ಬಿಜೆಪಿ ಸೇರುವುದಿಲ್ಲ ಸಚಿನ್ ಪೈಲಟ್ ! ಯಾಕೆ ಗೊತ್ತಾ?? ರಾಜಸ್ತಾನದಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮಾ !

ಬಿಜೆಪಿ ಸೇರುವುದಿಲ್ಲ ಸಚಿನ್ ಪೈಲಟ್ ! ಯಾಕೆ ಗೊತ್ತಾ?? ರಾಜಸ್ತಾನದಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮಾ !

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ರಾಜಸ್ತಾನ ರಾಜ್ಯದಲ್ಲಿ ಕೇವಲ 25 ಸೀಟುಗಳನ್ನು ಗೆದ್ದು, ಅಂತ್ಯದ ಹಾದಿಯಲ್ಲಿ ಸಾಗುತ್ತಿದ್ದ ಪಕ್ಷವನ್ನು ಅಧಿಕಾರಕ್ಕೆ ಏರುವಂತೆ ಮಾಡಲು ಇನ್ನಿಲ್ಲದ ಹೊಸ ಪ್ರಯತ್ನಗಳು ನಡೆಸಿ, ಕೆಳಮಟ್ಟದಿಂದ ಪಕ್ಷವನ್ನು ಮತ್ತೊಮ್ಮೆ ಕಟ್ಟಿ ಕೊನೆಗೆ ಅಧಿಕಾರಕ್ಕೆ ಏರಿಸಿದ್ದ ಸಚಿನ್ ಪೈಲಟ್ ರವರು, ಪಕ್ಷದಲ್ಲಿ ತಮ್ಮನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂದು ಹೇಳಿ, ತಮಗೆ ಉನ್ನತ ಸ್ಥಾನ ಮಾನ ನೀಡುವಂತೆ ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಒತ್ತಡ ಏರಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗಿದೆ ಎಂದು ಸಚಿನ್ ಪೈಲಟ್ ಸೇರಿದಂತೆ ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಮೂಲಕ ಸಚಿನ್ ಪೈಲಟ್ ರವರ ಅಗತ್ಯತೆ ನಮಗಿಲ್ಲ ಎಂದು ಸ್ಪಷ್ಟ ಸಂದೇಶ ರವಾನೆ ಮಾಡಿದೆ.

ಈತನ್ಮದ್ಯೆ ಸಚಿನ್ ಪೈಲಟ್ ರವರು, ಬಿಜೆಪಿ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದ ಕಾರಣ ಸಚಿನ್ ಪೈಲಟ್ ರವರು ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಸಚಿನ್ ಪೈಲಟ್ ರವರು ಇದೀಗ ಬಿಜೆಪಿ ಪಕ್ಷ ಸೇರುವುದಿಲ್ಲ ಎಂಬುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಪಕ್ಷವು ನಿಮ್ಮನ್ನು ಹಣದಿಂದ ಖರೀದಿ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಾಗ ಉತ್ತರ ನೀಡಿರುವ ಸಚಿನ್ ಪೈಲಟ್ ರವರು, ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿ ಕೆಲವರು ನನ್ನ ಹೆಸರು ಕೆಡಿಸಲು ಪ್ರಯತ್ನ ಪಡುತ್ತಿದ್ದಾರೆ. ನಾನು ಕಾಂಗ್ರೆಸ್ ನಾಯಕರಿಂದ ಬೇಸತ್ತಿರುವುದು ನಿಜ ಆದರೆ ಇಲ್ಲಿಯವರೆಗೂ ಪಕ್ಷದ ವಿರುದ್ಧ ಒಂದು ಮಾತು ಕೂಡ ಹೇಳಿಲ್ಲ ಎಂದರು.

ಅಷ್ಟೇ ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ ಸಚಿನ್ ಪೈಲಟ್ ರವರು, ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ರಾಜಸ್ತಾನದಲ್ಲಿ ಸಚಿನ್ ಪೈಲಟ್ ರವರು ಇತ್ತೀಚಿಗೆ ಬಹಳ ಜನಪ್ರಿಯರಾಗಿದ್ದಾರೆ. ಅದರಲ್ಲಿಯೂ ಎರಡು ಪ್ರಬಲ ಜಾತಿಗಳಾದ ಗುರ್ಜಾರ್ ಮತ್ತು ಮೀನಾಸ್ ಮತ ಬ್ಯಾಂಕ್ ಅನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅದೇ ಕಾರಣಕ್ಕೆ ಹೊಸ ಪಕ್ಷ ಸ್ಥಾಪನೆಯ ಮೂಲಕ ರಾಜಸ್ತಾನದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಎಷ್ಟರ ಮಟ್ಟಿಗೆ ಎಂದರೇ ಕಳೆದ ಚುನಾವಣೆಯಲ್ಲಿ ಈ ಎರಡು ಸಮುದಾಯಗಳ ಪ್ರಾಬಲ್ಯವಿದ್ದ ಪೂರ್ವ ರಾಜಸ್ಥಾನದಲ್ಲಿ 49 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆಲ್ಲುವಂತೆ ಮಾಡಿದರು. ಅಷ್ಟೇ ಅಲ್ಲದೇ ಇನ್ನು ಬಿಜೆಪಿ ಪಕ್ಷ ಸೇರಿದರೆ ಅವಕಾಶವಾದಿ ಎಂಬ ಹಣೆಪಟ್ಟಿ ಕಟ್ಟಿ ಕೊಳ್ಳಬೇಕಾಗುತ್ತದೆ ಎಂಬುದು ಇವರ ಲೆಕ್ಕಾಚಾರ.

ಇನ್ನು ಇವರ ಈ ನಡೆಯನ್ನು ಕಂಡ ರಾಜಕೀಯ ವಿಶ್ಲೇಷಕರು ಯುವ ನಾಯಕ ಎಂಬ ಹೆಸರಿದೆ, ವಿದ್ಯಾವಂತ ಹಾಗೂ ಕಷ್ಟಪಟ್ಟು ಪಕ್ಷವನ್ನು ಕಟ್ಟುವವನು ಮತ್ತು ಎರಡು ಪ್ರಬಲ ಸಮುದಾಯಗಳ ಬೆಂಬಲ ಇಟ್ಟುಕೊಂಡು CM ಸ್ಥಾನಕ್ಕೆ ಅರ್ಹ ವ್ಯಕ್ತಿ, ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿತು ಎಂದು ಪ್ರಚಾರ ಮಾಡಿದರೇ ಸಹಾನುಭೂತಿಯು ಸಿಗುತ್ತದೆ ಎಂಬ ಲೆಕ್ಕಾಚಾರ ದೊಂದಿಗೆ ಇದೀಗ ಪಕ್ಷ ಕಟ್ಟಲು ಹೊರಟಿದ್ದಾರೆ ಎನ್ನಲಾಗಿದೆ.