ಅಗತ್ಯ ಶಸ್ತ್ರಾಸ್ತ್ರಗಳ ಸರಬರಾಜಿನ ನಂತರ ಮೊದಲ ಬಾರಿಗೆ ಚೀನಾ-ಭಾರತದ ಕುರಿತು ಧ್ವನಿಯೆತ್ತಿದ ಇಸ್ರೇಲ್ ! ಹೇಳಿದ್ದೇನು ಗೊತ್ತಾ??

ಅಗತ್ಯ ಶಸ್ತ್ರಾಸ್ತ್ರಗಳ ಸರಬರಾಜಿನ ನಂತರ ಮೊದಲ ಬಾರಿಗೆ ಚೀನಾ-ಭಾರತದ ಕುರಿತು ಧ್ವನಿಯೆತ್ತಿದ ಇಸ್ರೇಲ್ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಸದಾ ಭಾರತ ದೇಶದ ಪರ ಧ್ವನಿ ಎತ್ತುವ ಇಸ್ರೇಲ್ ದೇಶವು, ವಿಶ್ವದಲ್ಲಿಯೇ ಭಾರತದ ಪರಮಾಪ್ತ ದೇಶಗಳ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತದೆ. ಯಾವುದೇ ಸಂದರ್ಭ ವಾಗಿರಲಿ ಎಂತಹ ಸವಾಲುಗಳೇ ಆಗಿರಲಿ ಇಸ್ರೇಲ್ ದೇಶ ಕಿಂಚಿತ್ತು ಆಲೋಚನೆ ಮಾಡದೇ ಭಾರತದ ಪರ ನಾವಿದ್ದೇವೆ ಎಂದು ಹೇಳುತ್ತದೆ. ಹಲವಾರು ಬಾರಿ ತನ್ನ ರಕ್ಷಣಾ ಗೌಪ್ಯ ವಿಚಾರಗಳನ್ನು ಕೂಡ ಹಿಂದೆ ಮುಂದೆ ಆಲೋಚನೆ ಮಾಡದೇ ಹಂಚಿಕೊಂಡು ಭಾರತ ತನ್ನನ್ನು ಯಾಕೆ ಆಪ್ತಮಿತ್ರರ ಸಾಲಿನಲ್ಲಿ ಕಾಣುತ್ತದೆ ಎಂಬುದನ್ನು ನಿರೂಪಿಸಿತ್ತು. ಇನ್ನು ಯುದ್ಧ ನಡೆಯುವ ಸಂದರ್ಭ ಬಂದಾಗ ಕೂಡ ಭಾರತದ ಪರ ನಿಲ್ಲುತ್ತೇವೆಂದು ಬಹಿರಂಗವಾಗಿ ಸದಾ ಹೇಳಿಕೆ ನೀಡುವ ಇಸ್ರೇಲ್ ದೇಶವು ಭಾರತ ಹಾಗೂ ಚೀನಾ ಗಡಿಯ ಬಗ್ಗೆ ಹೆಚ್ಚು ಮಾತನಾಡಿರಲಿಲ್ಲ. ಅಗತ್ಯ ಶಸ್ತ್ರಾಸ್ತ್ರ ಸರಬರಾಜು ಮಾಡಲು ಒಪ್ಪಿಕೊಂಡು ತುರ್ತು ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿ ಕೊಡಲು ಒಪ್ಪಿಕೊಂಡಿದ್ದರೂ ಕೂಡ ಬಹಿರಂಗವಾಗಿ ಇಸ್ರೇಲ್ ದೇಶ ಈ ಕುರಿತು ಎಲ್ಲೂ ಮಾತನಾಡಿರಲಿಲ್ಲ. ಸದಾ ಭಾರತದ ಪರ ಮಾತನಾಡುವ ಇಸ್ರೇಲ್ ದೇಶವು ಯಾಕೆ ಚೀನಾ ಹಾಗೂ ಭಾರತ ದೇಶದ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಭಾರತದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಅನುಮಾನ ಎಲ್ಲರನ್ನೂ ಕಾಡಿದ್ದು ಸುಳ್ಳಲ್ಲ.

ಆದರೆ ಭಾರತ ಹಾಗೂ ಚೀನಾ ದೇಶದ ಗಡಿಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳಂತೆ ಇಸ್ರೇಲ್ ದೇಶವು ಕೂಡ ತನ್ನ ನೆರೆಹೊರೆಯ ರಾಷ್ಟ್ರಗಳಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಕಾರಣ ಈ ಕುರಿತು ಇಸ್ರೇಲ್ ದೇಶ ಹೆಚ್ಚಾಗಿ ಗಮನ ಹರಿಸಿರಲಿಲ್ಲ. ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಟ್ಟಿದ್ದರೂ ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿರಲಿಲ್ಲ. ಯಾಕೆಂದರೆ ಅಲ್ಲಿಯೂ ಕೂಡ ಇದೇ ರೀತಿಯ ಸವಾಲುಗಳು ಎದುರಾಗಿದ್ದವು. ನೆರೆಹೊರೆಯ ರಾಷ್ಟ್ರಗಳ ಮೇಲೆ ಇನ್ನೇನು ಯುದ್ಧ ನಡೆದೇ ಬಿಟ್ಟಿತು ಎಂಬ ಭಾವನೆ ಮೂಡಿತ್ತು, ಅದೇ ಕಾರಣಕ್ಕಾಗಿ ಇಸ್ರೇಲ್ ದೇಶ ಈ ಕುರಿತು ಗಮನ ಹರಿಸಿರಲಿಲ್ಲ. ಆದರೆ ಇದೀಗ ಕೊನೆಗೂ ಇಸ್ರೇಲ್ ದೇಶದ ಲೆಫ್ಟಿನೆಂಟ್ ಜನರಲ್ ಬೆಂಜಮಿನ್ ಗ್ಯಾಂಟ್ಜ್ ರವರು ಭಾರತದ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಹೌದು ಭಾರತ ಹಾಗೂ ಚೀನಾ ದೇಶಗಳ ನಡೆಯಲ್ಲಿ ನಡೆಯುತ್ತಿರುವ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಾಗಿತ್ತು ರಕ್ಷಣಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವ ಭರವಸೆ ನೀಡಿ ಯಾವುದೇ ಸಮಯದಲ್ಲಿ ಎಂತಹ ಸವಾಲುಗಳು ಎದುರಾದರೂ ಭಾರತ ದೇಶಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಇಸ್ರೇಲ್ ದೇಶ ತಿಳಿಸಿದೆ.

ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಅಧಿಕೃತ ಮಾಹಿತಿ ನೀಡಿದ್ದು, ಇಸ್ರೇಲ್ ದೇಶ ನಮಗೆ ಸಂಪೂರ್ಣ ಭರವಸೆಯನ್ನು ನೀಡಿದೆ. ಆದ ಕಾರಣ ನಾವು ಇಸ್ರೇಲ್ ದೇಶವನ್ನು ಚೀನಾ ದೇಶದ ಜೊತೆ ಮಿಲಿಟರಿ ಉದ್ವಿಗ್ನತೆ ಮುಂದುವರಿದಂತೆ ಬೆಂಬಲ ನೀಡುವ ವಾಗ್ದಾನ ಮಾಡಿದ ಮಿತ್ರ ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಇನ್ನು ಇದೇ ಸಮಯದಲ್ಲಿ ಇಂಡೋನೇಷಿಯಾದ ರಕ್ಷಣಾ ಸಚಿವ ಪ್ರಭೋವೋ ಸುಡಿಯಾಂಟ್ ರವರು ಸೋಮವಾರ ನವದೆಹಲಿಗೆ ಭೇಟಿ ನೀಡಲಿದ್ದು ಪ್ರಾದೇಶಿಕ ವಿಷಯಗಳ ಕುರಿತು ಮತ್ತು ಹೊಸ ಜಂಟಿ ನೌಕ ವ್ಯಾಯಾಮಗಳೊಂದಿಗೆ ರಕ್ಷಣಾ ಸಂಬಂಧಗಳನ್ನು ಭಾರತದೊಂದಿಗೆ ವಿಸ್ತರಿಸಲು ಚಿಂತನೆ ನಡೆಸಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಭಾರತವು ಮಲಕ್ಕಾ ಜಲಸಂಧಿಯಲ್ಲಿ ಇನ್ನು ಮುಂದೆ ಗಸ್ತು ಚಟುವಟಿಕೆಗಳನ್ನು ನಡೆಸ ಬಹುದಾಗಿದೆ. ಈ ಚಟುವಟಿಕೆಗಳಲ್ಲಿ ಇಂಡೋನೇಷ್ಯಾ ದೇಶ ಭಾರತದ ಜೊತೆ ಕೈಜೋಡಿಸಲಿದೆ.