ಭಾರತದ 4 ನೇ ಕ್ರಮಾಂಕಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ ಮೊಹಮದ್ ಕೈಫ್ ! ಆಯ್ಕೆಯಾದ ಆಟಗಾರ ಯಾರು ಗೊತ್ತಾ?

ಭಾರತದ 4 ನೇ ಕ್ರಮಾಂಕಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ ಮೊಹಮದ್ ಕೈಫ್ ! ಆಯ್ಕೆಯಾದ ಆಟಗಾರ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಕ್ರಿಕೆಟ್ ತಂಡದ ನಾಲ್ಕನೇ ಕ್ರಮಾಂಕದ ಕುರಿತು ಕೆಲವು ವರ್ಷಗಳಿಂದ ಬಾರಿ ಚರ್ಚೆ ನಡೆಯುತ್ತಿದೆ. ಹಲವಾರು ಆಟಗಾರರು ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ತಂಡದಲ್ಲಿ ಕಾಯಂ ಸದಸ್ಯತ್ವ ಪಡೆಯಲು ಪ್ರಯತ್ನಿಸಿದರೂ ಕೂಡ ಯಾರು ಸಂಪೂರ್ಣ ಭರವಸೆ ಮೂಡಿಸಿಲ್ಲ, ಕೆಲವು ಆಟಗಾರರು ಸಂಪೂರ್ಣ ವಿಫಲರಾದರೇ ಕೆಲವರು ಕೊಂಚ ಭರವಸೆ ಮೂಡಿಸಿದ್ದಾರೆ. ಆದರೆ ಅವರಿಗೆ ಕಾಯಂ 4 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಅನುಮಾನ ಇನ್ನು ಆಯ್ಕೆ ಸಮಿತಿಯ ಸದಸ್ಯರಲ್ಲಿ ಮೂಡುತ್ತಿದೆ. ರಾಹುಲ್ ರವರು ಉತ್ತಮ ಪ್ರದರ್ಶನ ನೀಡಿದರೂ ಕೂಡ ರಾಹುಲ್ ರವರನ್ನು ಆರಂಭಿಕ ಆಟಗಾರನಾಗಿ ನೋಡಬೇಕು ಎಂಬುದು ತಂಡದ ಲೆಕ್ಕಾಚಾರ.

ಈತನ್ಮದ್ಯೆ ವಿಜಯ್ ಶಂಕರ್, ರಿಷಬ್ ಪಂತ್, ಅಂಬಟಿ ರಾಯುಡು ಹಾಗೂ ಶ್ರೇಯಸ್ ಅಯ್ಯರ್ ರವರು ಈ ಸ್ಥಾನದಲ್ಲಿ ತಮ್ಮ ಪ್ರತಿಭೆಯನ್ನು ನಿರೂಪಿಸಲು ಅವಕಾಶ ಪಡೆದಿದ್ದರು. ಆದರೆ ಶ್ರೇಯಸ್ ಅಯ್ಯರ್ ರವರನ್ನು ಹೊರತು ಪಡಿಸಿದರೇ ಉಳಿದ ಇನ್ಯಾವುದೇ ಆಟಗಾರರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮೊದಲಿಗೆ ಶ್ರೇಯಸ್ ಅಯ್ಯರ್ ರವರು ಕೂಡ ವಿಫಲವಾದರು, ಆದರೆ ಇತ್ತೀಚಿಗೆ ಕೆಲವೊಂದು ಪಂದ್ಯಗಳಲ್ಲಿ ಗಮನೀಯ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸುತ್ತಿದ್ದಾರೆ. ಆದರೆ ಅವರಿಂದ ಇನ್ನು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದೆ ಆಯ್ಕೆ ಸಮಿತಿ. ಈ ಎಲ್ಲದರ ನಡುವೆ ಹಲವಾರು ಕ್ರಿಕೆಟ್ ದಿಗ್ಗಜರು, ತಮ್ಮದೇ ಆದ ಅಭಿಪ್ರಾಯಗಳ ಮೂಲಕ ಈ ಸ್ಥಾನದ ಕುರಿತು ಮಾತನಾಡುತ್ತಿದ್ದಾರೆ. ಅದರಂತೆಯೇ ಇದೀಗ ಮೊಹಮದ್ ಕೈಫ್ ರವರು ಕೂಡ ಮಾತನಾಡಿದ್ದು ಈ ರೀತಿ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ಅತಿ ಗಮನ ಸೆಳೆದಿರುವ 4 ನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ರವರು ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ, ಯಾಕೆಂದರೆ ಅವರಿಗೆ ಉತ್ತಮ ಟ್ಯಾಲೆಂಟ್ ಇದೆ. ಅಷ್ಟೇ ಅಲ್ಲದೇ ಸಾಧಿಸಬೇಕು ಎಂಬ ಛಲವಿದೆ. ಇವರು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾಗಲು ಸಾಕಷ್ಟು ಶ್ರಮಿಸಿದ್ದಾರೆ. ಹಲವಾರು ವರ್ಷಗಳ ನಿರಂತರ ಉತ್ತಮ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲವು ಬಹಳ ಅದೃಷ್ಟದಿಂದ ಕೆಲವೊಂದು ಪಂದ್ಯಗಳಲ್ಲಿ ಹೀರೊ ಆಗಿ ಸ್ಥಾನ ಪಡೆದಿರುತ್ತಾರೆ. ಆದರೆ ಶ್ರೇಯಸ್ ಅಯ್ಯರ್ ರವರು, ದೇಶಿಯ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಹಲವಾರು ವರ್ಷಗಳ ಕಾಲ ಸತತ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಯ್ಕೆಯಾಗಿರುವ ಕಾರಣ ಇವರಿಗೆ ಕೊಂಚ ಅವಕಾಶ ನೀಡಿ, ಬೆಳೆಸಿದ್ದಲ್ಲಿ ಖಂಡಿತಾ ಕಾಯಂ ಸದಸ್ಯರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.