೀಗೆ ಮುಂದು ವರೆಯಲಿ ಎಂದು ಹಾರೈಸಿದ್ದಾರೆ.