ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದ್ದ ಮಹಿಳೆಯನ್ನು ಹುಡುಕಿಕೊಂಡು ಬಂದ ವಿಶೇಷ ಬಹುಮಾನವೇನು ಗೊತ್ತಾ?

ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದ್ದ ಮಹಿಳೆಯನ್ನು ಹುಡುಕಿಕೊಂಡು ಬಂದ ವಿಶೇಷ ಬಹುಮಾನವೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನೀವೆಲ್ಲರೂ ಬಹುಶಃ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಅಂಧ ವ್ಯಕ್ತಿಗೆ ಮಹಿಳೆಯೊಬ್ಬರು ಬಸ್ ಹತ್ತಲು ಸಹಾಯ ಮಾಡಿದ್ದ ವಿಡಿಯೋ ನೋಡಿಯೇ ಇರುತ್ತೀರಾ. ಈ ವಿಡಿಯೋ ಇಡೀ ದೇಶದೆಲ್ಲೆಡೆ ಬಾರಿ ಸದ್ದು ಮಾಡಿತ್ತು. ತನಗೆ ಯಾವುದೇ ಸಂಬಧವಿಲ್ಲವಾದರೂ ಮಹಿಳೆ ಓಡಿ, ಅಂಧ ವ್ಯಕ್ತಿಯನ್ನು ಬಸ್ ಹತ್ತಿಸಿದ ಘಟನೆ ಭೂಮಿಯಲ್ಲಿ ಮಾನವೀಯತೆ ಗುಣಗಳು ಇನ್ನು ಇವೆ ಎಂಬುದನ್ನು ನೆನಪು ಮಾಡಿದ್ದವು. ಹಲವಾರು ಸೆಲೆಬ್ರೆಟಿಗಳು ಕೂಡ ಈಕೆ ನಿಜವಾದ ಸೆಲೆಬ್ರೆಟಿ ಎಂದು ಹಾಡಿ ಹೊಗಳಿದ್ದರು. ಒಂದು ವೇಳೆ ನೀವು ಆ ವಿಡಿಯೋ ನೋಡಿಲ್ಲ ಎಂದಾದರೇ ಇಲ್ಲಿದೆ ನೋಡಿ ಆ ಟ್ವೀಟ್.

ಈ ವಿಡಿಯೋ ದಲ್ಲಿ ಆ ವ್ಯಕ್ತಿಗೆ ಸಹಾಯ ಮಾಡಿದ್ದ ಮಹಿಳೆಗೆ ಇದೀಗ ವಿಶೇಷ ಉಡುಗೊರೆಯೊಂದು ಬಂದಿದೆ. ತಾವು ಮಾಡಿದ್ದ ಕಾರ್ಯಗಳ ಪ್ರತಿಫಲಗಳನ್ನು ಎಲ್ಲರೂ ಅನುಭವಿಸಿಯೇ ತೀರುತ್ತಾರೆ ಎನ್ನುವ ಮಾತಿಗೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಹೌದು ಸ್ನೇಹಿತರೇ ಇದೀಗ ಈ ವಿಡಿಯೋ ವೈರಲ್ ಆದ ಬಳಿಕ ಪ್ರಸಿದ್ಧ ಜಾಯಲ್ಲುಕಾಸ್ ಅಧ್ಯಕ್ಷರು ಈ ವಿಡಿಯೋ ನೋಡಿ, ಬಹಳ ಸಂತಸಗೊಂಡು ಆ ಮಹಿಳೆಯ ಬಗ್ಗೆ ಸಂಪೂಣವಾಗಿ ಮಾಹಿತಿ ಕಲೆ ಹಾಕಿದಾಗ ಆ ಮಹಿಳೆಗೆ ವಾಸಿಸಲು ಸ್ವಂತ ಮನೆಯಿಲ್ಲ ಎಂಬುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡ ಜಾಯಲ್ಲುಕಾಸ್ ಅಧ್ಯಕ್ಷರು ಮಹಿಳೆಯನ್ನು ಆಫೀಸಿಗೆ ಆಹ್ವಾನಿಸಿ ಹೊಸ ಮನೆಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ವಿಚಾರಕ್ಕೆ ಪ್ರತಿಕ್ರಿಯಿಸಿದ ಮಹಿಳೆ ಇದು ಒಂದು ದೊಡ್ಡ ಆಶ್ಚರ್ಯ, ನಾನು ನಿರೀಕ್ಷಿಸಿರಲಿಲ್ಲ. ನೂರಾರು ಉದ್ಯೋಗಿಗಳು ನನ್ನನ್ನುಸ್ವಾಗತಿಸಿದರು, ಹೀಗೆ ನಡೆಯುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಇಂದಿನ ಆಧುನಿಕ ಬಿಡುವಿಲ್ಲದ ಜೀವನದಲ್ಲಿ ಮನುಷ್ಯರು ಮಾನವೀಯತೆ, ಸಹಾನುಭೂತಿ ಗುಣ ಗಳನ್ನು ಮರೆಯುತ್ತಿದ್ದಾರೆ ಎಂಬ ಮಾತುಗಳು ಸದಾ ಕೇಳಿ ಬರುತ್ತಿವೆ. ಆ ಮಾತುಗಳ ನಡುವೆ ಇಂತಹ ಘಟನೆಗಳು ಹೊಸ ಚೈತನ್ಯವನ್ನು ಮೂಡಿಸಿ, ಭೂಮಿಯ ಮೇಲೆ ಇನ್ನು ಮಾನವೀಯತೆಗೆ ಜಾಗವಿದೆ ಎಂಬುದನ್ನು ನೆನಪು ಮಾಡಿಸುತ್ತಿರುತ್ತದೆ. ಇನ್ನು ಈ ಉಡುಗೊರೆಯ ವಿಷಯ ಬಹಿರಂಗ ಗೊಂಡ ತಕ್ಷಣ ನೆಟ್ಟಿಗರು ತಮ್ಮದೇ ಆದ ಪ್ರತಿಕ್ರಿಯೆಗಳನ್ನು ನೀಡಿದ್ದು, ಸರಿಯಾದ ಬಹುಮಾನ ದೊರೆತಿದೆ. ತಾವು ಮಾಡಿದ ಯಾವುದೇ ಉತ್ತಮ ಕಾರ್ಯಗಳು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ ಎಂದಿದ್ದಾರೆ.