ಚೀನಾಗೆ ಮತ್ತೊಂದು ಬಿಗ್ ಶಾಕ್ ! ಅಮೇರಿಕ ನಂತರ ಚೀನಾ ಕನಸಿಗೆ ಎಳ್ಳು ನೀರು ಬಿಟ್ಟ ಮತ್ತೊಂದು ಬಲಾಢ್ಯ ದೇಶ !

ಚೀನಾಗೆ ಮತ್ತೊಂದು ಬಿಗ್ ಶಾಕ್ ! ಅಮೇರಿಕ ನಂತರ ಚೀನಾ ಕನಸಿಗೆ ಎಳ್ಳು ನೀರು ಬಿಟ್ಟ ಮತ್ತೊಂದು ಬಲಾಢ್ಯ ದೇಶ !

ನಮಸ್ಕಾರ ಸ್ನೇಹಿತರೇ, ಇದೀಗ ಅಮೇರಿಕಾ ದೇಶ ಮತ್ತೊಮ್ಮೆ ಗೆದ್ದು ಬೀಗಿದೆ. ಜಾಗತಿಕ ಮಟ್ಟದಲ್ಲಿ ತನ್ನ ತಾಕತ್ತು ಏನು ಎಂಬುದನ್ನು ಚೀನಾ ದೇಶಕ್ಕೆ ಮತ್ತೊಮ್ಮೆ ಮನದಟ್ಟು ಮಾಡಿಕೊಟ್ಟಿದೆ. ಇದರಿಂದ ಚೀನಾ ದೇಶ ಅತಿ ದೊಡ್ಡ ಕನಸಿಗೆ ಎಲ್ಲಾ ಬಲಾಢ್ಯ ದೇಶಗಳು ಎಳ್ಳು ನೀರು ಬಿಟ್ಟಂತಾಗಿದ್ದು ಕಳೆದ 2019 ರಲ್ಲಿ ಬರೋಬ್ಬರಿ 1.20 ಲಕ್ಷ ಕೋಟಿ ವ್ಯವಹಾರ ಮಾಡಿದ್ದ ಕಂಪನಿ ಈ ವರ್ಷ ಬಹುತೇಕ ಕೊನೆಗೊಳ್ಳುವ ಸ್ಥಾನಕ್ಕೆ ಬಂದು ತಲುಪಿದೆ. ಇದರಿಂದ ವಿಶ್ವದಲ್ಲಿಯೇ ತನ್ನ ಟೆಕ್ನಾಲಜಿ ಮೂಲಕ ಇತರ ದೇಶಗಳ ಮೇಲೆ ತನ್ನ ನಿಯಂತ್ರಣವನ್ನು ಹೆಚ್ಚು ಮಾಡಲು ಪ್ರಯತ್ನ ಪಡುತಿದ್ದ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ. ಅಷ್ಟೇ ಅಲ್ಲದೇ ತಾನೇ ಎಲ್ಲಾ ಎಂದು ಕೊಂಡರೇ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

ಹೌದು ಸ್ನೇಹಿತರೇ, ಇದೀಗ ಚೀನಾ ದೇಶದ ಮೇಲೆ ಮೃದು ಧೋರಣೆ ತೋರುತ್ತಿದ್ದ ಬ್ರಿಟನ್ ದೇಶದ ಮೇಲೆ ಅಮೇರಿಕ ದೇಶವು ಸತತ ಮಾತುಕತೆ ನಡೆಸುವ ಮೂಲಕ ಚೀನಾ ದೇಶ ದೈತ್ಯ ಕಂಪೆನಿಗಳಲ್ಲಿ ಒಂದಾದ ಹೂವಾಯಿ ಕಂಪನಿಯನ್ನು ಕೊನೆಗೂ ಅಧಿಕೃತವಾಗಿ ಸಂಪೂರ್ಣ ವಾಗಿ ಹೊರಹಾಕುವುದಾಗಿ ಘೋಷಣೆ ಮಾಡುವಂತೆ ಮಾಡಿದೆ. ಇಷ್ಟು ದಿವಸ ಸ್ವಲ್ಪದರ ಮಟ್ಟಿಗೆ ನಿಷೇಧ ಏರುತ್ತೇವೆ ಎನ್ನುತ್ತಿದ್ದ ಬ್ರಿಟನ್ ದೇಶದ ಮೇಲೆ ಅಮೇರಿಕ ದೇಶ ಯಾವುದೇ ಕಾರಣಕ್ಕೂ ಸಂಪೂರ್ಣ ನಿಷೇದ ಏರದೇ ಬಿಡಬಾರದು ಎಂದು ಪಟ್ಟು ಹಿಡಿದು ಕುಳಿತಿತ್ತು. ಅಷ್ಟೇ ಅಲ್ಲದೇ ಚೀನಾ ದೇಶ ಕೂಡ ಬ್ರಿಟನ್ ದೇಶದ ಜೊತೆ ಮಾತುಕತೆ ಹಲವಾರು ಸಭೆಗಳ ಮೂಲಕ ಮಾತುಕತೆ ನಡೆಸಿ, ಹೇಗಾದರೂ ಮಾಡಿ ಸಂಪೂರ್ಣ ನಿಷೇಧದಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಮಾಡುತಿತ್ತು. ಆದರೆ ಇದೀಗ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಹಾಗೂ ಬ್ರಿಟನ್ ಅಧಿಕೃತ ಆದೇಶ ಹೊರಡಿಸುವ ಮೂಲಕ ಚೀನಾ ದೇಶಕ್ಕೆ ಮತ್ತೊಂದು ಶಾಕ್ ನೀಡಿದೆ.

ಈಗಾಗಲೇ ಜಪಾನ್, ಅಮೇರಿಕ, ಫ್ರಾನ್ಸ್, ಭಾರತ, ಬ್ರೆಜಿಲ್ ಸೇರಿದಂತೆ ವಿಶ್ವದ ಹಲವಾರು ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದು, ಚೀನಾ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಸಂಪೂರ್ಣ ಬೆಂಬಲ ಕಡಿಮೆ ಯಾಗಿದೆ. ಇಷ್ಟು ದಿವಸ ಹಲವಾರು ಒಪ್ಪಂದಗಳ ಮೂಲಕ ರಷ್ಯಾ ಬಳಗ ಸೇರಲು ಪ್ರಯತ್ನ ಪಟ್ಟಿದ್ದ ಚೀನಾ ದೇಶವು ಭಾರತಕ್ಕೆ ಅಗತ್ಯವಾದ ಮಿಲಿಟರಿ ಉಪ್ಪಕರಣಗಳನ್ನು ಕಳುಹಿಸಿ ಕೊಡಲು ಒಪ್ಪಿದ ತಕ್ಷಣ ರಷ್ಯಾ ದೇಶದ ಜೊತೆಗೂ ಗಡಿ ಕ್ಯಾತೆ ತೆಗೆದು ಸಂಬಂಧ ಹದೆಗೆಡಿಸಿಕೊಂಡಿದೆ. ಒಟ್ಟಿನಲ್ಲಿ ಇದೀಗ ಯಾವುದೋ ನಾಲ್ಕು ಇದೇ ರೀತಿ ನ-ರಿ ಬುದ್ದಿ ದೇಶಗಳ ಸಂಬಂಧ ಬಿಟ್ಟರೇ ಚೀನಾ ಬಹುತೇಕ ಒಬ್ಬಂಟಿಯಾಗಿದೆ. ಇದು ಹೀಗೆ ಮುಂದುವರೆದರೇ, ಚೀನಾ ದೇಶಕ್ಕೆ ಪಾಕ್ ನಂತೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.