ಬಿಗ್ ಬ್ರೇಕಿಂಗ್: ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ ಮಾತುಕತೆಯ ನಡುವೆ ಸಚಿನ್ ವಿರುದ್ಧ ಕ್ರಮ ತೆಗೆದುಕೊಂಡ ರಾಜಸ್ಥಾನ ಕಾಂಗ್ರೆಸ್ !

ಬಿಗ್ ಬ್ರೇಕಿಂಗ್: ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ ಮಾತುಕತೆಯ ನಡುವೆ ಸಚಿನ್ ವಿರುದ್ಧ ಕ್ರಮ ತೆಗೆದುಕೊಂಡ ರಾಜಸ್ಥಾನ ಕಾಂಗ್ರೆಸ್ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸಚಿನ್ ಪೈಲೆಟ್ ರವರು ತಮಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಬೇಕು, ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಮಾಡಿ ದೆಹಲಿಯಲ್ಲಿ ಹಲವಾರು ದಿನಗಳಿಂದ ಬೀಡುಬಿಟ್ಟು ಸೋನಿಯಾ ಗಾಂಧಿ ಸೇರಿದಂತೆ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇನ್ನಿತರ ಪಕ್ಷದ ನಾಯಕರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧ್ಯ ರವರನ್ನು ಭೇಟಿಯಾದರೂ ಕೂಡ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿರಲಿಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದಲ್ಲಿ ತನಗೆ ಸ್ಥಾನಮಾನ ನೀಡಬೇಕು ಎಂದು ಸಚಿನ್ ಪೈಲೆಟ್ ಅವರು ಒತ್ತಾಯ ಮಾಡುತ್ತಿದ್ದರು. ಇದರ ನಡುವೆಯೇ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಸಚಿನ್ ಪೈಲೆಟ್ ರವರನ್ನು ಸಭೆಗೆ ಆಗಮಿಸುವಂತೆ ವಿಪ್ ಜಾರಿ ಮಾಡಿತ್ತು.

ಆದರೆ ಮೊದಲನೇ ಸಭೆಗೆ ಸಚಿನ್ ಪೈಲೆಟ್ ರವರು ಹಾಗೂ ಅವರ ಬೆಂಬಲಿತ ಶಾಸಕರು ಹಾಜರಾಗಿರಲಿಲ್ಲ. ಇದನ್ನು ಕಂಡ ರಾಜಸ್ಥಾನ ಕಾಂಗ್ರೆಸ್ ಪಕ್ಷವು ಇಂದು ಎರಡನೇ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು, ಆದರೆ ಅಷ್ಟರಲ್ಲಿ ಪ್ರಿಯಾಂಕ ಗಾಂಧಿ ರವರು ಸಚಿನ್ ಪೈಲೆಟ್ ರವರ ಜೊತೆ ಮಾತುಕತೆ ನಡೆಸಿ 4 ಮಂತ್ರಿಸ್ಥಾನ, ರಾಜ್ಯ ಕಾಂಗ್ರೆಸ್ ಪಟ್ಟ ಸೇರಿದಂತೆ ಗೃಹ ಹಾಗೂ ಹಣಕಾಸು ಖಾತೆಗಳನ್ನು ಸಚಿನ್ ಪೈಲೆಟ್ ಹಾಗೂ ಅವರ ಬೆಂಬಲಿಗ ಶಾಸಕರಿಗೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ದೆಹಲಿಯಲ್ಲಿ ಈ ಕುರಿತು ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ರಾಜಸ್ಥಾನ ಕಾಂಗ್ರೆಸ್ ಮಹತ್ವದ ನಿರ್ಣಯ ಕೈಗೊಂಡಿದೆ.

ಇದೀಗ ಬಂದಿರುವ ಅಧಿಕೃತ ಮಾಹಿತಿಯ ಪ್ರಕಾರ ಕಾಂಗ್ರೆಸ್ ಪಕ್ಷವು ಸಚಿನ್ ಪೈಲೆಟ್ ಅವರನ್ನು ರಾಜಸ್ಥಾನ ಉಪ ಮುಖ್ಯಮಂತ್ರಿ ಪಟ್ಟದಿಂದ ಹಾಗೂ ರಾಜಸ್ಥಾನ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಿ ಆದೇಶ ಹೊರಡಿಸಿದೆ. ಒಂದೆಡೆ ಪ್ರಿಯಾಂಕಾ ಗಾಂಧಿ ರವರು ಮಾತುಕತೆ ನಡೆಸುತ್ತಿದ್ದರೂ ಕೂಡ ರಾಜಸ್ಥಾನ ಕಾಂಗ್ರೆಸ್ ಪಕ್ಷವು ಈ ಹೆಜ್ಜೆ ಇಟ್ಟಿರುವುದು ಬಾರಿ ಕುತೂಹಲ ಮೂಡಿಸಿದೆ. ಎರಡನೇ ಶಾಸಕಾಂಗ ಸಭೆಗೆ ಹಾಜರಾಗದ ಕಾರಣ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ನಾಯಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಒಂದು ವೇಳೆ ಇದೀಗ ಸಚಿನ್ ಪೈಲೆಟ್ ರವರು ತಮ್ಮ ಬೆಂಬಲಿತ ಶಾಸಕರಿಂದ ರಾಜೀನಾಮೆ ಕೊಡಿಸಿದಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಉರುಳುವುದು ಖಚಿತ. ಒಂದು ವೇಳೆ ಅದೇ ನಡೆದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ ಹಾಗೂ ಕೊರೊನ ಪರಿಸ್ಥಿತಿಯ ನಡುವೆ ಸರ್ಕಾರ ರಚಿಸುವ ಕಸರತ್ತು ಬಿಜೆಪಿ ಪಕ್ಷ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.