ಸರ್ಕಾರ ಬಿಡಿ ! ರಾಜಸ್ತಾನ ಕಾಂಗ್ರೆಸ್ ಅನ್ನು ಅಂತ್ಯಗೊಳಿಸಲು ಸಿದ್ಧತೆ?? ಸಿಎಂ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಬಿಗ್ ಶಾಕ್ !

ಸರ್ಕಾರ ಬಿಡಿ ! ರಾಜಸ್ತಾನ ಕಾಂಗ್ರೆಸ್ ಅನ್ನು ಅಂತ್ಯಗೊಳಿಸಲು ಸಿದ್ಧತೆ?? ಸಿಎಂ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಬಿಗ್ ಶಾಕ್ !

ನಮಸ್ಕಾರ ಸ್ನೇಹಿತರೇ, ಇದೀಗ ಕಾಂಗ್ರೆಸ್ ಪಕ್ಷವು ಯುವ ನಾಯಕರ ಸಚಿನ್ ಪೈಲಟ್ ರವರು ಮನವೊಲಿಸುವುದರಲ್ಲಿ ನಿರತವಾಗಿದೆ. ಪ್ರಿಯಾಂಕಾ ಗಾಂಧಿ ರವರು ಸಚಿನ್ ಪೈಲಟ್ ರವರ ಮನವೊಲಿಸುತ್ತೇವೆ ಎಂದು ಮಾತುಕತೆ ನಡೆಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿ ರವರು ಕೂಡ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡಿರುವ ಸಚಿನ್ ಪೈಲಟ್ ರವರು, ಶತಾಯ ಗತಾಯ ಉನ್ನತ ಪಟ್ಟ ನೀಡಿ ಇಲ್ಲ ಸರ್ಕಾರ ಉರುಳಿಸಿಯೇ ತೀರುತ್ತೇವೆ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಬರೋಬ್ಬರಿ 29 ಬಾರಿ ಕಳೆದ ಎರಡು ದಿನಗಳಿಂದ ಸಿಎಂ ಸೇರಿದಂತೆ ರಾಜಸ್ತಾನ ಕಾಂಗ್ರೆಸ್ ನಾಯಕರು ಸಚಿನ್ ಪೈಲಟ್ ರವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದರೂ ಕೂಡ ಸಚಿನ್ ಪೈಲಟ್ ರವರು ಕರೆ ಕೂಡ ಸ್ವೀಕರಿಸುತ್ತಿಲ್ಲ.

ಇನ್ನು ಕಾಂಗ್ರೆಸ್ ಸರ್ಕಾರ ಸೇಫ್ ಆಗಿದೆ ಎನ್ನುತ್ತಿದ್ದ ರಾಜಸ್ತಾನ ಕಾಂಗ್ರೆಸ್ ಗೆ ತನ್ನ ಬಲ ತೋರಿಸಲು ಸಚಿನ್ ಪೈಲಟ್ ರವರು MLA ಗಳು ತಂಗಿರುವ ಹೋಟೆಲ್ ನಿಂದ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದನ್ನು ಕಂಡ ರಾಜಸ್ತಾನ ಸಿಎಂ ಹಾಗೂ ಹಿರಿಯ ನಾಯಕರು ಸಚಿನ್ ಪೈಲಟ್ ರವರಿಗೆ ಇನ್ನೊಂದು ಅವಕಾಶ ನೀಡೋಣ ಎಂದು ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಆದರೆ ಅದಕ್ಕೂ ಸಚಿನ್ ಪೈಲಟ್ ಕ್ಯಾರೇ ಎಂದಿಲ್ಲ. ಈ ಎಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎಂಬ ಅನುಮಾನದ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಇದರಿಂದ ಸರ್ಕಾರ ಬಿಡಿ, ಕಾಂಗ್ರೆಸ್ ಪಕ್ಷ ರಾಜಸ್ತಾನದಲ್ಲಿ ಅಸ್ತಿತ್ವ ಕಳೆದುಕೊಂಡರೂ ಆಶ್ಚರ್ಯ ಪಡಬೇಕಿಲ್ಲ.

ಹೌದು ಸ್ನೇಹಿತರೇ, ಇದೀಗ ED, IT ಆಟ ಶುರುವಾಗಿದ್ದು, ಒಮ್ಮೆಲೇ ರಾಜಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ರವರ ಆಪ್ತನ ಮನೆ ಮೇಲೆ ಬರೋಬ್ಬರಿ 300 ED/IT ಅಧಿಕಾರಿಗಳು 43 ಸ್ಥಳಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಶೋಕ್ ಗೆಹ್ಲೋಟ್ ಆಪ್ತರಾದ ರಾಜೀವ್ ಅರೋರಾ ಮತ್ತು ಧರ್ಮೇಂದ್ರ ರಾಥೋಡ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಹಿರಿಯ ಕಾಂಗ್ರೆಸ್ ಮುಖಂಡರ ಕಚೇರಿಗಳ ಮೇಲೆ ED ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಲೆಕ್ಕವಿಲ್ಲದ ನಗದು, ಆಭರಣ, ಆಸ್ತಿ ಪತ್ರಗಳು ಮತ್ತು ಲಾಕರ್‌ಗಳು ಸೇರಿದಂತೆ ಹಲವಾರು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. MLA ಗಳ ಮನವೊಲಿಸಲು ಸಾವಿರಾರು ಕೋಟಿ ಹಣ ವರ್ಗಾವಣೆ ಆಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ಇದರ ನಡುವೆಯೇ ED ಅಧಿಕಾರಿಗಳು ತಪಾಸಣೆಗೆ ಬಂದಿದ್ದು, ಇದನ್ನು ಬಿಜೆಪಿ ಪಕ್ಷವೇ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ.