ಕಾಂಗ್ರೆಸ್-ಶಿವ ಸೇನೆ ಗೆ ‘ಮಹಾ’ ಬಿಗ್ ಶಾಕ್ ! ಬಿಜೆಪಿ ಅಧಿಕಾರಕ್ಕೆ?? ನಡೆದದ್ದೇನು ಗೊತ್ತಾ?

ಕಾಂಗ್ರೆಸ್-ಶಿವ ಸೇನೆ ಗೆ ‘ಮಹಾ’ ಬಿಗ್ ಶಾಕ್ ! ಬಿಜೆಪಿ ಅಧಿಕಾರಕ್ಕೆ?? ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಅದ್ಯಾಕೋ ಕಾಂಗ್ರೆಸ್ ಪಕ್ಷದ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಕೋರೋನ ನಡುವೆಯೂ ಕೂಡ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ತಿಳಿದು ಬರುತ್ತಿದೆ. ಒಂದೆಡೆ ಬಿಜೆಪಿ ಪಕ್ಷ ತನ್ನ ಶಾಸಕರನ್ನು ಸೆಳೆಯುತ್ತಿದೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು, ತನ್ನ ಶಾಸಕರನ್ನು ಮನವೊಲಿಸುವುದರಲ್ಲಿ ವಿಫಲವಾಗಿದೆ ಎಂಬುದನ್ನು ಗಣನೆಗೆ ತೆಗೆದು ಕೊಳ್ಳುತ್ತಿಲ್ಲ. ಯುವ ನಾಯಕರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಗೆದ್ದು, ತದ ನಂತರ ಯುವ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇದೇ ರೀತಿಯ ಕಾರಣಗಳನ್ನು ನೀಡಿ ಜ್ಯೋತಿರಾದಿತ್ಯ ಸಿಂಧ್ಯ ರವರು, ಮಧ್ಯ ಪ್ರದೇಶ ಸರ್ಕಾರವನ್ನು ಉರುಳಿಸಿ ಬಿಜೆಪಿ ಪಕ್ಷ ಸೇರಿ ಕೊಂಡಿದ್ದರು.

ಇದೀಗ ರಾಜಾಸ್ಥಾನ ಸರ್ಕಾರ ಕೂಡ ಅದೇ ಹಾದಿಯಲ್ಲಿ ಇದೆ, ಇಷ್ಟೋತ್ತಿಗೀಗಾಗಲೇ ಸರ್ಕಾರ ಉರುಳಿರಬೇಕಿತ್ತು. ಆದರೆ ರಾಜೀನಾಮೆಯ ಕೊನೆ ಕ್ಷಣದಲ್ಲಿ ಪ್ರಿಯಾಂಕಾ ಗಾಂಧಿ ರವರು ಸಚಿನ್ ಪೈಲಟ್ ರವರ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದ ಕಾರಣ ಸಚಿನ್ ಪೈಲಟ್ ಕೊಂಚ ತಮ್ಮ ಸ್ಪೀಡ್ ಗೆ ಬ್ರೇಕ್ ಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಹಾ ರಾಷ್ಟ್ರ ಸರ್ಕಾರದ ಬುಡ ಅಲ್ಲಾಡುತ್ತಿದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನ್ನುವ ನಾಯಕರು, ತಮ್ಮ ಮೂರು ಪಕ್ಷಗಳ ಮೈತ್ರಿಯಲ್ಲಿಯೇ ಇತರ ಪಕ್ಷದ ನಾಯಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕಳೆದ 4 ದಿನಗಳ ಹಿಂದಷ್ಟೇ ಶಿವಸೇನಾದ 5 ಕಾರ್ಪೊರೇಟರ್ ಗಳು ಮೈತ್ರಿ ಪಕ್ಷವಾದ ಎನ್ಸಿಪಿ ಪಕ್ಷ ಸೇರಿಕೊಂಡಿರುವುದೇ ಇದಕ್ಕೆ ಸಾಕ್ಷಿ.

ಇದೀಗ ಮತ್ತೊಂದು ಮಹತ್ವದ ಘಟನೆ ನಡೆಯುತ್ತಿದ್ದು, ಬಿಜೆಪಿ ಪಕ್ಷದ ಹಿರಿಯ ನಾಯಕ ಎನ್ಸಿಪಿ ಪಕ್ಷದ ಮುಂದೆ ಭರ್ಜರಿ ಆಫರ್ ಇಟ್ಟಿದ್ದಾರೆ. ಬಹಿರಂಗವಾಗಿ ಮಾಧ್ಯಮದವರ ಮುಂದೆ ಮಾತನಾಡಿರುವ ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಅವರು ಎನ್ಸಿಪಿ ಪಕ್ಷವು ದೇಶ ಹಾಗೂ ಮಹಾರಾಷ್ಟ್ರ ದ ಅಭಿವೃದ್ಧಿಯ ದೃಷ್ಟಿಯಿಂದ ಈ ಕೂಡಲೇ ಎನ್ ಡಿ ಎ ಮೈತ್ರಿ ಕೂಟಕ್ಕೆ ಸೇರಬೇಕು ಎಂದಿದ್ದಾರೆ. ಇನ್ನು ಈಗಾಗಲೇ ಶರದ್ ಪವಾರ್ ರವರು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದರೇ ಉಪ ಮುಖ್ಯಮತ್ರಿ ಸ್ಥಾನ ವನ್ನು ಅಜಿತ್ ಪವರ್ ರವರಿಗೆ ಹಾಗೂ ಶರದ್ ಪವರ್ ರವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ನೀಡಲಾಗುವುದು ಎಂಬ ಮಾತುಗಳು ಕೇಳಿ ಬಂದಿವೆ. ಬಿಜೆಪಿ ಪಕ್ಷದ ಜೊತೆ ಸೇರಲು ಎನ್ಸಿಪಿ ಪಕ್ಷಕ್ಕೆ ಮನಸ್ಸು ಇದೆ ಎಂಬ ಮಾತುಗಳು ಕೇಳಿ ಬಂದಿದ್ದು, ಮಹಾ ಮೈತ್ರಿ ಸರ್ಕಾರ ಉರುಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದರ ನಡುವೆ ರಾಜ್ಯದಲ್ಲಿ ಹಲವಾರು ಮಹತ್ವದ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ.