ನದಿಗಳಲ್ಲಿ ಹಾಗೂ ಕೆರೆಗಳಲ್ಲಿ ಅನಾಧಿ ಕಾಲದಿಂದಲೂ ನಾಣ್ಯಗಳನ್ನು ಹಾಕುವುದು ಯಾಕೆ ಗೊತ್ತಾ? ನಮ್ಮ ಹಿರಿಯರ ವೈಜ್ಞಾನಿಕತೆಗೆ ಸಾಕ್ಷಿ

ನದಿಗಳಲ್ಲಿ ಹಾಗೂ ಕೆರೆಗಳಲ್ಲಿ ಅನಾಧಿ ಕಾಲದಿಂದಲೂ ನಾಣ್ಯಗಳನ್ನು ಹಾಕುವುದು ಯಾಕೆ ಗೊತ್ತಾ? ನಮ್ಮ ಹಿರಿಯರ ವೈಜ್ಞಾನಿಕತೆಗೆ ಸಾಕ್ಷಿ

ನಮಸ್ಕಾರ ಸ್ನೇಹಿತರೇ, ನೀವು ಬಹಳಷ್ಟು ನದಿ, ಕೆರೆ ಹಾಗೂ ಪವಿತ್ರ ದೇವಾಲಯಗಳ ಕಲ್ಯಾಣಿಗಳಲ್ಲಿ ನಾಣ್ಯಗಳನ್ನು ಎಸೆಯುವ ಪದ್ದತಿಯನ್ನು ನೋಡಿರುತ್ತೀರಿ, ಅಷ್ಟೇ ಅಲ್ಲಾ ನೀವು ಕೂಡ ಎಸೆದಿರುತ್ತೀರಿ. ಆದರೆ ಈ ಪದ್ದತಿಯನ್ನು ನಮ್ಮ ಹಿರಿಯರು ಯಾಕೆ ಆರಂಭ ಮಾಡಿದರೂ ಎಂಬುದರ ಬಗ್ಗೆ ನಿಮಗೆ ಗೊತ್ತೇ? ಇದನ್ನು ಕಂಡ ಜನ ಈ ರೀತಿಯ ಪದ್ದತಿಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ ನಮ್ಮ ಹಿರಿಯರು ವೈಜ್ಞಾನಿಕ ಕಾರಣಕ್ಕಾಗಿ ನಾಣ್ಯ ಎಸೆಯುವುದನ್ನು ಆರಂಭಿಸಿದರು. ಅದು ಕ್ರಮೇಣ ಆಚರಣೆಯಾಗಿ ಇಂದಿಗೂ ಒಂದು ಸಂಪ್ರದಾಯ ಹಾಗೂ ಪದ್ಧತಿಯಾಗಿ ನಡೆದುಕೊಂಡು ಬಂದಿದೆ. ಹೌದು ಸ್ನೇಹಿತರೇ, ಇಂದಿನ ಟೆಕ್ನಾಲಾಜಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಕಳೆದ ಎರಡು ಮೂರು ದಶಕಗಳಿಂದ ಟೆಕ್ನಾಲಜಿ ಬಹಳಷ್ಟು ಬೆಳೆದಿದೆ.

ಆದರೆ ನಮ್ಮ ಪೂರ್ವಜರು ಈ ಬಹುತೇಕ ಟೆಕ್ನಾಲಾಜಿಯ ಉಪಯೋಗಗಳನ್ನು ನೂರಾರು ವರ್ಷಗಳ ಹಿಂದೆಯೇ ತಿಳಿದುಕೊಂಡು ಹಲವಾರು ಪದ್ದತಿಗಳನ್ನು ಅನುಸರಿಸಿದ್ದರು. ಈಗಿನ ಜಗತ್ತಿನಲ್ಲಿ ಅವುಗಳ ಪ್ರಯೋಜನವನ್ನು ಕಂಡು ಮಿಷಿನ್ ಗಳನ್ನು ತಯಾರಿಸಿ ನಾವೇ ಕಂಡು ಹಿಡಿದಿದ್ದೇವೆ ಎಂದು ಕಂಪನಿಗಳು, ವಿಜ್ಞಾನಿಗಳು ಹಣಗಳಿಸುತ್ತಾರಷ್ಟೆ. ಆದರೆ ನಮ್ಮ ಪೂರ್ವಜರು ಯಾವುದೇ ಮಿಷಿನ್ ಗಳು ಇಲ್ಲದೇ ಇದ್ದರೂ ಸಾಮಾನ್ಯ ರೀತಿಯಲ್ಲಿಯೇ ಮೂಲ ಉದ್ದೇಶವನ್ನು ಸಾಧಿಸುತ್ತಿದ್ದರು. ಅದೇ ರೀತಿ, ನದಿಯಲ್ಲಿ ಹಾಗೂ ಕೆರೆಗಳಲ್ಲಿ ನಾಣ್ಯಗಳನ್ನು ಹಾಕುವುದರ ಹಿಂದೆಯೂ ಇದೇ ರೀತಿಯ ವೈಜ್ಞಾನಿಕ ಕಾರಣ ಇದೆ. ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಅಂದಿನ ಕಾಲದಲ್ಲಿ ಎಲ್ಲರೂ ನದಿಯ, ಕೆರೆಯ ಅಥವಾ ಕಲ್ಯಾಣಿ ನೀರನ್ನು ಕುಡಿಯುತ್ತಿದ್ದರು. (ಆದರೆ ಇಂದು ನಾವು ಅದೇ ನೀರನ್ನು ಕಲುಷಿತ ಮಾಡಿ ತದನಂತರ ಎಂದು ಫಿಲ್ಟರ್ ಮಾಡಿಕೊಂಡು ಕುಡಿಯುತ್ತಿದ್ದೇವೆ).

ಅದೇ ಕಾರಣಕ್ಕೆ ನೀರಿಗೆ ನಾಣ್ಯವನ್ನು ಹಾಕುವುದರಿಂದ ಆ ನೀರಿನಲ್ಲಿ ತಾಮ್ರದ ಅಂಶ ಪಸರಿಸುತ್ತಿತ್ತು. ಆ ನೀರನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಆರೋಗ್ಯಕಾರಿ ಅಂಶಗಳು ದೊರೆಯುತ್ತಿದ್ದವು. ಈ ಹಿಂದೆ ಮನೆಯಲ್ಲಿ ಬೋರ್ ವೆಲ್ ಗಳು ಇರಲಿಲ್ಲ ಹಾಗೂ ನೀರನ್ನು ಶುದ್ದೀಕರಿಸುವಂತಹ ಯಾವುದೇ ರೀತಿಯ ಯಂತ್ರಗಳು ಸಹ ಇರಲಿಲ್ಲ, ಹಾಗಾಗಿ ನದಿ ಕೆರೆಗಳ ನೀರನ್ನು ಶುದ್ದಿಸುವ ಜೊತೆಗೆ ನೀರನ್ನು ಫಿಲ್ಟರ್ ಮಾಡುವ ಗುಣಗಳನ್ನು ನಾಣ್ಯಗಳು ಮಾಡುತ್ತಿದ್ದವು. ಇಂದು ಅದೇ ಫಿಲ್ಟರ್ ಅನ್ನು ಮನೆಯಲ್ಲಿರುವ ವಾಟರ್ ಪ್ಯೂರಿಫೈರ್ಗಳಿಗೆ ಅಳವಳಿಸಿ, ತಾಮ್ರದ ಅಂಶಗಳನ್ನು ಸೇರಿಸುತ್ತದೆ ಎಂದು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲಾ, ನಾಣ್ಯ ಎಸೆಯುವುದನ್ನು ಮೂಢನಂಬಿಕೆ ಎನ್ನುತ್ತಾರೆ. ಆದರೆ ಅವರ ಮನೆಯಲ್ಲಿ ಮಾತ್ರ ತಾಮ್ರದ ಅಂಶಗಳನ್ನು ಸೇರಿಸುವ ಫಿಲ್ಟರ್ ಗಳನ್ನು ಬಳಸುತ್ತಾರೆ. ಅಂದಹಾಗೇ ನಾಣ್ಯಗಳು ಸ್ಟೀಲ್ ಎನ್ನಬೇಡಿ, ಅಂದಿನ ಕಾಲದಲ್ಲಿ ತಾಮ್ರದ ನಾಣ್ಯಗಳು ಚಲಾವಣೆಯಲ್ಲಿ ಇದ್ದವು.